ಸರ್ಕಾರದ ವಿರುದ್ಧ ಹೆಚ್.ಕೆ.ಪಾಟೀಲ್ ಗರಂ

ಕೊರೋನಾಗೆ ಮೈದಾನ, ಬಯಲು ಪ್ರದೇಶಗಳಲ್ಲಿ ಚಿಕಿತ್ಸೆ ನೀಡೋದಕ್ಕೆ ಮನುಷ್ಯರು ಜಾನುವಾರುಗಳಲ್ಲ ಅನ್ನೋದನ್ನ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಗುಡುಗಿದ್ದಾರೆ. ಗದಗನಲ್ಲಿ ಮಾತನಾಡಿದ ಅವರು, ಯುದ್ದೋಪಾದಿಯಲ್ಲಿ ಸರ್ಕಾರ ಕೆಲಸ ಮಾಡುತ್ತಿಲ್ಲ. ಸಾರ್ವಜನಿಕರಿಗೆ ಸರ್ಕಾರದ ಗುಣಮಟ್ಟದ ಸೇವೆ ಲಭ್ಯವಾಗುತ್ತಿಲ್ಲ. ಎಲ್ಲಡೆ ಕೋವಿಡ್ ಆಸ್ಪತ್ರೆಗಳು ತುಂಬಿವೆ. ಹೆಚ್ಚಿನ ಬೆಡ್‌ಗಳ ವ್ಯವಸ್ಥೆ ಮಾಡಲು ಸರ್ಕಾರ ಗಂಭಿರ ಚಿಂತನೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಬಯಲು, ಮೈದಾನ ಬಿಡಿ, ಸ್ಟಾರ್ ಹೋಟೆಲ್‌ಗಳನ್ನ ವಶಕ್ಕೆ ಪಡೆದು ಕೋವಿಡ್-೧೯ ಕಾಳಜಿ ಕೇಂದ್ರ ಮಾಡಲಿ. ಅಂತ್ಯಕ್ರಿಯೆಗೆ ಜಮೀನು ಸ್ಥಳ ಹುಡುಕುತ್ತೇವೆ ಅಂತಿದ್ದರಲ್ಲಾ ನಾಚಿಕೆಯಾಗಬೇಕು ನಿಮಗೆ. ಶ್ರೀಮಂತರಿಗೆ ಜಮೀನು ಕೊಡಿಸಲು ಸುಗ್ರಿವಾಜ್ಞೆ ಮಾಡುತ್ತೀರಿ. ಜನ ಸಾಮಾನ್ಯರ ಕಾಳಜಿಗೆ ಭೂಮಿ ಹುಡುಕಲು ಹಿಂದೆಟು ಹಾಕುತ್ತೀರಾ? ಕರ್ನಾಟಕ, ಬೆಂಗಳೂರನ್ನು, ನ್ಯೂಯಾರ್ಕ್, ಇಟಲಿ, ಅಮೇರಿಕಾ ಆಗುವುದಕ್ಕೆ ಯಾವತ್ತು ಬಿಡಲ್ಲ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ತುಂಗಭದ್ರಾ ಜಲಾಶಯದಿಂದ ಬಳ್ಳಾರಿಗೆ ನೀರು

Mon Jun 29 , 2020
ತುಂಗಭದ್ರಾ ಜಲಾಶಯದಿಂದ ನೇರ ಬಳ್ಳಾರಿ ನಗರಕ್ಕೆ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದರು. ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಮತ್ತು ಪಾಲಿಕೆ ಸಹಯೋಗದಲ್ಲಿ ನಗರದ ಸತ್ಯನಾರಾಯಣಪೇಟೆಯಲ್ಲಿ ನಗರದ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯ ೧೨ ವಲಯಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ನಗರಕ್ಕೆ ಇನ್ನು ಮುಂದೆ ನೀರಿನ ಕೊರತೆಯಾಗುವುದಿಲ್ಲ’.ನಗರದಲ್ಲಿ ಇನ್ನೂ ೧೫ ವಲಯಗಳಿದ್ದು, ಡಿಸೆಂಬರ್ […]

Advertisement

Wordpress Social Share Plugin powered by Ultimatelysocial