ಹುಲಿ ವಿದ್ಯುತ್ ತಂತಿ ಬೇಲಿಗೆ ಸಿಲುಕಿ ಮೃತಪಟ್ಡಿದ್ದನ್ನು ಮುಚ್ಚಿಡಲು ಕೆರೆಗೆ ಎಸೆದಿದ್ದ

ಹುಲಿ ವಿದ್ಯುತ್ ತಂತಿ ಬೇಲಿಗೆ ಸಿಲುಕಿ ಮೃತಪಟ್ಡಿದ್ದನ್ನು ಮುಚ್ಚಿಡಲು ಕೆರೆಗೆ ಎಸೆದಿದ್ದ ಆರೋಪಿಯನ್ನು ಚಾಮರಾಜನಗರ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹುಲಿಯ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯ ವ್ಯಾಪ್ತಿಯ ಕೆಬ್ಬೇಪುರ ಗ್ರಾಮದ ಮಲ್ಲಯ್ಯನಕಟ್ಟೆ ಕೆರೆಯಲ್ಲಿ ಹುಲಿಯ ಮೃತದೇಹ ಪತ್ತೆಯಾಗಿತ್ತು. ಹುಲಿಯು ಜಮೀನಿನಲ್ಲಿ ಅಳವಡಿಸಿದ್ದ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಮೃತಪಟ್ಟಿರುವುದು ಖಚಿತವಾಗಿದ್ದು, ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಹರಿಸಿರುವುದು ತನಿಖೆಯಿಂದ ಗೊತ್ತಾಗಿದೆ.

ವಿದ್ಯುತ್ ತಂತಿ ಸ್ಪರ್ಶಿಸಿ ಹುಲಿ ಸತ್ತಿರುವ ಸಂಗತಿಯನ್ನು ಮುಚ್ಚಿ ಹಾಕುವುದಕ್ಕಾಗಿ 6 ಮಂದಿ ಒಟ್ಟಾಗಿ ಹುಲಿಯ ಮೃತದೇಹವನ್ನು ಕೆರೆಗೆ ಎಸೆದಿರುವುದು ತನಿಖೆಯಿಂದ ಗೊತ್ತಾಗಿದೆ.

ಕೆಬ್ಬೇಪುರ ಗ್ರಾಮದ ರೇಚಪ್ಪ (34) ಬಂಧಿತ ಆರೋಪಿ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ಐದು ಮಂದಿ ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಅರಣ್ಯ ಇಲಾಖೆಯು ಎರಡು ವಿಶೇಷ ತಂಡಗಳನ್ನು ರಚಿಸಿತ್ತು.

ಹುಲಿಯ ಕಾಲುಗಳು ಹಾಗೂ ಕುತ್ತಿಗೆಗೆ ತಂತಿಯಿಂದ ಕಟ್ಟಿ, ಅದಕ್ಕೆ ಭಾರವಾದ ಕಲ್ಲು ಕಟ್ಟಿ ಕೆರೆಗೆ ಹಾಕಲಾಗಿತ್ತು. ಹಾಗಾಗಿ ಹುಲಿಯ ಸಾವಿನ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದವು. ತನಿಖೆ ವೇಳೆ ಹುಲಿಯ ಸಾವಿಗೆ ವಿದ್ಯುತ್ ಸ್ಪರ್ಶವೇ ಕಾರಣ ಎಂದು ಗೊತ್ತಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಕರ ರಾಶಿ ಭವಿಷ್ಯ.

Mon Feb 27 , 2023
  ನೀವು ಇತರರೊಡನೆ ನಿಮ್ಮ ಖುಷಿಯ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಂತೆ ನಿಮ್ಮ ಆರೋಗ್ಯ ಅರಳುತ್ತದೆ. ಆದರೆ ಇದನ್ನು ನಿರ್ಲಕ್ಷಿಸುವುದು ನಿಮಗೆ ತೊಂದರೆ ತರುತ್ತದೆ. ನೀವು ಇತರರ ಮಾತುಗಳನ್ನು ನಂಬಿ ಇಂದು ಹೂಡಿಕೆ ಮಾಡಿದಲ್ಲಿ ಇಂದು ಆರ್ಥಿಕ ನಷ್ಟದ ಸಾಧ್ಯತೆಯಿದೆ. ತಂದೆಯ ಕಠಿಣ ನಡವಳಿಕೆ ನಿಮಗೆ ಸಿಟ್ಟು ಬರಿಸಬಹುದು. ನೀವು ವಿಷಯವನ್ನು ನಿಯಂತ್ರಣದಲ್ಲಿಡಲು ಶಾಂತರಾಗಿರುವ ಅಗತ್ಯವಿದೆ. ನೀವು ಈ ಮೂಲಕ ಲಾಭ ಪಡೆಯುತ್ತೀರಿ. ಪ್ರೀತಿಯ ಸಂಗೀತವನ್ನು ಯಾವಾಗಲೂ ಅದರಲ್ಲೇ ಮುಳುಗಿರುವವರು ಕೇಳಬಹುದು. ಇದು […]

Advertisement

Wordpress Social Share Plugin powered by Ultimatelysocial