ತೆರಿಗೆ ವಂಚನೆ ಪ್ರಕರಣ: ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಬಂಧನ

ತೆರಿಗೆ ವಂಚನೆ ಪ್ರಕರಣ: ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಬಂಧನ

ಕಾನ್ಪುರ: ತೆರಿಗೆ ವಂಚನೆ ಆರೋಪದ ಮೇಲೆ ಕೇಂದ್ರೀಯ ಸಂಸ್ಥೆಗಳು ಕಾನ್ಪುರ ಮೂಲದ ಉದ್ಯಮಿ ಪಿಯೂಷ್ ಜೈನ್ ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಮುಂದಿನ ಕ್ರಮಕ್ಕಾಗಿ ಸುಗಂಧ ದ್ರವ್ಯ ಉದ್ಯಮಿಯನ್ನು ಕಾನ್ಪುರದಿಂದ ಅಹಮದಾಬಾದ್‌ಗೆ ಕರೆದೊಯ್ಯುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ತೆರಿಗೆ ವಂಚನೆ ಆರೋಪದ ಮೇಲೆ ಪಿಯೂಷ್ ಜೈನ್ ಅವರನ್ನು ಬಂಧಿಸಲಾಗಿದೆ ಎಂದು ಸರಕು ಮತ್ತು ಸೇವಾ ತೆರಿಗೆಯ ಜಂಟಿ ಆಯುಕ್ತ(ಕಾನ್ಪುರ) ಸುರೇಂದ್ರ ಕುಮಾರ್ ಅವರು ತಿಳಿಸಿದ್ದಾರೆ.

ಕಳೆದ ವಾರ ಜೈನ್ ಒಡೆತನದ ಕಂಪನಿ, ಕಚೇರಿ ಮತ್ತು ಮನೆ ಮೇಲೆ ಸರಣಿ ದಾಳಿ ನಡೆಸಿದ ಅಧಿಕಾರಿಗಳು ನಗದು ಸೇರಿದಂತೆ 257 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ನಕಲಿ ಇನ್‌ವಾಯ್ಸ್‌ಗಳ ಮೂಲಕ ಮತ್ತು ಇ-ವೇ ಬಿಲ್‌ಗಳಿಲ್ಲದೆ ಸರಕು ಸಾಗಣೆದಾರರಿಂದ ಸರಕುಗಳ ರವಾನೆಗೆ ಹಣವನ್ನು ಲಿಂಕ್ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಾಲ್ಕನೇ ದಿನವೂ ದಾಳಿ ಮುಂದುವರೆದಿದ್ದು, ದಾಳಿ ಮುಗಿಯುವ ಹೊತ್ತಿಗೆ ಇನ್ನಷ್ಟು ಹೆಚ್ಚಿನ ನಗದು ಪತ್ತೆಯಾಗುವ ಸಾಧ್ಯತೆ ಇದೆ. ಜಿಎಸ್​ಟಿಯ ಉತ್ತರ ಪ್ರದೇಶ, ಗುಜರಾತ್​ ಘಟಕಗಳ ಅಧಿಕಾರಿಗಳು ಸೇರಿ ಪಿಯುಷ್​ ಜೈನ್​ ಮನೆ ಮತ್ತು ಆತನಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. 40 ತಾಸುಗಳಿಂದಲೂ ಪಿಯುಷ್​ಗೆ ಸಂಬಂಧಪಟ್ಟ ಮನೆಗಳು, ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಹಣ ಎಣಿಕೆ ಕಾರ್ಯ ನಡೆಯುತ್ತಲೇ ಇದೆ. ಮನೆಗಳಲ್ಲಿರುವ ಕೆಲವು ಕೋಣೆಗಳ ಬಾಗಿಲನ್ನು ತೆಗೆಯಲು ಬಾರದ ಕಾರಣ ಬೀಗ ತೆಗೆಯುವವರನ್ನೂ ಕರೆಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

BBL 2021: ಟಿ20 ಕ್ರಿಕೆಟ್​ನ ಅತ್ಯಂತ ದುಬಾರಿ ಓವರ್​ಗಳನ್ನು ಎಸೆದ ಆಸೀಸ್ ವೇಗಿ

Mon Dec 27 , 2021
Liam Guthrie: ಲಿಯಾಮ್ ಅವರ 24 ಎಸೆತಗಳಲ್ಲಿ ಮೆಲ್ಬೋರ್ನ್ ತಂಡದ ಬ್ಯಾಟರ್​ಗಳು 7 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಬಾರಿಸಿದರು.ಟಿ20 ಕ್ರಿಕೆಟ್​ ಪ್ರತಿಯೊಂದು ರನ್​ಗಳು ಕೂಡ ಅತ್ಯಮೂಲ್ಯ. ಹೀಗಾಗಿಯೇ ಟಿ20 ಕ್ರಿಕೆಟ್​ನಲ್ಲಿ ಬೌಲರುಗಳು ನೀಡುವ ರನ್​ಗಳು ಸದಾ ಚರ್ಚೆಯಲ್ಲಿರುತ್ತದೆ. ಇದೀಗ ಬಿಗ್ ಬ್ಯಾಷ್ ಲೀಗ್‌ನ (BBL 2021) 24 ವರ್ಷದ ಬೌಲರ್ ಲಿಯಾಮ್ ಗುತ್ರೀ ಕೂಡ ಸುದ್ದಿಯಾಗಿದ್ದಾರೆ. ಆದರೆ ಅದು ಕಳಪೆ ದಾಖಲೆಯಿಂದಾಗಿ ಎಂಬುದು ವಿಶೇಷ. ಹೌದು, ಬ್ರಿಸ್ಬೇನ್ ಹೀಟ್‌ […]

Advertisement

Wordpress Social Share Plugin powered by Ultimatelysocial