ಭಾರತೀಯ ಪೌರತ್ವ ತೊರೆದ 16 ಲಕ್ಷ ಜನ, ಇದಕ್ಕೇನು ಕಾರಣ?

ನವದೆಹಲಿ: 2011ರಿಂದ ಈವರೆಗೆ ಸುಮಾರು 16 ಲಕ್ಷ ಜನರು ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ.

ಈ ಪೈಕಿ ಕಳೆದ ವರ್ಷ 2,25,60 ಜನರು ತೊರೆದಿದ್ದರೆ, 2020ರಲ್ಲಿ ಅತಿ ಕಡಿಮೆ ಎಂದರೆ 85,256 ಜನರು ಪೌರತ್ವ ಬಿಟ್ಟುಕೊಟ್ಟಿದ್ದಾರೆ ಎಂದರು ಸರ್ಕಾರದ ಅಂಕಿ ಸಂಖ್ಯೆಗಳು ತಿಳಿಸಿವೆ. ಬಹುತೇಕರು ಉದ್ಯೋಗ ಕಾರಣಕ್ಕಾಗಿ ದೇಶವನ್ನು ಬಿಟ್ಟು ಬೇರೆ ದೇಶಗಳ ಪೌರತ್ವವನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಅಮೆರಿಕ ಹಾಗೂ ಯುಎಇ ಪೌರತ್ವವನ್ನು ಹೆಚ್ಚಿನ ಭಾರತೀಯರು ಪಡೆದುಕೊಳ್ಳುತ್ತಿದ್ದಾರೆಂದು ಮೂಲಗಳು ತಿಳಿಸಿವೆ

ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ವಿದೇಶಾಂಗ ಸಚಿವ ಎಶ್ ಜೈಶಂಕರ್ ಅವರು ವರ್ಷವಾರು ಎಷ್ಟು ಜನರು ಪೌರತ್ವವನ್ನು ತೊರೆದಿದ್ದಾರೆಂಬ ಮಾಹಿತಿಯನ್ನು ನೀಡಿದ್ದಾರೆ. 2015ರಲ್ಲಿ 1,31,489, 2016ರಲ್ಲಿ 1,41,603 ಮತ್ತು 2017ರಲ್ಲಿ 1,33,049 ಜನರು ಭಾರತೀಯ ಪೌರತ್ವವನ್ನು ತೊರೆದಿದ್ದಾರೆಂದು ಅವರು ಮಾಹಿತಿ ನೀಡಿದ್ದಾರೆ.

ಇದೇ ವೇಳೆ, 2018ರಲ್ಲಿ 1,34,561 ಮಂದಿ, 2019ರಲ್ಲಿ 1,44,017 ಹಾಗೂ 2021ರಲ್ಲಿ 1,63,370 ಜನರು ಭಾರತೀಯ ಪೌರತ್ವವನ್ನು ಬಿಟ್ಟುಕೊಟ್ಟಿದ್ದಾರೆ. ಹಾಗೆಯೇ, 2011ರಲ್ಲಿ 1,22,819, 2012ರಲ್ಲಿ 1,20,923, 2013 ರಲ್ಲಿ 1,31,405 ಮತ್ತು 2014 ರಲ್ಲಿ 1,29,328 ಜನರು ಕೂಡ ಇದೇ ಹಾದಿಯನ್ನು ತುಳಿದಿದ್ದಾರೆಂದು ಜೈಶಂಕರ್ ಅವರು ಸಂಸತ್ತಿಗೆ ಮಾಹಿತಿ ನೀಡಿದರು.

ಕಳೆದ ಮೂರು ವರ್ಷಗಳಲ್ಲಿ ಐದು ಭಾರತೀಯ ಪ್ರಜೆಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪೌರತ್ವವನ್ನು ಪಡೆದಿದ್ದಾರೆ. ಇದೇ ವೇಳೆ, ಭಾರತೀಯರು ಪೌರತ್ವ ಪಡೆದ 135 ದೇಶಗಳ ಪಟ್ಟಿಯನ್ನು ಅವರು ಸಹ ಒದಗಿಸಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇಂದ್ರ ಗೃಹಸಚಿವ ಅಮಿತ್ ಷಾ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಆಗಮಿಸಲು ಕ್ಷಣಗಣನೆ.

Fri Feb 10 , 2023
ಮಂಗಳೂರು, ಫೆಬ್ರವರಿ 10: ಕೇಂದ್ರ ಗೃಹಸಚಿವ ಅಮಿತ್ ಷಾ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಆಗಮಿಸಲು ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಪುತ್ತೂರು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದೆ. ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಗಾಗಿ ಹಾಲಿ ಶಾಸಕ ಸಂಜೀವ ಮಠಂದೂರು ಮತ್ತು ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಪುತ್ತೂರು ಪಟ್ಟಣದ್ಯಾಂತ ಮತ್ತು ಅಮಿತ್ ಷಾ ಸಂಚರಿಸುವ ರಸ್ತೆಗಳಲ್ಲಿ ಅರುಣ್ ಕುಮಾರ್ ಪುತ್ತಿಲ […]

Advertisement

Wordpress Social Share Plugin powered by Ultimatelysocial