ಸಾಲುಮರದ ತಿಮ್ಮಕ್ಕ, ಬಾಯಿಮಾತಲ್ಲ ನಿನ್ನ ದಿವ್ಯಕಾಯಕ.

 

 

ತಾಯಿ ತಿಮ್ಮಕ್ಕ,
ಬಾಯಿಮಾತಲ್ಲ ನಿನ್ನ ದಿವ್ಯಕಾಯಕ.
ನೂರುಗಟ್ಟಲೆ ಸಸಿಗಳನ್ನು ನೆಟ್ಟಿದ್ದೀಯೇ,
ದೂರದಿಂದ ನೀರು ಹೊತ್ತು ತಂದಿದ್ದೀಯೆ,
ಕೈಯಾರೆ ಎರೆದು ಬೆಳೆಸಿದ್ದೀಯೆ,
ಬೆವರ ಹನಿ ಬೆರೆಸಿದ್ದೀಯೆ,
ನೀ ನೆಟ್ಟ ಮರಗಳಲ್ಲಿ
ಹಕ್ಕಿಗಳು ಗೂಡು ಕಟ್ಟಿವೆ
ಮಕ್ಕಳು ಜೋಕಾಲಿ ಆಡಿದ್ದಾರೆ,
ಬಿಸಿಲ ಕೋಲು ರಂಗೋಲಿ ರಚಿಸಿದೆ,
ದಾರಿಹೋಕರು ದಣಿವಾರಿಸಿಕೊಂಡಿದ್ದಾರೆ,
ಬುತ್ತಿ ಬಿಚ್ಚಿ ಉಂಡಿದ್ದಾರೆ,
ನೀರು ನೆರಳು ಪಡೆದಿದ್ದಾರೆ,
ಕಾಲು ಚಾಚಿ ಮಲಗಿದ್ದಾರೆ,
ಕಣ್ಣು ಮುಚ್ಚಿ ಕಮ್ಮನೆಯ ಕನಸು ಕಂಡಿದ್ದಾರೆ.
ನಿನ್ನ ಹಸ್ತಸ್ಪರ್ಶ ಪಡೆದ ಕುಡಿಗಳು
ಭವಿಷ್ಯದಲಿ ಲಕ್ಷವೃಕ್ಷಗಳಾಗುತ್ತವೆ,
ಕೋಟಿಗೂ ಮೀರುತ್ತವೆ,
ನಾಡಿಗೆ ಕಾಡಿನ ಕಂಪು ಕಸಿಯಾಗುತ್ತದೆ,
ಇನ್ನು ಮುಂದೆ
ಕಣ್ಣ ಮುಂದಿನ ಎಳೆಯರು
ನಿನ್ನ ಹಿಂಬಾಲಿಸುತ್ತಾರೆ.
ದೀಪದಿಂದ ದೀಪ ಹತ್ತಿಕೊಳ್ಳುತ್ತದೆ,
ನಂದಾದೀಪಗಳ ನವಯುಗ ಪ್ರಾರಂಭವಾಗುತ್ತದೆ,
ಬದುಕಿನಲ್ಲಿ ಭರವಸೆ ಮೂಡುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಜಾನ್ ಬಿ ಹಿಗ್ಗಿನ್ಸ್ ಕರ್ನಾಟಕ ಸಂಗೀತವನ್ನು ಶಾಸ್ರಜ್ಞರು

Sat Dec 24 , 2022
    ಅಮೆರಿಕದವರಾದರೂ ಕರ್ನಾಟಕ ಸಂಗೀತವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ, ಕಲಿತು ಅದರಲ್ಲಿ ಉತ್ತುಂಗಕ್ಕೆ ಏರಿ ಅಷ್ಟೇ ಬೇಗ ಈ ಲೋಕದಿಂದ ಕಣ್ಮರೆಯಾದವರು ಜಾನ್ ಬಿ ಹಿಗ್ಗಿನ್ಸ್. ಹೀಗೆ ಸಾಧನೆ ಮಾಡಿದ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜರುಗಳಿಂದಲೇ ಹಿಗ್ಗಿನ್ಸ್ ಭಾಗವತರ್ ಎಂಬ ಸಂಬೋಧನೆಗೆ ಪಾತ್ರರಾದವರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ. ಜಾನ್ ಬೋರ್ತ್ವಿಕ್ ಹಿಗ್ಗಿನ್ಸ್ 1939ರ ಸೆಪ್ಟೆಂಬರ್ 18ರಂದು ಅಮೆರಿಕದ ಮೆಸಾಚುಸೆಟ್ಸ್‌ ಪ್ರದೇಶದ ಆ್ಯಾಂಡೋವರ್ ಎಂಬಲ್ಲಿ ಜನಿಸಿದರು.. […]

Advertisement

Wordpress Social Share Plugin powered by Ultimatelysocial