೧೦೦ಕ್ಕೂ ಹೆಚ್ಚು ಪೊಲೀಸ್ ಕ್ವಾರಂಟೈನ್

ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನದ ಉತ್ತರ ಬಡಾವಣೆ ಹಾಗೂ ಇಂದಿರಾನಗರವನ್ನು ಸೀಲ್’ಡೌನ್ ಮಾಡಲಾಗಿದೆ. ಪೊಲೀಸ್ ಪೇದೆ ಹಾಗೂ ಅರಳಿಕಟ್ಟೆ ಪಕ್ಕದ ರಸ್ತೆಯ ನಿವಾಸಿ ಸೇರಿದಂತೆ ಇಲ್ಲಿವರೆಗೂ ಹಾಸದಲ್ಲಿ ಒಟ್ಟು೧೪ ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.  ಪೊಲೀಸ್ ಪೇದೆಯೊಬ್ಬರಲ್ಲಿ ಕೊರೋನಾ ವೈರಸ್ ಇದೆಯೆಂದು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಹಾಸನದ ಎರಡು ಏರಿಯಾಗಳನ್ನು ಸೀಲ್ ಡೌನ್ ಮಾಡಲಾಗಿದೆ. ಕೊರೋನಾ ದೃಢಪಟ್ಟಿರುವ ಪೊಲೀಸ್ ಪೇದೆಯು ಬೆಂಗಳೂರಿನಲ್ಲಿ ರ‍್ತವ್ಯ ನರ‍್ವಹಿಸಿ ಹಾಸನಕ್ಕೆ ಹಿಂದಿರುಗಿದ್ದರು. ಅದೇ ರೀತಿ ಈ ಪೋಲಿಸ್ ಪೇದೆಯು ಜಿಲ್ಲೆಯ ಪೊಲೀಸ್ ತರಬೇತಿ ಶಾಲೆಗೂ ಭೇಟಿ ನೀಡಿದ್ದ ಕಾರಣ ಇದೀಗ ನೂರಕ್ಕೂ ಹೆಚ್ಚು ಪೊಲೀಸರನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ. ಸದರಿ ವಿಚಾರವಾಗಿ ಮಾಹಿತಿ ನೀಡಿರುವ ಜಿಲ್ಲಾಧಿಕಾರಿಗಳು ಎರಡು ಏರಿಯಾಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿದ್ದಾರೆ. ಇಂದಿನಿಂದ ೨೮ ದಿನಗಳ ಕಾಲ ಈ ರಸ್ತೆಗಳನ್ನು ಸೀಲ್’ಡೌನ್ ಮಾಡಲಾಗಿದ್ದು, ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತವೇ ಪೂರೈಕೆ ಮಾಡಲಿದ್ದು, ಜನರು ಬಹಳ ಎಚ್ಚರವಹಿಸಬೇಕೆಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ತೆರಿಗೆ ಪಾವತಿ ರಿಯಾಯ್ತಿ ಅವಧಿ ಡಿಸೆಂಬರ್ ಕೊನೆವರೆಗೂ ವಿಸ್ತರಣೆಯಾಗಲಿ..

Mon May 25 , 2020
ಇಳಕಲ್: ಸ್ವಯಂ ಘೋಷಿತ ತೆರಿಗೆ ಪದ್ಧತಿ (ಎಸ್ಎಎಸ್) ಅನುಸಾರ 2020-2021ನೇ ಸಾಲಿನ ಆರ್ಥಿಕ ವರ್ಷಕ್ಕೆ ತೆರಿಗೆ ದರ ಹೆಚ್ಚಳದ ಕ್ರಮವನ್ನು ಕೈಬಿಡಬೇಕು. ಈ ವರ್ಷದ ಆಸ್ತಿ ತೆರಿಗೆ ಪಾವತಿಸಲು ಮೇ 31ರವರೆಗೆ ನೀಡಿರುವ ಶೇ. 5ರ ರಿಯಾಯ್ತಿ ಅವಧಿಯನ್ನು  ಡಿಸೆಂಬರ್ 31ರವರೆಗೂ ವಿಸ್ತರಿಸಬೇಕೆಂದು ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಆಗ್ರಹಿಸಿದ್ದಾರೆ.  ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ಬಗ್ಗೆ ಸಮಗ್ರ ವಿವರದ ಪತ್ರ ಬರೆದಿರುವ ಅವರು, ಕೊರೊನಾದಿಂದ ಜನ ಜೀವನ ದುಸ್ತರವಾಗಿದೆ. […]

Advertisement

Wordpress Social Share Plugin powered by Ultimatelysocial