ಟೆಲಿಫೋನ್ ಗೆಳತಿಯನ್ನು ಭೇಟಿ ಮಾಡಲು 240 ಕಿ.ಮೀ ಪ್ರಯಾಣಿಸಿದ 68 ರ ವೃದ್ಧ; ಸಿಕ್ಕಿದ್ದು ಮಾತ್ರ ತಿರಸ್ಕಾರ!

ತಿರುವನಂತಪುರಂ: ಟೆಲಿಫೋನ್ ಮೂಲಕ ಪರಿಚಯವಾಗಿದ್ದ ಗೆಳತಿಯನ್ನು ಭೇಟಿ ಮಾಡುವುದಕ್ಕೆ 240 ಕಿ.ಮೀ ಸಂಚರಿಸಿ ಬಂದಿದ್ದ 68 ರ ವೃದ್ಧ ವ್ಯಕ್ತಿಗೆ ನಿರಾಶೆ ಉಂಟಾಗಿ ವಾಪಸ್ ತೆರಳಿರುವ ವಿಲಕ್ಷಣ ಘಟನೆ ಕೇರಳದಲ್ಲಿ ವರದಿಯಾಗಿದೆ.

ವ್ಯಾಪಿನ್ ಬಳಿಯ ನಂಜಕಲ್ ಮೂಲದ ವ್ಯಕ್ತಿಗೆ ಮೊಬೈಲ್ ಮೂಲಕ ಮಹಿಳೆಯೊಬ್ಬರು ಪರಿಚಯವಾಗಿದ್ದರು. ಈಕೆಯನ್ನು ಭೇಟಿ ಮಾಡಬೇಕೆಂಬ ಉದ್ದೇಶದಿಂದ 68 ವರ್ಷದ ವೃದ್ಧ ಮಹಿಳೆ ಇದ್ದ ಕುತುಪರಂಬ ಎಂಬ ಸ್ಥಳಕ್ಕೆ 240 ಕಿ.ಮೀ ಸಂಚರಿಸಿ ಆಗಮಿಸಿದ್ದರು. ಆದರೆ ಕೊನೆಗೆ ಮಹಿಳೆ ಈತನನ್ನು ಭೇಟಿ ಮಾಡಲು ನಿರಾಕರಿಸಿದ್ದಾರೆ.

ಕುತುಪರಂಬ ಪೊಲೀಸರು ಈ ಘಟನೆಯನ್ನು ಸ್ಪಷ್ಟಪಡಿಸಿದ್ದು, “ಈ ಸಂಬಂಧ ಇಬ್ಬರೂ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಸಿದ್ಧರಿಲ್ಲ” ಎಂದು ಹೇಳಿದ್ದಾರೆ.

ಕುತುಪರಂಬಗೆ ಬಂದ 68 ವರ್ಷದ ವೃದ್ಧ ಪುರುಷ ತಾನು ಮಹಿಳೆಯನ್ನು ಭೇಟಿ ಮಾಡಬೇಕಿದ್ದ ಜಾಗಕ್ಕೆ ಆಟೋದಲ್ಲಿ ಬಂದಿದ್ದರು. ಆದರೆ ಆಕೆಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಬಂದಿತ್ತು. ಪ್ರದೇಶವನ್ನು ಸುತ್ತುತ್ತಿದ್ದ ಆಟೋ ಚಾಲಕನಿಗೆ ಆ ವೃದ್ಧನ ಬಳಿ ಹಣವಿಲ್ಲ ಎಂಬುದು ತಿಳಿದು ಬೇಸತ್ತು ಆಕ್ರೋಶಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಪೊಲೀಸರು ವೃದ್ಧನ ಕಥೆ ಕೇಳಿ ಮಹಿಳೆಗೆ ಕರೆ ಮಾಡಿದರು. ಪೊಲೀಸರೊಂದಿಗೆ ಮಾತನಾಡಿದ ಆ ಮಹಿಳೆ ತನಗೂ ವೃದ್ಧನಿಗೂ ಮೊಬೈಲ್ ಮೂಲಕ ಪರಿಚಯವಿರುವುದು ನಿಜ ಆದರೆ ಭೇಟಿ ಮಾಡುವುದಕ್ಕೆ ಇಷ್ಟವಿಲ್ಲ ಎಂಬ ಪ್ರತ್ಯುತ್ತರ ನೀಡಿದ್ದಾರೆ.

ವೃದ್ಧ ವ್ಯಕ್ತಿ ತನ್ನ ಪತ್ನಿಯನ್ನು ಕಳೆದುಕೊಂಡಿದ್ದರೆ, ಮಹಿಳೆಯ ಪತಿಯೂ ಸಾವನ್ನಪ್ಪಿದ್ದಾರೆ. ಮಹಿಳೆಯ ಸಂಕಷ್ಟ ಕೇಳಿ ಕುತುಪರಂಬಗೆ ತೆರಳಿ ಆಕೆಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದರು ಆ ವೃದ್ಧ ವ್ಯಕ್ತಿ ಎಂದು ತಿಳಿದುಬಂದಿದೆ. ಕೊನೆಗೆ ಪೊಲೀಸರೇ ಆತನಿಗೆ ಟಿಕೆಟ್ ಬುಕ್ ಮಾಡಿಸಿ ಊರು ತಲುಪಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಗೂಗಲ್​ ಮ್ಯಾಪ್​ ನೆರವಿನಿಂದ ಗುರಿ ಮುಟ್ಟಲು ಹೊರಟ ಲಾರಿಗಳಿಗೆ ಮಾರ್ಗ ಮಧ್ಯೆ ಕಾದಿತ್ತು ಶಾಕ್​​..!

Sun Oct 17 , 2021
ಅಗಲಿ: ಯಾವುದಾದರೂ ಸ್ಥಳಕ್ಕೆ ಹೋಗಬೇಕಾದಾಗ, ಯಾವುದಾದರೂ ಸ್ಥಳವನ್ನು ನೋಡಿ ತಿಳಿಯಬೇಕಾದಾಗ ಸಾಮಾನ್ಯವಾಗಿ ನಾವೆಲ್ಲ ಒಂದಲ್ಲ ಒಂದು ಸಲ ಗೂಗಲ್ ಮ್ಯಾಪ್​, ಗೂಗಲ್​ ಸರ್ಚ್​ನ ಮೊರೆ ಹೋಗಿರುತ್ತೇವೆ. ಅದರಲ್ಲೂ ಗೂಗಲ್​ ಮ್ಯಾಪ್ ಹೆಚ್ಚಾಗಿ ಬಳಕೆ ಮಾಡುತ್ತೇವೆ. ಆದರೆ, ಗೂಗಲ್​ ಮ್ಯಾಪ್​ ಬಳಸುವಾಗ ಸ್ವಲ್ಪ ಎಚ್ಚರ ತಪ್ಪಿದರೆ ಏನಾಗಬಹುದು ಎಂಬುದಕ್ಕೆ ಕೇರಳದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆ ಆಗಿದೆ. ಟ್ರೈಲರ್​ ಲಾರಿ ಉರುಳಿಬಿದ್ದ ಪರಿಣಾಮ ಹಿಂದೆ ಬರುತ್ತಿದ್ದ ಮತ್ತೊಂದು ಲಾರಿ ಸಿಲುಕಿ ಭಾರೀ […]

Advertisement

Wordpress Social Share Plugin powered by Ultimatelysocial