ಹೈದರಾಬಾದ್: ಆಂಧ್ರಪ್ರದೇಶ ಸಂಸದ ಡಾ. ಸಂಜೀವ್ ಕುಮಾರ ಅವರ ಕುಟುಂಬದ ಆರು ಜನರಿಗೆ ಕೋವಿಡ್-೧೯ ಸೋಂಕು ತಗಲಿರುವುದು ಧೃಢಪಟ್ಟಿದೆ. ಅವರ ೮೦ವರ್ಷದ ತಂದೆ, ಹೆಂಡತಿ, ಇಬ್ಬರು ಸಹೋದರರು ಹಾಗೂ ಇನ್ನಿಬ್ಬರು ಸೋಂಕಿತರಾಗಿದ್ದಾರೆ.
ಈ ಸಂಬಂಧ ಸುದ್ಧಿಗಾರರೊಂದಿಗೆ ಮಾತನಾಡಿದ ಸಂಜೀವ್ ಕುಮಾರ ಸೋಂಕು ಧೃಢಪಟ್ಟಿರುವ ಆರು ಜನರೂ ಸ್ಥಿರವಾಗಿದ್ದಾರೆ. ಅವರಿಗೆ ಯಾವುದೇ ತೊಂದರೆ ಕಾಣಿಸಿಕೊಂಡಿಲ್ಲ. ಎಲ್ಲರೂ ಕರ್ನೂಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿಯಮದಂತೆ ಪ್ರತ್ಯೇಕ ವಾಸದಲ್ಲಿದ್ದಾರೆ. ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಆಂಧ್ರಪ್ರದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ೧,೦೯೭ಕ್ಕೆ ತಲುಪಿದೆ. ಕರ್ನೂಲ್ ಜಿಲ್ಲೆಯಲ್ಲಿ ಅತಿ ಹೆಚ್ಚು (೨೭೯) ಪ್ರಕರಣಗಳೂ ವರದಿಯಾಗಿವೆ.
ಸಂಸದ ಸಂಜೀವ್ ಕುಮಾರ್ ಕುಟುಂಬದ ಆರು ಜನರಿಗೆ ಕೋವಿಡ್ ದೃಢ
Please follow and like us: