150 ಕೋಟಿ ಗಳಿಕೆ ಮಾಡಿದ ಶಾರುಖ್‌ ಅಭಿನಯದ “ಜವಾನ್” ಸಿನೆಮಾ:

ಶಾರುಖ್‌ ಅಭಿನಯದ “ಜವಾನ್” ಸಿನೆಮಾವು ಸೆಪ್ಟೆಂಬರ್‌ 7 ರಂದು ವಿಶ್ವಾದ್ಯಂತ ಬಿಡುಗಡೆಯಾಗಿದ್ದು ಪ್ರೇಕ್ಷರಿಂದ ಭರ್ಜರಿ ರೆಸ್ಪಾನ್ಸ್‌ ಪಡೆದಿದೆ ಹಾಗು ಒಂದೇ ದಿನದಲ್ಲಿ 150 ಕೋಟಿ ಗಳಿಕೆ ಮಾಡಿದೆ. ಭಾರತದಲ್ಲೇ 75 ಕೋಟಿಯನ್ನು ಗಳಿಸಿದೆ ಎಂದು ಮೂಲಗಳು ತಿಳಿಸಿವೆ. ವಿಶೇಷವೆಂದರೆ, ಶಾರುಖ್ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ. ಪಠಾಣ್‌ ಸಿನಿಮಾ ಮೊದಲ ದಿನದಲ್ಲಿ 55 ಕೋಟಿ ಗಳಿಸುವ ಮೂಲಕ ಆರಂಭಿಕ ದಿನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿತ್ತು. ಈಗ ಜವಾನ್‌ ಸಿನಿಮಾವು 75 ಕೋಟಿ ಗಳಿಸುವ ಮೂಲಕ ಪಠಾಣ್‌ ಸಿನಿಮಾದ ದಾಖಲೆಯನ್ನು ಮುರಿದಿದೆ. ಈ ಚಿತ್ರದಲ್ಲಿ ಶಾರುಖ್‌ ಖಾನ್‌ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ, ನಯನತಾರಾ ಮುಂತಾದ ಸ್ಟಾರ್​ ಕಲಾವಿದರು ಶಾರುಖ್​ ಖಾನ್​ ಜೊತೆ ತೆರೆ ಹಂಚಿಕೊಂಡಿದ್ದಾರೆ. ಮಾಸ್​ ಮನರಂಜನೆ ಬಯಸುವ ಪ್ರೇಕ್ಷಕರಿಗೆ ‘ಜವಾನ್​’ ಸಿನಿಮಾ ಇಷ್ಟ ಆಗುತ್ತದೆ. ಈ ಚಿತ್ರವನ್ನು ಕಾಲಿವುಡ್​ನ ಖ್ಯಾತ ನಿರ್ದೇಶಕ ಅಟ್ಲಿ ಅವರು ನಿರ್ದೇಶಿಸಿದ್ದಾರೆ. ದೇಶಭಕ್ತಿ, ಫ್ಯಾಮಿಲಿ ಎಮೋಷನ್​ ಮುಂತಾದ ಅಂಶಗಳು ಈ ಸಿನಿಮಾದಲ್ಲಿ ಹೈಲೈಟ್​ ಆಗಿವೆ. ಬಹುತಾರಾಗಣ ಇರುವುದರಿಂದ ಈ ಚಿತ್ರವು ಹಲವು ಪ್ರೇಕ್ಷರನ್ನು ಸೆಳೆಯುತಿದೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ಜಿ- 20 ಶೃಂಗಸಭೆ: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯನ್ನು ಬರಮಾಡಿಕೊಂಡ ಶೋಭಾ ಕರಂದ್ಲಾಜೆ!

Fri Sep 8 , 2023
ರಾಷ್ಟ್ರರಾಜಧಾನಿಯಲ್ಲಿ ನಾಳೆಯಿಂದ ಎರಡು ದಿನ ನಡೆಯಲಿರುವ ಜಿ-20 ಶೃಂಗಸಭೆಗಾಗಿ ಇಟಿಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಇಂದು ದೆಹಲಿಗೆ ಆಗಮಿಸಿದರು. ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ನಾಳೆಯಿಂದ ಎರಡು ದಿನ ನಡೆಯಲಿರುವ ಜಿ-20 ಶೃಂಗಸಭೆಗಾಗಿ ಇಟಿಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಇಂದು ದೆಹಲಿಗೆ ಆಗಮಿಸಿದರು. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಭಾರತೀಯ […]

Advertisement

Wordpress Social Share Plugin powered by Ultimatelysocial