ಕಾಂಗ್ರೆಸ್ ವಿರುದ್ಧ ಲಿಂಗಾಯತ ಅಸ್ತ್ರ ಪ್ರಯೋಗಿಸಿದ ಅಮಿತ್ ಶಾ..!

*ಲಿಂಗಾಯತ ದಾಳ ಉರುಳಿದ ಕೇಂದ್ರ ಸಚಿವ ಅಮಿತ್ ಶಾ. *ತೇರದಾಳ ವಿಧಾನಸಭಾ ಕ್ಷೇತ್ರದ ರಬಕವಿಯಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದ  ಅಮಿತ್ ಶಾ,  *ಕಾಂಗ್ರೆಸ್ ವಿರುದ್ಧ ಲಿಂಗಾಯತ ಅಸ್ತ್ರ ಪ್ರಯೋಗಿಸಿದ ಅಮಿತ್ ಶಾ,  *ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿದ ಅಮಿತ್ ಶಾ

ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಬಕವಿ ನಗರದಲ್ಲಿಂದು ಕೇಂದ್ರ ಸಚಿವ ಅಮಿತ್ ಶಾ ಅವರು ಚುನಾವಣಾ ಪ್ರಚಾರದಲ್ಲಿ ಭಾಗಿಯಾದರು. ಬನಹಟ್ಟಿ ನಗರದ ಸಮೀಪ ನಿರ್ಮಿಸಲಾಗಿದ್ದ ಹೆಲಿಪಾಡ್ ಗೆ ಬಂದು ಹೇಳಿದ ಕೇಂದ್ರ ಸಚಿವ ಅಮಿತ್ ಶಾ ಅವರು ರಬಕವಿಯ ವರೆಗೂ ರೋಡ್ ಶೋ ನಡೆಸಿದರು. ನಂತರ ರಬಕವಿ ನಗರದ ಎಂವಿ ಪಟ್ಟಣ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಅವರು ಭಾಗಿಯದ್ರು.

ಕೈ ಮಗ್ಗದಿಂದ ಬಟ್ಟೆಯನ್ನ ನೇಯುದರ ಮೂಲಕ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು. ಮುಧೋಳ ಕ್ಷೇತ್ರದ ಅಭ್ಯರ್ಥಿ ಸಚಿವ ಗೋವಿಂದ ಕಾರಜೋಳ್, ಬೀಳಗಿ ಕ್ಷೇತ್ರದ ಅಭ್ಯರ್ಥಿ ಮುರುಗೇಶ್ ನಿರಾಣಿ, ತೇರದಾಳ ಅಭ್ಯರ್ಥಿ ಸಿದ್ದು ಸವದಿ, ಜಮಖಂಡಿಯ ಬಿಜೆಪಿಯ ಅಭ್ಯರ್ಥಿ ಜಗದೀಶ್ ಗುಡಗುಂಟಿ ಅವರ ಪರ ಮತ ಯಾಚನೆ ಮಾಡಿದ್ರು. ಇದೆ ಬೆಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿಯನ್ನ ನಡೆಸಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವ್ಯಂಗ್ಯವಾಡಿದರು. ಇವರಿಬ್ಬರು ಮುಖ್ಯಮಂತ್ರಿ ಆಗಲು ಜಗಳವಾಡುತ್ತಿದ್ದಾರೆ. ಆದ್ರೆ ಮುಖ್ಯಮಂತ್ರಿ ಆಗಲು ನಿಮ್ಮ ನಂಬರ್ ಇನ್ನೊಂದಿಲ್ಲ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು. ನಮ್ಮ ಇಬ್ಬರು ನಾಯಕರು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷವನ್ನ ಸೇರ್ಪಡೆಗೊಂಡಿದ್ದಾರೆ, ಅವರನ್ನ ಮುಂದಿಟ್ಟುಕೊಂಡು ಕಾಂಗ್ರೆಸ್ ಮತವನ್ನ ಕೇಳಲು ಮುಂದಾಗುತ್ತಿದೆ ಕಾಂಗ್ರೆಸ್ಸಿಗರ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್ಸಿಗರಿಂದ ಲಿಂಗಾಯತರಿಗೆ ಮೇಲಿಂದ ಮೇಲೆ ಅಪಮಾನವಾಗುತ್ತಿದೆ, ಈ ಹಿಂದೆಯೂ ಕೂಡ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲರಿಗೂ ಅಪಮಾನ ಮಾಡಿ ಪಕ್ಷದಿಂದ ಹೊರ ಹಾಕಿದ್ರು , ಕಾಂಗ್ರೆಸ್ ಲಿಂಗಾಯತರ ಅಪಮಾನ ಮಾಡುತ್ತಿದೆ ಎಂದು ಹೇಳಿದ್ರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇಶದಲ್ಲಿ 50 ವರ್ಷಗಳ ಇತಿಹಾಸದಲ್ಲಿ ಕಾಂಗ್ರೆಸ್ ಕೊಡುಗೆ ಶೂನ್ಯ..!

Wed Apr 26 , 2023
ಕಾಗವಾಡ್ ಕ್ಷೇತ್ರಕ್ಕೆ ಕೇಂದ್ರ ಸಚಿವ ರಾಜನತಾಥ ಸಿಂಗ ಆಗಮನ. ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಕ್ಷೇತ್ರದಲ್ಲಿ ಅಬ್ಬರೀದ ರಾಜನಾಥ ಸಿಂಗ್,  ದೇಶದಲ್ಲಿ 50 ವರ್ಷಗಳ ಇತಿಹಾಸದಲ್ಲಿ ಕಾಂಗ್ರೆಸ್ ಕೊಡುಗೆ ಶೂನ್ಯ. ಸುಭದ್ರ ಭಾರತಕ್ಕಾಗಿ ಬಿಜೆಪಿ ಅಭ್ಯರ್ಥಿ ಗೆ ಮತ ನೀಡಿ. ಶ್ರೀಮಂತ ಪಾಟೀಲ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಅವರ ಮೇಲಿರಲಿ, ಬಿಜೆಪಿ ಪಕ್ಷ ಬಡವರ ಪಕ್ಷ ದೇಶದಲ್ಲಿ ವೆವಸ್ಥಿತ ರಸ್ತೆ, ನೀರು, ಗಡಿ ಭದ್ರತೆ […]

Advertisement

Wordpress Social Share Plugin powered by Ultimatelysocial