CM:ಕೋವಿಡ್ ನಿರ್ವಹಣೆ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸೂಚನೆ;

ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ( CM Basavaraj Bommai ) ಕೋವಿಡ್ ಹೆಚ್ಚಿರುವಂತ, ಲಸಿಕಾಕರಣದಲ್ಲಿ ( Vaccine Drive ) ಹಿಂದೆ ಉಳಿದಿರುವಂತ 18 ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.

ಈ ಸಭೆಯಲ್ಲಿ ಕೋವಿಡ್ ನಿಯಂತ್ರಣ ( Covid19 Control ), ಲಸಿಕಾಕರಣದ ಬಗ್ಗೆ ಡಿಸಿಗಳಿಗೆ ಮಹತ್ವದ ಸೂಚನೆಯನ್ನು ಕೂಡ ನೀಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು 18 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಹತ್ವದ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಅನೇಕರ ಅಧಿಕಾರಿಗಳು, ತಜ್ಞರು ಕೂಡ ಭಾಗವಹಿಸಿದ್ದರು. ಕೊರೋನಾ ನಿಯಂತ್ರಣ ಹಾಗೂ ಲಸಿಕಾಕರಣದ ತ್ವರಿತಗತಿಯ ಬಗ್ಗೆಯೂ ಚರ್ಚಿಸಲಾಯಿತು.

ಇನ್ನೂ ಕೊರೋನಾ ಪರೀಕ್ಷೆ ಹೆಚ್ಚಳಗೊಳಿಸುವಂತೆಯೂ ಜಿಲ್ಲಾಡಳಿತಕ್ಕೆ ಸೂಚಿಸಿದಂತ ಸಿಎಂ, ಕೋವಿಡ್ ತೀವ್ರಗತಿಯ ಈ ಸಂದರ್ಭದಲ್ಲಿ ಲಸಿಕಾಕರಣವನ್ನು ತ್ವರಿತಗೊಳಿಸುವಂತೆಯೂ ಸೂಚಿಸಿದರು. ಅಲ್ಲದೇ ಶೇ.100ರಷ್ಟು ಮೊದಲ ಡೋಲ್ ಲಸಿಕೆಯ ಗುರಿಯನ್ನು ಸಾಧಿಸುವಂತೆ ನಿರ್ದೇಶಿಸಿದರು.

ಇದಷ್ಟೇ ಅಲ್ಲದೇ 2ನೇ ಡೋಸ್ ಲಸಿಕೆಯನ್ನು ಚುರುಕುಗೊಳಿಸುವಂತೆ ಸೂಚಿಸಿದ ಅವರು, ಆಸ್ಪತ್ರೆಗಳ ಮೂಲ ಸೌಕರ್ಯದ ಬಗ್ಗೆ ಈಗಿನಿಂದಲೇ ಗಮನ ಹರಿಸುವಂತೆಯೂ ನಿರ್ದೇಶಿಸಿದರು. ಈ ಮೂಲಕ ಕೊರೋನಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಖಡಕ್ ಸೂಚನೆ ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

CYBER CRIME:ನಿಮಗೆ ಗೊತ್ತಿಲ್ಲದೇ ಖಾತೆಯಲ್ಲಿ ಹಣ ಡ್ರಾ ಆಯ್ತಾ? ಹೀಗೆ ಮಾಡಿದ್ರೆ 72 ಗಂಟೆಯಲ್ಲಿ ಮತ್ತೆ ವಾಪಾಸ್‌ ಆಗುತ್ತೆ;

Tue Jan 18 , 2022
ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಜಗತ್ತು ಡಿಜಿಟಲೀಕರಣದತ್ತ ಸಾಗುತ್ತಿರುವಂತೆಯೇ, ಆನ್‌ಲೈನ್ ವಂಚನೆಯ ಪ್ರಕರಣಗಳು ಸಹ ಅದೇ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಬಹುತೇಕ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ. ಈ ಮಧ್ಯೆ, ಆನ್‌ಲೈನ್ ವಂಚನೆ ಕೂಡ ವೇಗವಾಗಿ ಹೆಚ್ಚುತ್ತಿದೆ. ವಂಚಕರು ಜನರ ಖಾತೆಯಲ್ಲಿರುವ ಎಲ್ಲ ಮಾಹಿತಿ ಪಡೆದು ಅವರ ಖಾತೆಯಿಂದ ಹಣ ಕಿತ್ತುಕೊಳ್ಳುತ್ತಿದ್ದಾರೆ. ವಂಚನೆಯನ್ನು ತಕ್ಷಣವೇ ವರದಿ ಮಾಡುವ ಮೂಲಕ ನೀವು ನಷ್ಟವನ್ನು ತಪ್ಪಿಸಬಹುದು. ದೂರು ನೀಡುವುದು ಹೇಗೆ ಎಂದು ತಿಳಿಯೋಣನಿಮ್ಮ ಖಾತೆಯಿಂದ […]

Advertisement

Wordpress Social Share Plugin powered by Ultimatelysocial