11 ತಿಂಗಳ ಮಗು ಸಾವು

ಚಲಸ್ಸೇರಿ ನಿವಾಸಿ ಸಾದಿಕ್ ಅವರ ಆಪ್ತ ಸಂಬಂಧಿಕರಿಗೆ ಕರೊನಾ ವೈರಸ್​ ಪಾಸಿಟಿವ್ ಇದ್ದ ಕಾರಣ, ಸಾದಿಕ್ ಮತ್ತು ಆತನ ಪತ್ನಿಗೆ ಕ್ವಾರಂಟೈನ್ ನಲ್ಲಿರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದರು. ಇದರ ಹಿನ್ನೆಲೆಯಲ್ಲಿ ತಮ್ಮ 11 ತಿಂಗಳ ಮಗು ಮೊಹಮ್ಮದ್ ಇಸ್​ಖಾನ್ ನನ್ನು ಸಮೀಪದ ಸಂಬಂಧಿಕರ ಬಳಿ ಬಿಟ್ಟಿದ್ದರು. ತಡರಾತ್ರಿ ಶನಿವಾರ  ಬಾತ್​ರೂಮ್​ನಲ್ಲಿ ತುಂಬಿಟ್ಟಿದ್ದ ನೀರಿನ ಬಕೆಟ್ ಒಳಗೆ ಮಗು ಬಿದ್ದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸಮೀಪದ ಆಸ್ಪತ್ರೆಗೆ ಮಗುವನ್ನು ಕರೆದೊಯ್ದರೂ ಪ್ರಯೋಜನವಾಗಿಲ್ಲ. ಮಗುವಿನ ಪ್ರಾಣ ಉಳಿಸಲು ಆಗಲಿಲ್ಲ. ನಂತರ ಮಗುವಿನ ಮೃತದೇಹವನ್ನು ಖಾಸಗಿ ಆಸ್ಪತ್ರೆಯಿಂದ  ತ್ರಿಶ್ಶೂರ್ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಿದ್ದು ಕೋವಿಡ್ 19 ರ ಟೆಸ್ಟ್​ಗೆ ಒಳಪಡಿಸಲಾಗಿದೆ. ಸದ್ಯಕ್ಕೆ ಇದರ ಫಲಿತಾಂಶ ಇನ್ನೂ ಬಂದಿಲ್ಲ, ಮತ್ತು ಈ ಪ್ರಕರಣವು ಚಲಸ್ಸೇರಿ ಪೊಲೀಸ್​ ಠಾಣೆಯ ದಾಖಲಾಗಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಯಾರ ಮಧ್ಯಸ್ಥಿಕೆಯು ಬೇಡ ಎಂದ ಶಾ

Mon Jun 1 , 2020
ಉಭಯ ದೇಶಗಳ ನಡುವೆ ಉದ್ಭವಿಸಿರುವ ಬಿಕ್ಕಟ್ಟು ಪರಿಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳಿದ್ದರು. ಈ ವಿಷಯಕ್ಕೆ ಸಂಭಂದಿಸಿದಂತೆ ಭಾರತ- ಚೀನ ನಡುವಿನ ಲಡಾಖ್‌ ಗಡಿಯ ಬಿಕ್ಕಟ್ಟು ಶಮನಕ್ಕೆ ರಾಜತಾಂತ್ರಿಕ, ಮಿಲಿಟರಿ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಭಾರತದ ಈ ವಿಚಾರದಲ್ಲಿ ಬೇರಾವುದೇ ದೇಶ ಮಧ್ಯ ಪ್ರವೇಶಿಸುವ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ  ಹೇಳಿದ್ದಾರೆ. ಹಾಗೆಯೇ ನಾನು ಅಮೆರಿಕ ಅಧ್ಯಕ್ಷರ ಹೇಳಿಕೆಗೆ […]

Advertisement

Wordpress Social Share Plugin powered by Ultimatelysocial