: ಸೌರವ್ ಗಂಗೂಲಿ ಬಯೋಪಿಕ್ ಚಿತ್ರಕ್ಕೆ ಹೀರೋ ಸಿಕ್ಕಾಯ್ತು:

ತ್ತೀಚಿನ ಚಿತ್ರರಂಗದಲ್ಲಿ ಬಯೋಪಿಕ್ ಸಿನಿಮಾಗಳ ಆರ್ಭಟ ಜೋರಾಗಿದೆ. ಕ್ರೀಡಾ ಕ್ಷೇತ್ರದ ಸಾಧಕರು, ರಾಜಕೀಯರಂಗದ ನಾಯಕರು, ಸಿನಿಮಾ ತಾರೆಯರು, ಉದ್ಯಮಿಗಳ ಜೀವನಾಧರಿತ ಸಿನಿಮಾಗಳನ್ನು ತೆರೆಗೆ ತರಲಾಗುತ್ತಿದೆ. ಇದರಲ್ಲಿ ಕ್ರೀಡಾ ಕ್ಷೇತ್ರದ ಸಾಧಕರ ಕಥೆಗಳೇ ಹೆಚ್ಚು.ಧೋನಿ, ಸಚಿನ್, ಕಪಿಲ್ ನಂತರ ಸೌರವ್ ಗಂಗೂಲಿ ಬಯೋಪಿಕ್ ಸಿನಿಮಾ ನಿರ್ಮಾಣಕ್ಕೆ ವೇದಿಕೆ ಸಿದ್ದವಾಗಿದೆ. ಚಿತ್ರದಲ್ಲಿ ಬೆಂಗಾಲ್ ಟೈಗರ್ ಆಗಿ ಯಾರು ನಟಿಸ್ತಾರೆ ಎನ್ನುವುದು ಪಕ್ಕಾ ಆಗಿದೆ.ಬಹಳ ದಿನಗಳಿಂದ ಸೌರವ್ ಗಂಗೂಲಿ ಬಯೋಪಿಕ್ ಬಗ್ಗೆ ಚರ್ಚೆ ನಡೀತಿದೆ. ತೆರೆಮೇಲೆ ಯಾರು ದಾದಾ ಆಗಿ ನಟಿಸ್ತಾರೆ ಎನ್ನುವ ಬಗ್ಗೆ ಕುತೂಹಲ ಇತ್ತು. ರಣ್‌ಬೀರ್ ಕಪೂರ್ ಹೆಸರು ದೊಡ್ಡದಾಗಿ ಹೇಳಿಬರುತ್ತಿತ್ತು. ಸಾಕಷ್ಟು ಬಾರಿ ಈ ಬಗ್ಗೆ ಚರ್ಚೆ ನಡೆದರೂ ಯಾವುದು ಫೈನಲ್ ಆಗಿರಲಿಲ್ಲ. ಈಗ ಸಿಗುತ್ತಿರುವ ಮಾಹಿತಿ ಪ್ರಕಾರ ರಣ್‌ಬೀರ್ ಬ್ಯಾಟ್ ಹಿಡಿದು ಗಂಗೂಲಿ ರೀತಿ ಕ್ರೀಡಾಂಗಣದಲ್ಲಿ ಆರ್ಭಟಿಸಲು ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಸಹಜವಾಗಿಯೇ ಈ ವಿವಾರ ಗಂಗೂಲಿ ಹಾಗೂ ರಣ್‌ಬೀರ್ ಅಭಿಮಾನಿಗಳಿಗೆ ಸಂತಸ ತಂದಿದೆ.ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಬಯೋಪಿಕ್ ಬಗ್ಗೆ ಭಾರೀ ಕುತೂಹ ಇದೆ. ರಣ್‌ಬೀರ್ ಕಾಲ್‌ಶೀಟ್ ಸಿಗದೇ ಇಷ್ಟು ದಿನ ಸಿನಿಮಾ ತಡವಾಗುತ್ತಿತ್ತು. ಈಗ ಕಾಲ ಕೂಡಿ ಬರ್ತಿದ್ದು ಆದಷ್ಟು ಬೇಗ ಸಿನಿಮಾ ಘೋಷಣೆ ಆಗಲಿದೆ ಎನ್ನುವ ಮಾತುಗಳು ಬಾಲಿವುಡ್ ವಲಯದಲ್ಲಿ ಕೇಳಿಬರ್ತಿದೆ. ಇನ್ನು ಗಂಗೂಲಿ ಅವರಿಂದ ಸಂಪೂರ್ಣ ಮಾಹಿತಿ ಪಡೆಯಲು ನಿರ್ಮಾಪಕರು, ನಿರ್ದೇಶಕರ ಜೊತೆ ಶೀಘ್ರದಲ್ಲೇ ರಣ್‌ಬೀರ್ ಕೊಲ್ಕತ್ತಾಗೆ ಪಯಣ ಬೆಳೆಸಲಿದ್ದಾರೆಈಡನ್ ಗಾರ್ಡನ್ ಮೈದಾನ, ಗಂಗೂಲಿ ಮನೆಗೆ ಭೇಟಿ ಕೊಟ್ಟು ಸಿನಿಮಾಗೆ ಬೇಕಾದ ಮಾಹಿತಿಯನ್ನು ಕಲೆ ಹಾಕಲು ತೀರ್ಮಾನಿಸಿದ್ದಾರಂತೆ. ಗಂಗೂಲಿ ಜೀವನದಲ್ಲಿ ನಡೆದ ಸಾಕಷ್ಟು ವಿಚಾರಗಳನ್ನು ಸಂಗ್ರಹಿಸಿ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಎಡಗೈ ಬ್ಯಾಟ್ಸ್‌ಮನ್ ಸೌರವ್ ಗಂಗೂಲಿ ಟೆಸ್ಟ್ 113 ಹಾಗೂ 311 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಟೀಂ ಇಂಡಿಯಾ ನಾಯಕನಾಗಿ 2003ರಲ್ಲಿ ತಂಡವನ್ನು ವರ್ಲ್ಡ್ ಕಪ್ ಫೈನಲ್‌ವರೆಗೂ ಕೊಂಡೊಯ್ದಿದ್ದರು. ಇನ್ನು ಮ್ಯಾಚ್‌ ಫಿಕ್ಸಿಂಗ್‌ ಹಗರಣದಿಂದ ಭಾರತ ಕ್ರಿಕೆಟ್ ತಂಡ ತನ್ನ ವರ್ಚಸ್ಸನ್ನು ಕಳೆದುಕೊಂಡಿದ್ದಾಗ ನಾಯಕನಾಗಿ ದಾದಾ ತಂಡವನ್ನು ಮುನ್ನಡೆಸಿ ಗೆದ್ದಿದ್ದರು.ಇನ್ನು ಗಂಗೂಲಿ ಬಯೋಪಿಕ್‌ ಬಗ್ಗೆ ಮಾತನಾಡಿದ್ದ ಪತ್ನಿ ಡೋನಾ ಗಂಗೂಲಿ, ಸಿನಿಮಾ ಬಗ್ಗೆ ನಿರ್ದೇಶಕರು, ನಿರ್ಮಾಪಕರು ಮಾತನಾಡಬೇಕು ಎಂದಿದ್ದರು. ಇನ್ನು ಗಂಗೂಲಿ ಪಾತ್ರದಲ್ಲಿ ಯಾರು ನಟಿಸಬೇಕು ಎನ್ನುವ ಪ್ರಶ್ನೆಗೆ “ನನ್ನ ಫೇವರೆಟ್ ಯಾರು ಎಂದು ಹೇಳಬೇಕು ಅಂದರೆ ಅಮಿತಾಬ್ ಬಚ್ಚನ್ ಅಥವಾ ಶಾರುಖ್ ಖಾನ್ ಎಂದು ಹೇಳುತ್ತೇನೆ. ಆದರೆ ವಯಸ್ಸಿನ ವಿಚಾರ ಬಂದಾಗ ಅವರು ಈ ಸಿನಿಮಾ ಮಾಡಲು ಸಾಧ್ಯವಿಲ್ಲ. ಚಿತ್ರದಲ್ಲಿ 24 ವರ್ಷದ ಗಂಗೂಲಿಯಾಗಿಗೂ ಅವರು ಕಾಣಿಸಿಕೊಳ್ಳಬೇಕಾಗುತ್ತದೆ. ಬಹಳ ಹೊತ್ತು ಸಿನಿಮಾ ಈ ವಯಸ್ಸಿನ ಗಂಗೂಲಿ ಸುತ್ತಾ ಸುತ್ತುತ್ತದೆ. ಹಾಗಾಗಿ ಆ ವಯಸ್ಸಿಗೆ ತಕ್ಕ ನಟನನ್ನು ಆರಿಸಿಕೊಳ್ಳಬೇಕು” ಎಂದು ಇತ್ತೀಚೆಗೆ ಹೇಳಿದ್ದರುಗಂಗೂಲಿ ಪಾತ್ರಕ್ಕೆ ರಣ್‌ಬೀರ್ ಕಪೂರ್ ಆದರೆ ನ್ಯಾಯ ಒದಗಿಸುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಹಿಂದೆ ‘ಸಂಜು’ ಚಿತ್ರದಲ್ಲಿ ಸಂಜಯ್ ದತ್ ಪಾತ್ರದಲ್ಲಿ ರಣ್‌ಬೀರ್ ಮೋಡಿ ಮಾಡಿದ್ದರು. ಸ್ವತಃ ಸಂಜಬಾಬಾ, ರಣ್‌ಬೀರ್ ನಟನೆಗೆ ಫಿದಾ ಆಗಿದ್ದರು. ಸಿನಿಮಾ ಕೂಡ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಎಲ್ಲಾ ಬಯೋಪಿಕ್ ಸಿನಿಮಾಗಳು ಹಿಟ್ ಆಗುತ್ತಿಲ್ಲ. ಗಂಗೂಲಿ ಬಯೋಪಿಕ್ ಎಷ್ಟರಮಟ್ಟಿಗೆ ಸದ್ದು ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕು. ಶೀಘ್ರದಲ್ಲೇ ಸಿನಿಮಾ ಘೋಷಣೆಯಾಗುವ ಸಾಧ್ಯತೆಯಿದೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿಟಗುಪ್ಪ ಘಟಕದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ.

Thu Feb 23 , 2023
ಚಿಟಗುಪ್ಪ ಘಟಕದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ  ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ಎಲ್ಲಾ ಸರ್ಕಾರಿ ನೌಕರರು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಸ್ಕಾರಣೆ ಮತ್ತು ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಸರ್ಕಾರವನ್ನು ಆಗ್ರಹಿಸಿ ಮಾರ್ಚ್ 1ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರ ನಡೆಸಲಿದ್ದಾರೆ.ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಿಟುಗುಪ್ಪ ಘಟಕದ ಅಧ್ಯಕ್ಷ […]

Advertisement

Wordpress Social Share Plugin powered by Ultimatelysocial