ಭಾರತದಲ್ಲಿ ನೊವಾವ್ಯಾಕ್ಸ್, ಕೋರ್ಬೆವ್ಯಾಕ್ಸ್‌ಗೆ ಅನುಮತಿ: ಇದರಿಂದ ಮಕ್ಕಳಿಗೆ ಸಿಗಲಿದೆ ಕೊರೊನಾ ಲಸಿಕೆ

ಭಾರತದಲ್ಲಿ ನೊವಾವ್ಯಾಕ್ಸ್, ಕೋರ್ಬೆವ್ಯಾಕ್ಸ್‌ಗೆ ಅನುಮತಿ: ಇದರಿಂದ ಮಕ್ಕಳಿಗೆ ಸಿಗಲಿದೆ ಕೊರೊನಾ ಲಸಿಕೆ

ಕೊರೊನಾ ಆತಂಕ ಮುಗೀತು ಎಂದು ಒಂದೆರಡು ತಿಂಗಳು ನಿಟ್ಟಿಸಿರು ಬಿಡುವಷ್ಟರಲ್ಲಿ ಮತ್ತೆ ಕೊರೊನಾ ಆತಂಕ ಎದುರಾಗಿದೆ. ಈಗಾಗಲೇ ಒಮಿಕ್ರಾನ್‌ ಸಂಖ್ಯೆ 650 ದಾಟಿದೆ. ಒಮಿಕ್ರಾನ್‌ ಹೀಗೆ ಹೆಚ್ಚಾದರೆ ಕೊರೊನಾ 3ನೇ ಅಲೆ ಉಂಟಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.

 ಇದನ್ನು ತಡೆಗಟ್ಟಲು ಸರ್ಕಾರ ಮುಂದಾಗಿದೆ, ಬೂಸ್ಟರ್‌ ಲಸಿಕೆ ನೀಡಲು ಮುಂದಾಗಿದೆ ಅದಕ್ಕೆ ಪ್ರಿಕಾಷನ್ ಡೋಸ್‌ ಎಮದು ಕರೆಯಲಾಗಿದೆ. ಇದನ್ನು ಮೊದಲಿಗೆ ಆರೋಗ್ಯ ಕಾರ್ಯಕರ್ತರು, ಫ್ರಂಟ್‌ಲೈನ್‌ ವರ್ಕರ್ಸ್ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವುದು, ಅಲ್ಲದೆ15-18 ವರ್ಷದವರಿಗೆ ಕೂಡ 2022ರಿಂದ ಲಸಿಕೆ ಸಿಗಲಿದೆ. 15-18 ವರ್ಷದವರಿಗೆ ಕೊವಾಕ್ಸಿನ್‌ ಅಥವಾ ZyCoV-D ಲಸಿಕೆ ನೀಡಲಾಗುವುದು.

ಅದಕ್ಕಿಂತ ಚಿಕ್ಕ ಮಕ್ಕಳಿಗೆ ನೀಡಲು ಕೋವಾವ್ಯಾಕ್ಸ್ ಮತ್ತು ಕೋರ್ಬೆವ್ಯಾಕ್ಸ್ ಲಸಿಕೆಗಳ ಟ್ರಯಲ್‌ ನಡೆಯುತ್ತಿತ್ತು, ಆ ಔಷಧಗಳನ್ನು ಬಳಸಲು ಭಾರತದಲ್ಲಿ ಅನುಮತಿ ಸಿಕ್ಕಿದೆ ಎಂದು ಆರೋಗ್ಯ ಮಂತ್ರಿ ಡಾ. ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ…

ನೊವಾವ್ಯಾಕ್ಸ್, ಕೋರ್ಬೆವ್ಯಾಕ್ಸ್‌ಗೆ ಅನುಮತಿ

7-11 ವರ್ಷದ ಮಕ್ಕಳಿಗೆ ಸೆರಮ್‌ ಇನ್ಸಿಟ್ಯೂಟ್‌ನ ನೊವಾವ್ಯಾಕ್ಸ್‌ಗೆ, 5 ವರ್ಷದ ಮೇಲಿನ ಮಕ್ಕಳಿಗೆ ಬಯೋಲಾಜಿಕಲ್‌ E’s Corbevaxಗೆ ಸುರಕ್ಷಿತವಾದ ಲಸಿಕೆ ಎಂದು ಡ್ರಗ್‌ ಕಂಟ್ರೋಲರ್‌ (ಔಷಧ ನಿಯಂತ್ರಕ ಸಂಸ್ಥೆ) ಅನುಮತಿ ನೀಡಿತ್ತು. ಇದೀಗ ಈ ಔಷಧಗಳನ್ನು ಬಳಸಲು ಭಾರತದಲ್ಲಿ ಅನುಮತಿ ಸಿಕ್ಕಿದೆ.

ಕೊರೊನಾ ವಿರುದ್ಧ ಹೋರಾಡಲು ಭಾರತ ಮತ್ತಷ್ಟು ಶಕ್ತವಾಗಲಿದೆ

18 ವರ್ಷ ಮೇಲ್ಪಟ್ಟವರಲ್ಲಿ ಬಹುಪಾಲು ಜನರಿಗೆ ಎರಡು ಡೋಸ್‌ ಲಸಿಕೆ ಸಿಕ್ಕಾಗಿದೆ, ಎರಡು ಡೋಸ್‌ ಲಸಿಕೆ ಪಡೆದು 9 ತಿಂಗಳಾಗಿದ್ದರೆ ಅಂಥವರಿಗೆ ಪ್ರಿಕಾಷನ್‌ ಡೋಸ್‌ ಸಿಗಲಿದೆ, 15-18 ವರ್ಷದವರಿಗೆ ಲಸಿಕೆ ನೀಡಲಾಗುವುದು.

ಇದೀಗ ನೊವಾವ್ಯಾಕ್ಸ್ ಹಾಗೂ ಕೋರ್ಬೆವ್ಯಾಕ್ಸ್ ಬಳಸಲು ಅನುಮತಿ ಸಿಕ್ಕಿರುವುದರಿಂದ 5 ವರ್ಷದ ಮೇಲಿನ ಮಕ್ಕಳಿಗೆ ಲಸಿಕೆ ಲಭ್ಯವಾಗಲಿದೆ, ಹಾಗಾಗಿ ಭಾರತದ ಬಹುಪಾಲು ಜನಸಂಖ್ಯೆಗೆ ಲಸಿಕೆ ದೊರೆಯುವುದರಿಂದ ಕೊರೊನಾವನ್ನು ಶಕ್ತವಾಗಿ ಮಣಿಸಲು ಭಾರತಕ್ಕೆ ಸಾಧ್ಯವಾಗುವುದು ಎಂಬ ನಿರೀಕ್ಷೆ ಮೂಡಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸೀತಾಫಲ ತಿಂದರೆ ಆರೋಗ್ಯದಲ್ಲಿ ಅನೇಕ ಪ್ರಯೋಜನಗಳು

Wed Dec 29 , 2021
ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಕೂಡ ತುಂಬಾ ಇಷ್ಟಪಡುವ ಹಣ್ಣುಗಳಲ್ಲಿ ಸೀತಾಫಲ ಕೂಡ ಒಂದು. ಅಷ್ಟೇ ಅಲ್ಲ ಇದು ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವರು ಸೀತಾಫಲವನ್ನು ಸೇವಿಸಲು ಸಲಹೆ ನೀಡುತ್ತಾರೆ. ಇದು ಫೈಬರ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ, ವಿಟಮಿನ್ ಎ ಮುಂತಾದ ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆರೋಗ್ಯವಾಗಿರಲು ಈ ಎಲ್ಲಾ ಪೋಷಕಾಂಶಗಳು ದೇಹಕ್ಕೆ ಬೇಕಾಗುತ್ತವೆ. ಅಲರ್ಜಿ ಸೀತಾಫಲವನ್ನು […]

Advertisement

Wordpress Social Share Plugin powered by Ultimatelysocial