18 ಜೂಜುಕೋರರ ಬಂಧನ

ಲಾಕ್‍ಡೌನ್ ನಿಯಮವನ್ನು ಉಲ್ಲಂಘಿಸಿ ಸ್ನೇಹಿತರು ಹಾಗೂ ಸ್ಥಳೀಯರನ್ನು ಕರೆಸಿಕೊಂಡು ಮನೆಯನ್ನೇ ಜೂಜಾಟ ಅಡ್ಡವನ್ನಾಗಿ ಮಾಡಿಕೊಂಡಿದ್ದರು, ಇದರ ಬಗ್ಗೆ ಮಾಹಿತಿ ಸಿಕ್ಕಿದ ಮೇರೆಗೆ ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶೆಟ್ಟಿಹಳ್ಳಿ ಪಾರ್ಕ್ ರಸ್ತೆಯ ಮನೆಯೊಂದರಲ್ಲಿ ಜೂಜಾಟ ಆಡುತ್ತಿದ್ದ 18  ಜೂಜುಕೋರರನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ, ಮತ್ತು ಬಂಧಿತರಿಂದ 2,74,800 ರೂ. ನಗದು, ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

೭ನೇ ತರಗತಿ ವಿದ್ಯಾರ್ಥಿಯಿಂದ ಸಾಧನೆ

Fri May 29 , 2020
ಔರಂಗಾಬಾದ್ ಮೂಲದ ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಕೊರೊನಾ ವಾರಿಯರ್ಸ್ ನೆರವಿಗಾಗಿ ಕಾಂಟ್ಯಾಕ್ಟ್ ಲೆಸ್ ರೋಬೋಟ್ ಕಂಡು ಹಿಡಿದಿದ್ದಾನೆ. ಔರಂಗಾಬಾದ್‌ನಲ್ಲಿ ಏಳನೇ ತರಗತಿ ವ್ಯಾಸಾಂಗ ಮಾಡುತ್ತಿರುವ ಸಾಯಿ ಸುರೇಶ್ ದಂಗದಾಲ್, ಈ ಕಾಂಟ್ಯಾಕ್ಟ್ ಲೆಸ್ ರೋಬೋವನ್ನು ಅಭಿವೃದ್ಧಿ ಪಡಿಸಿರುವ ವಿದ್ಯಾರ್ಥಿ. ರೋಗಿಗಳಿಗೆ ಔಷಧ ಮತ್ತು ಆಹಾರವನ್ನು ನೀಡಲು ಈ ವಿಶೇಷ ರೋಬೋ ಸಹಕಾರಿಯಾಗಲಿದ್ದು,, ವೈದ್ಯಕೀಯ ಸಿಬ್ಬಂದಿ ಹಾಗೂ ರೋಗಿಗಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇದು ನೆರವಾಗಿದೆ.  ಬ್ಯಾಟರಿ ಮೂಲಕ ಚಲಿಸುವ […]

Advertisement

Wordpress Social Share Plugin powered by Ultimatelysocial