ಬಾಲಕಿ ಮೇಲೆ ಅತ್ಯಾಚಾರ: ಎಸ್‌ಪಿ, ಬಿಎಸ್‌ಪಿ ಜಿಲ್ಲಾಧ್ಯಕ್ಷರು ಸೇರಿ 7 ಮಂದಿ ಬಂಧನ

ಲಲಿತಪುರ, ಉತ್ತರಪ್ರದೇಶ: 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮತ್ತು ಬಹುಜನ ಸಮಾಜ ಪಕ್ಷದ ಜಿಲ್ಲಾ ಅಧ್ಯಕ್ಷರು ಸೇರಿ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಅ.12 ರಂದು ಸದರ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ತಂದೆ ಮತ್ತು ಚಿಕ್ಕಪ್ಪ ಹಾಗೂ ಮೂವರು ಅಪರಿಚಿತ ವ್ಯಕ್ತಿಗಳು ಸೇರಿ 25 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.

ನಗರದ ವಿವಿಧ ಭಾಗಗಳಲ್ಲಿ ತನ್ನ ಮೇಲೆ ಐದು ವರ್ಷಗಳ ಕಾಲ ಅತ್ಯಾಚಾರ ಮಾಡಿರುವುದಾಗಿ ಬಾಲಕಿ ಮೂವರು ಅಪರಿಚಿತರು ಸೇರಿ 25 ವ್ಯಕ್ತಿಗಳ ಹೆಸರು ಹೇಳಿದ್ದಾಳೆ. ಬಾಲಕಿಯ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಪಾಠಕ್ ಹೇಳಿದ್ದಾರೆ.

ಮಿರ್ಜಾಪುರ ಜಿಲ್ಲೆಯ ಹೋಟೆಲ್ ಮೇಲೆ ಶುಕ್ರವಾರ ದಾಳಿ ನಡೆಸಲಾಗಿದ್ದು, ಅಲ್ಲಿಂದ ಲಲಿತ್‌ಪುರದ ಸಮಾಜವಾದಿ ಪಕ್ಷದ ಜಿಲ್ಲಾ ಅಧ್ಯಕ್ಷ ತಿಲಕ್ ಯಾದವ್ ಮತ್ತು ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ದೀಪಕ್ ಅಹಿರ್ವಾರ್ ಹಾಗೂ ಎಂಜಿನಿಯರ್‌ ಮಹೇಂದ್ರ ದುಬೆ ಎಂಬುವವರನ್ನು ಬಂಧಿಸಲಾಗಿದೆ. ಮೂವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ನಾಲ್ಕು ಮಂದಿಯನ್ನು ಬಂಧಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಟೆಲಿಫೋನ್ ಗೆಳತಿಯನ್ನು ಭೇಟಿ ಮಾಡಲು 240 ಕಿ.ಮೀ ಪ್ರಯಾಣಿಸಿದ 68 ರ ವೃದ್ಧ; ಸಿಕ್ಕಿದ್ದು ಮಾತ್ರ ತಿರಸ್ಕಾರ!

Sun Oct 17 , 2021
ತಿರುವನಂತಪುರಂ: ಟೆಲಿಫೋನ್ ಮೂಲಕ ಪರಿಚಯವಾಗಿದ್ದ ಗೆಳತಿಯನ್ನು ಭೇಟಿ ಮಾಡುವುದಕ್ಕೆ 240 ಕಿ.ಮೀ ಸಂಚರಿಸಿ ಬಂದಿದ್ದ 68 ರ ವೃದ್ಧ ವ್ಯಕ್ತಿಗೆ ನಿರಾಶೆ ಉಂಟಾಗಿ ವಾಪಸ್ ತೆರಳಿರುವ ವಿಲಕ್ಷಣ ಘಟನೆ ಕೇರಳದಲ್ಲಿ ವರದಿಯಾಗಿದೆ. ವ್ಯಾಪಿನ್ ಬಳಿಯ ನಂಜಕಲ್ ಮೂಲದ ವ್ಯಕ್ತಿಗೆ ಮೊಬೈಲ್ ಮೂಲಕ ಮಹಿಳೆಯೊಬ್ಬರು ಪರಿಚಯವಾಗಿದ್ದರು. ಈಕೆಯನ್ನು ಭೇಟಿ ಮಾಡಬೇಕೆಂಬ ಉದ್ದೇಶದಿಂದ 68 ವರ್ಷದ ವೃದ್ಧ ಮಹಿಳೆ ಇದ್ದ ಕುತುಪರಂಬ ಎಂಬ ಸ್ಥಳಕ್ಕೆ 240 ಕಿ.ಮೀ ಸಂಚರಿಸಿ ಆಗಮಿಸಿದ್ದರು. ಆದರೆ ಕೊನೆಗೆ ಮಹಿಳೆ ಈತನನ್ನು […]

Advertisement

Wordpress Social Share Plugin powered by Ultimatelysocial