ನಟರಾದ ಸುಶಾಂತ್​ ಸಿಂಗ್​ ಮತ್ತು ಸಿದ್ಧಾರ್ಥ್​ ಶುಕ್ಲಾ ಮೃತಪಟ್ಟಿದರೂ ಟ್ವಿಟರ್​ ಖಾತೆಯಲ್ಲಿ ಇನ್ನು ಬ್ಲೂ ಟಿಕ್​

ಬೆಂಗಳೂರು: ‘ನಗುಮುಖದ ರಾಜಕುಮಾರ’, ಸ್ಯಾಂಡಲ್​ವುಡ್​ನ ‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಬಾರದ ಲೋಕಕ್ಕೆ ಹೋಗಿ 8 ತಿಂಗಳು ಕಳೆದರೂ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ನೋವು ಮಾತ್ರ ಕರಗಿಲ್ಲ. ಅಪ್ಪು ಫೋಟೋವನ್ನು ಅಸಂಖ್ಯಾತ ಜನರು ಮನೆಗಳಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ.

ಪುನೀತ್​ ಭೂತಾಯಿಯ ಮಡಿಲು ಸೇರಿದ್ದರೂ ಅಭಿಮಾನಿಗಳಿಗೆ ಅವರ ಮೇಲಿರುವ ಪ್ರೀತಿ ಕಿಂಚಿತ್ತೂ ಕರಗಿಲ್ಲ. ಆದರೆ, ಈ ಸುದ್ದಿ ಅಪ್ಪು ಅಭಿಮಾನಿಗೆ ಕೊಂಚ ಬೇಸರ ಉಂಟು ಮಾಡುವುದಂತೂ ನಿಜ.

ಹೌದು, ಇದುವರೆಗೂ ಪುನೀತ್​ ರಾಜ್​ಕುಮಾರ್ ಅವರ ಅಧಿಕೃತ​ ಟ್ವಿಟರ್ ಖಾತೆಯಲ್ಲಿದ್ದ ಬ್ಲೂ ಟಿಕ್​ ಅನ್ನು ಇದೀಗ ತೆಗೆದು ಹಾಕಲಾಗಿದೆ. ಈ ಸಂಗತಿ ಪುನೀತ್​ ಫ್ಯಾನ್ಸ್​ಗೆ ಬೇಸರ ತರಿಸಿದೆ. ಹೀಗಾಗಿ ಟ್ವಿಟರ್​ನಲ್ಲಿ ಅಭಿಮಾನಿಗಳು ತಮ್ಮ ನೋವನ್ನು ವ್ಯಕ್ತಪಡಿಸುತ್ತಿದ್ದಾರೆ.

ಬಾಲಿವುಡ್​ ನಟರಾದ ಸುಶಾಂತ್​ ಸಿಂಗ್​ ರಜಪೂತ್​ ಮತ್ತು ಸಿದ್ಧಾರ್ಥ್​ ಶುಕ್ಲಾ ಮೃತಪಟ್ಟಿದರೂ ಕೂಡ ಅವರ ಟ್ವಿಟರ್​ ಖಾತೆಯಲ್ಲಿ ಇನ್ನು ಬ್ಲೂ ಟಿಕ್​ ಇರುವುದು ಪುನೀತ್​ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಟ್ವಿಟರ್​ ಅನ್ನು ಪ್ರಶ್ನೆ ಮಾಡಿ ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಟ್ವಿಟರ್​ ಕಂಪನಿ ಅಭಿಮಾನಿಗಳನ್ನು ನೋಯಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಈ ಕ್ಷಣದಲ್ಲಿ ಬ್ಲೂ ಟಿಕ್​ ಮರಳಿಸಿ ಎಂದು ಟ್ವಿಟರ್​ ಅನ್ನು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಇದಕ್ಕಾಗಿ ಅಭಿಮಾನಿಗಳು ಪುನೀತ್​ ರಾಜ್​ಕುಮಾರ್​ ಹೆಸರಲ್ಲಿ ಟ್ರೆಂಡ್​ ಮಾಡಲು ನಿರ್ಧಾರ ಮಾಡಿದ್ದಾರೆ. ಕೊನೆಯ ಪಕ್ಷ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮೇಡಂ ಅವರ ಗಮನಕ್ಕೆ ಈ ವಿಚಾರವನ್ನು ತನ್ನಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ಸಾಕಷ್ಟು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ. ಇಂದು ಪುನೀತ್​ ನಮ್ಮ ನಡುವೆ ಇಲ್ಲದಿದ್ದರೂ ಅವರ ಮೇಲಿನ ಅಭಿಮಾನ ಮಾತ್ರ ಅಭಿಮಾನಿಗಳಿಗೆ ಕಿಂಚಿತ್ತೂ ಕಡಿಮೆ ಆಗಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

'ಆಚಾರ್ಯ' ವಿತರಕರ ಆಕ್ರೋಶಕ್ಕೆ ಮಣಿದ ಮೆಗಾ ಕುಟುಂಬ:

Thu Jul 14 , 2022
ಈ ಸಿನಿಮಾಗಾಗಿ ಕೆಲಸ ಮಾಡಿದವರೆಲ್ಲಾ ದಿಗ್ಗಜರೇ. ಒಂದ್ಕಡೆ ಮೆಗಾಸ್ಟಾರ್ ಚಿರಂಜೀವಿ. ಇನ್ನೊಂದ್ಕಡೆ ಮೆಗಾ ಪವರ್‌ಸ್ಟಾರ್ ರಾಮ್‌ಚರಣ್ ತೇಜಾ. ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನಿರ್ದೇಶ ಕೊರಟಾಲ ಶಿವ. ಈ ಮೂವರ ಮಹಾ ಸಂಗಮದ ಹೊರತಾಗಿಯೂ ‘ಆಚಾರ್ಯ’ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಲಿಲ್ಲ. ‘ಆಚಾರ್ಯ’ ಸಿನಿಮಾ ಮೆಗಾ ಹೀರೊಗಳ ನಿರೀಕ್ಷೆ ದುಪ್ಪಟ್ಟು ಮಾಡಿತ್ತು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತೆ ಅಂತಲೇ ನಂಬಲಾಗಿತ್ತು. ಆದರೆ, ಸಿನಿಮಾ ಬಿಡುಗಡೆಯಾದ ದಿನವೇ ನೆಗೆಟಿವ್ ಒಪಿನಿಯನ್ ಬಂದಿದ್ದರಿಂದ ಬಾಕ್ಸಾಫೀಸ್‌ನಲ್ಲಿ ಮತ್ತೆ […]

Advertisement

Wordpress Social Share Plugin powered by Ultimatelysocial