ಸೌತಾಂಪ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯ

ಕಳೆದ ೩೨ ವರ್ಷಗಳಿಂದ, ಅಂದರೆ ೧೯೮೮ರ ಬಳಿಕ ಕೆರಿಬಿಯನ್ನರಿಗೆ ಆಂಗ್ಲರ ನೆಲದಲ್ಲಿ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ ಎಂಬ ದೊಡ್ಡದೊಂದು ಕೊರಗು ಕಾಡುತ್ತಲೇ ಇತ್ತು ಇದೀಗ ಜಾಸನ್ ಹೋಲ್ಡರ್ ಪಡೆ ಇದನ್ನು ನೀಗಿಸಿಕೊಳ್ಳಲು ಮುಂದಾಗಿದೆ. ಹೌದು ಕೋವಿಡ್ ಕಾಲದ ಮೊದಲ ಸೌತಾಂಪ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆAಡ್ ತಂಡವನ್ನು ಪ್ರವಾಸಿ ವೆಸ್ಟ್ ಇಂಡೀಸ್ ೪ ವಿಕೆಟ್‌ಗಳಿಂದ ಹೆಡೆಮುರಿ ಕಟ್ಟಿದೆ. ಮೂರು ಪಂದ್ಯಗಳ ಟೆಸ್ಟ್ ಸರಯಲ್ಲಿ ೧-೦ ಮುನ್ನಡೆ ಸಾಧಿಸಿಕೊಂಡಿರುವ ವಿಂಡೀಸ್ ಈಗ ಪೂರ್ಣ ಸರಣಿ ಜಯಿಸುವ ಆತ್ಮವಿಶ್ವಾಸದಲ್ಲಿದ್ದು ದೈತ್ಯ ತಂಡವಾಗಿ ರೂಪುಗೊಳ್ಳುವ ಸೂಚನೆಯೊಂದನ್ನು ನೀಡಿದೆ. ಹೊರಬಂದ ಮೊದಲ ಟೆಸ್ಟ್ ಪಂದ್ಯದ ಫಲಿತಾಂಶದಲ್ಲಿ ಆತಿಥೇಯರನ್ನು ನೆಲಕ್ಕುರುಳಿಸಿದ್ದ ಕೆರಿಬಿಯನ್ಸ್ ಹೊಸ ಇತಿಹಾಸವೊಂದನ್ನು ಬರೆಯುವ ಹೊಸ್ತಿಲಲ್ಲಿದ್ದಾರೆ. ಹೌದು, ಬಾಕಿ ಉಳಿದಿರುವ ೨ ಟೆಸ್ಟ್ ಪಂದ್ಯಗಳಲ್ಲಿ ಒಂದನ್ನು ಗೆದ್ದರೆ ಸಾಕು ಆಂಗ್ಲರ ನೆಲದಲ್ಲಿ ಟೆಸ್ಟ್ ಗೆದ್ದ ಐತಿಹಾಸಿಕ ಸಾಧನೆಗೆ ವಿಂಡೀಸ್ ಪಾತ್ರವಾಗಲಿದೆ. ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಿರುವುದರಿಂದ ಸುಲಭವಾಗಿಯೇ ವಿಂಡೀಸ್ ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿದಂತಾಗಿದೆ. ಇಂದಿನಿAದ ಮ್ಯಾಂಚೆಸ್ಟರ್‌ನಲ್ಲಿ ೨ನೇ ಟೆಸ್ಟ್ ನಡೆಯಲಿದ್ದು ಅಲ್ಲೂ ಇದೇ ಪ್ರದರ್ಶನವನ್ನೂ ಮುಂದುವರಿಸುವ ವಿಶ್ವಾಸವನ್ನು ವಿಂಡೀಸ್ ನಾಯಕ ಜಾಸನ್ ಹೋಲ್ಡರ್ ಹೊಂದಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಅಸ್ಸಾಂನಲ್ಲಿ ಪ್ರವಾಹದಿಂದಾಗಿರುವ ತೀವ್ರ ಅನಾಹುತ

Fri Jul 17 , 2020
ಅಸ್ಸಾಂನಲ್ಲಿ ಪ್ರವಾಹದಿಂದಾಗಿರುವ ತೀವ್ರ ಅನಾಹುತಗಳಿಂದ ನೊಂದಿರುವುದಾಗಿ ಮಾಜಿ ಪ್ರಧಾನಿ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ. ಅಸ್ಸಾಂನಲ್ಲಿನ ಪರಿಸ್ಥಿತಿಯ ಬಗ್ಗೆ ತುರ್ತು ಗಮನ ಹರಿಸಿ ರಾಜ್ಯ ಸರ್ಕಾರಕ್ಕೆ ಗರಿಷ್ಠ ನೆರವು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೆಲವು ದಿನಗಳಿಂದ ಪರಿಸ್ಥಿತಿ ಸ್ಥಿರವಾಗಿ ಹದಗೆಡುತ್ತಿದ್ದು, 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸುಮಾರು ನಾಲ್ಕು ದಶಲಕ್ಷದಷ್ಟು ಜನರು ನೋವಿಗೊಳಗಾಗಿದ್ದಾರೆ ಮತ್ತು ಸುಮಾರು 480 ಪರಿಹಾರ ಶಿಬಿರಗಳನ್ನು […]

Advertisement

Wordpress Social Share Plugin powered by Ultimatelysocial