ಮಲೇರಿಯಾ ನಿಯಂತ್ರಣಕ್ಕೆ ಬಳಸುವ ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಕೆ ನಿಲ್ಲಿಸುವಂತೆ ಬ್ರಿಟನ್ ಸರಕಾರ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ”ಕೊರೊನಾ ಸೋಂಕನ್ನು ಆರಂಭಿಕ ಹಂತದಲ್ಲಿಯೇ ನಿಯಂತ್ರಿಸುವಲ್ಲಿ ಎಚ್ಸಿಕ್ಯೂ ಸಹಕಾರಿದ್ರೂ ಕೂಡಾ ದಾಖಲಾಗಿರುವ ರೋಗಿಗಳಲ್ಲಿ ಇದರ ಉಪಯೋಗಕ್ಕಿಂತ ಅನಾಹುತವಾಗುವ ಸಾಧ್ಯತೆಯೇ ಹೆಚ್ಚಾಗಿದೆ. ಇದರ ಬಳಕೆಯಿಂದ ಹೃದಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಸಾವು ಸಹ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಆಸ್ಪತ್ರೆಗಳಲ್ಲಿ ಎಚ್ಸಿಕ್ಯೂ ಬಳಕೆ ನಿಲ್ಲಿಸುವಂತೆ ಔಷಧಗಳು ಮತ್ತು ಆರೋಗ್ಯ ಸೇವೆ ಉತ್ಪನ್ನಗಳ ನಿಯಂತ್ರಣ ಪ್ರಾಧಿಕಾರ ಸೂಚನೆ ನೀಡಿದೆ,” ಎಂದು ಬ್ರಿಟನ್ ವೈದ್ಯಕೀಯ ಸೇವೆಗಳ ಸಲಹೆಗಾರ ಡಾ.ನೀರಜ್ ಪಟೇಲ್ ತಿಳಿಸಿದ್ದಾರೆ.
ಹೈಡ್ರಾಕ್ಸಿಕೋರೊಕ್ವಿನ್ ಬಳಕೆಗೆ ನಿಷೇಧ
Please follow and like us: