COVID:ಕೊರೊನಾ ಸಂದರ್ಭದಲ್ಲಿ ಅತಿ ಹೆಚ್ಚು ಬಳಕೆಯಾದ ʼಡೋಲೋ 650ʼ;

ಅಂತೂ ಇಂತೂ, ಸಾಂಕ್ರಾಮಿಕ ರೋಗ ಕೊನೆಗೊಂಡಿದೆ ಎಂದು ನೀವು ನಂಬಿದ್ದರೆ, ಅದು ನಿಮ್ಮ ತಪ್ಪು ಕಲ್ಪನೆ. ಕೊರೋನಾ ವೈರಸ್, ಹೊಸ ರೂಪಾಂತರಗಳೊಂದಿಗೆ ಹೊಸ ದಾಖಲೆಗಳನ್ನ ಬರೆಯುತ್ತಲೆ ಇದೆ. ಒಮಿಕ್ರಾನ್ ರೂಪಾಂತರವಂತು ಇಡೀ ವಿಶ್ವವನ್ನೇ ವೈರಸ್ ಮತ್ತೊಂದು ಸುತ್ತು ಹೊಡೆಯುವಂತೆ ಮಾಡಿದೆ.

ಭಾರತದಲ್ಲಿ, ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಡೋಲೋ 650 ಔಷಧಕ್ಕೆ ಬೇಡಿಕೆ ಹೆಚ್ಚಿದೆ. ಡೋಲೋ 650 ಒಂದು ಜನಪ್ರಿಯ ನೋವು ನಿವಾರಕವಾಗಿದ್ದು ಅದು ಬಹುತೇಕ ಪ್ರತಿಯೊಂದರಲ್ಲೂ ಕಂಡುಬರುತ್ತದೆ. ನೋವು ಮತ್ತು ಜ್ವರಗಳಿಗೆ ಚಿಕಿತ್ಸೆ ನೀಡಲು ಈ ಔಷಧಿಯನ್ನ ಬಳಸಲಾಗುತ್ತದೆ. ಡೇಟಾ ಪ್ರಕಾರ, 2020ರ ನಂತರ ಭಾರತದಲ್ಲಿ 3.5 ಶತಕೋಟಿ ಜ್ವರದ ಮಾತ್ರೆಗಳನ್ನು ಮಾರಾಟ ಮಾಡಿದೆ.

ಕೊರೋನಾದ ಸಾಮಾನ್ಯ ಲಕ್ಷಣಗಳಲ್ಲಿ ಒಂದಾದ ಜ್ವರವು ಕಳೆದ ಎರಡು ವರ್ಷಗಳಲ್ಲಿ ಈ ಮಾತ್ರೆಯ ಮಾರಾಟವನ್ನು ಮೂರು ಪಟ್ಟು ಹೆಚ್ಚಿಸಿದೆ. ಆದರೆ ಪ್ಯಾರೆಸಿಟಮಾಲ್ ಮಾತ್ರೆಗಳು ಸಾಮಾನ್ಯವಾಗಿ ಶೀತ ಮತ್ತು ಜ್ವರಕ್ಕೆ ಬಳಸುವ ಚಿಕಿತ್ಸೆಗಳಾಗಿವೆ.‌ ಮಾರ್ಚ್ 2020 ರಿಂದ ಅಂದ್ರೆ ಸಾಂಕ್ರಾಮಿಕ ಶುರುವಾದಾಗಿಂದ, ಡೊಲೊ 650‌ ಮಾತ್ರ ಒಂದರಿಂದ 5.7 ಶತಕೋಟಿ ರೂಪಾಯಿಗಳ ಆದಾಯ ಗಳಿಸಿದೆ. ಪ್ಯಾರಸಿಟಮಾಲ್ ಮಾತ್ರೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೋಲೋ 650 ಅನ್ನು ಭಾರತೀಯರ “ಮೆಚ್ಚಿನ ಸ್ನಾಕ್ಸ್” ಎಂದು ಕರೆಯಲಾಗುತ್ತಿದೆ.

ಭಾರತದಲ್ಲಿ‌ ಮಾರಾಟವಾಗಿರುವ, 3.5 ಶತಕೋಟಿ ಮಾತ್ರೆಗಳನ್ನು ಉದ್ದವಾಗಿ ಜೋಡಿಸಿದರೆ, ಅದು ವಿಶ್ವದ ಅತಿ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್‌ನ ಸುಮಾರು 6,000 ಪಟ್ಟು ಎತ್ತರ ಅಥವಾ ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ 63,000 ಪಟ್ಟು ಎತ್ತರವಾಗಿರುತ್ತದೆ. ಹೌದು, ನಂಬಲಸಾಧ್ಯವಾದರು ಇದು ಸತ್ಯ. ಕಳೆದ ಎರಡು ವರ್ಷಗಳಲ್ಲಿ, 1.5 ಸೆಂ.ಮೀ ಉದ್ದದ ಪ್ಯಾರಸಿಟಮಾಲ್ ಟ್ಯಾಬ್ಲೆಟ್ ಡೋಲೋ, ಕ್ರೋಸಿನ್ ಗಿಂತ ಹೆಚ್ಚು ಮಾರಾಟವಾಗಿದೆ.

ಸಂಶೋಧನಾ ಸಂಸ್ಥೆ IQVIA ಯ ಅಂಕಿಅಂಶಗಳ ಪ್ರಕಾರ, 2019 ರಲ್ಲಿ ಕೊರೋನಾ ಬರುವುದಕ್ಕೂ ಮುನ್ನ ಭಾರತದಲ್ಲಿ ಸುಮಾರು 75 ಮಿಲಿಯನ್ ಡೋಲೋ ಮಾತ್ರೆಗಳ ಮಾರಾಟವಾಗಿದೆ.‌ ಆದರೆ ಕೊರೋನಾ ನಂತರ ಔಷಧದ ವಾರ್ಷಿಕ ಮಾರಾಟವು 94 ಮಿಲಿಯನ್ ಸ್ಟ್ರಿಪ್‌ಗಳಿಗೆ (ಪ್ರತಿ ಸ್ಟ್ರಿಪ್ 15 ಮಾತ್ರೆಗಳನ್ನು ಒಳಗೊಂಡಿರುತ್ತದೆ) ಅಥವಾ 1.4 ಶತಕೋಟಿ ಮಾತ್ರೆಗಳಿಗೆ ಏರಿಕೆ ಆಯಿತು. ನವೆಂಬರ್ 2021 ರ ಹೊತ್ತಿಗೆ, ಡೋಲೊ 650‌ ಮಾರಾಟ 145 ಮಿಲಿಯನ್ ಸ್ಟ್ರಿಪ್‌ಗಳಿಗೆ ಅಥವಾ 2.2 ಬಿಲಿಯನ್ ಟ್ಯಾಬ್ಲೆಟ್‌ಗಳಿಗೆ ಏರಿದೆ.

ಎರಡೂ ವರ್ಷಗಳಲ್ಲಿ, 350 ಕೋಟಿಗೂ ಹೆಚ್ಚು ಡೋಲೋ ಮಾತ್ರೆಗಳು ಮಾರಾಟವಾಗಿದ್ದು, ಡೋಲೋ ಭಾರತದ ಎರಡನೇ ಅತ್ಯಂತ ಜನಪ್ರಿಯ ಜ್ವರ-ವಿರೋಧಿ ಮತ್ತು ನೋವು ನಿವಾರಕ ಟ್ಯಾಬ್ಲೆಟ್ ಆಗಿದೆ. 2021 ರಲ್ಲಿ 3.1 ಬಿಲಿಯನ್ ವಹಿವಾಟು ನಡೆಸುತ್ತಿರುವ ಡೋಟೊ, 3.1 ಬಿಲಿಯನ್ ವಹಿವಾಟು ಹೊಂದಿರುವ ಜಿಎಸ್‌ಕೆ ಕ್ಯಾಲ್ಪೋಲ್‌ಗಿಂತ ಮುಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

CM:ಕೋವಿಡ್ ನಿರ್ವಹಣೆ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸೂಚನೆ;

Tue Jan 18 , 2022
ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ( CM Basavaraj Bommai ) ಕೋವಿಡ್ ಹೆಚ್ಚಿರುವಂತ, ಲಸಿಕಾಕರಣದಲ್ಲಿ ( Vaccine Drive ) ಹಿಂದೆ ಉಳಿದಿರುವಂತ 18 ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಕೋವಿಡ್ ನಿಯಂತ್ರಣ ( Covid19 Control ), ಲಸಿಕಾಕರಣದ ಬಗ್ಗೆ ಡಿಸಿಗಳಿಗೆ ಮಹತ್ವದ ಸೂಚನೆಯನ್ನು ಕೂಡ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು 18 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಹತ್ವದ ಸಭೆಯನ್ನು […]

Advertisement

Wordpress Social Share Plugin powered by Ultimatelysocial