ಹಾಲು ಖರೀದಿ ದರ ಇಳಿಕೆ

ಕೋವಿಡ್ ಮಹಾಮಾರಿ ಹಾಲು ಉತ್ಪಾದಕರ ಬದುಕಿನ ಮೇಲೂ ಪರಿಣಾಮ ಬೀರಿದೆ. ಸರಕಾರವು ಹಾಲು ಉತ್ಪಾದಕರಿಗೆ ಕಳೆದ ಮೂರು ತಿಂಗಳಿAದ ಪ್ರೋತ್ಸಾಹಧನ ನೀಡಿಲ್ಲ. ಜತೆಗೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಹಾಲು ಖರೀದಿ ದರವನ್ನು ಇತ್ತೀಚೆಗೆ ೧ ರೂಪಾಯಿಷ್ಟು ಇಳಿಸಿದೆ. ಇದು ಹಾಲು ಉತ್ಪಾದಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಜಿಲ್ಲೆಯಲ್ಲಿ ಹಲವು ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಮಂದಿಗೆ ಅದುವೇ ಜೀವನಾಧಾರ. ಜಾನುವಾರುಗಳ ಆಹಾರ ಪದಾರ್ಥಗಳಾದ ಬೂಸಾ, ಹಿಂಡಿ, ಹೊಟ್ಟು, ಮೇವಿನ ದರ ಹೆಚ್ಚಾಗಿರುವ ಕಾರಣ ಹಸುಗಳ ಸಾಕಣೆ ಕಷ್ಟವಾಗಿರುವಾಗ ಮತ್ತು ಕೊರೊನಾ ಸಂಕಷ್ಟ ಕಾಲದಲ್ಲಿ ಹಾಲಿನ ದರವನ್ನು ಕಡಿಮೆ ಮಾಡಿ ರುವುದರಿಂದ ಹೈನುಗಾರರು ಆತಂಕಗೊAಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ತೆರೆ ಎಳೆದ ಸ್ರಿಪಾಲಿ ವೀರಕ್ಕೋಡಿ

Wed Jul 22 , 2020
ಶ್ರೀಲಂಕಾ ಮಹಿಳಾ ಕ್ರಿಕೆಟ್​ ತಂಡದ ವೇಗಿ ಸ್ರಿಪಾಲಿ ವೀರಕ್ಕೋಡಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಶ್ರೀಲಂಕಾ ಪರ 89 ಏಕದಿನ ಮತ್ತು 58 ಟಿ20 ಪಂದ್ಯಗಳನ್ನು ಆಡಿದ್ದಾರೆ. ಹಾಗೇ 2018ರಲ್ಲಿ ಬಾಂಗ್ಲಾದೇಶ ವಿರುದ್ಧ ಅವರು ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. 2006ರಂದು ಜೈಪುರದಲ್ಲಿ ಪಾಕಿಸ್ತಾನ ವಿರುದ್ದ ಪಾದಾರ್ಪಣೆ ಮಾಡಿದ್ದ ಅವರು 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನಕ್ಕೆ ತೆರೆ ಎಳೆದಿದ್ದಾರೆ. ನಾನು ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಅದಕ್ಕೆ ಇದು ಸರಿಯಾದ ಸಮಯ ಎಂದು […]

Advertisement

Wordpress Social Share Plugin powered by Ultimatelysocial