2014 ರಲ್ಲೇ ನಡೆದಿತ್ತು ಪ್ರಿಯಂಕಾ ಚೋಪ್ರಾ ಮದುವೆ..

ಹಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ೨೦೧೮ರ ಡಿಸೆಂಬರ್‌ನಲ್ಲಿ ರಾಜಸ್ಥಾನದ ಜೋದ್‌ಪುರ್‌ದಲ್ಲಿ ನಿಕ್ ಮತ್ತು ಪ್ರಿಯಾಂಕಾ ಮದುವೆಯಾಗಿದ್ರು, ಆದ್ರೆ ಪ್ರಿಯಾಂಕಾ ಬಗ್ಗೆ ಹೊಸ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಬಾಂಬ್ ಸಿಡಿಸಿದೆ.ಏನಪ್ಪಾ ಅಂತೀರಾ ೨೦೧೪ರಲ್ಲೇ ಅಮೆರಿಕ ಮೂಲದ ವ್ಯಕ್ತಿಯೊಬ್ಬನನ್ನು ಪ್ರಿಯಾಂಕ ಮದುವೆಯಾಗಿದ್ದರಂತೆ ಹಾಗಂತ ಆ ಕೌತುಕದ ವಿಚಾರವನ್ನು ಪ್ರಿಯಾಂಕ ಬಹಿರಂಗಪಡಿಸಿಲ್ಲ. ಬದಲಿಗೆ ಮದುವೆಯಾಗಿದ್ದ ಪತಿ ಮಹಾಶಯನೇ ಆರು ವರ್ಷದ ಹಿಂದಿನ ಆ ಘಟನೆಯನ್ನು ಮತ್ತೆ ನೆನಪಿಸಿಕೊಂಡಿದ್ದು, ಟ್ವಿಟರ್‌ನಲ್ಲಿ ಮದುವೆ ಫೋಟೋ ಸಹ ಶೇರ್ ಮಾಡಿದ್ದಾನೆ.ಆ ವ್ಯಕ್ತಿಯ ಹೆಸರು ಬ್ರೆಂಡಮ್ ಚಸ್ಟರ್. ಮೂಲತಃ ಅಮೆರಿಕಾದ ದಕ್ಷಿಣ ಪ್ಲೋರಿಡಾದವನು. ವೃತ್ತಿಯಲ್ಲಿ ಅಡ್ವೋಕೇಟ್ ಆಗಿರುವ ಬ್ರೆಂಡಮ್, ೨೦೧೪ರಲ್ಲಿ ಪ್ರಿಯಾಂಕಾ ಅವರನ್ನು ಭೇಟಿಯಾಗಿದ್ದ. ಭಾರತೀಯ ಸಂಪ್ರದಾಯದAತೆ ಹೂವಿನ ಮಾಲೆ ಹಾಕಿ ಪೋಟೋ ಸಹ ಕ್ಲಿಕ್ಕಿಸಿಕೊಮಡಿದ್ದ. ಆ ಆರು ವರ್ಷದ ಪೋಟೋವನ್ನು ಇದೀಗ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿಕೊಂಡು, ನಾನು ೨೦೧೪ರಲ್ಲೇ ಪ್ರಿಯಾಂಕಾ ಚೋಪ್ರಾ ಅವರನ್ನು ಮದುವೆಯಾಗಿದ್ದೆ. ಭಾರತೀಯ ಮಾಧ್ಯಮ ಇದನ್ನು ಗಮನಿಸಿದರೆ, ಮದುವೆಯಾದ ಬಗ್ಗೆ ಪೂರ್ತಿ ಸಂದರ್ಶನ ನೀಡಬಲ್ಲೆ ಎಂದು ಬರೆದುಕೊಂಡಿದ್ದಾನೆ.ಬ್ರೆಂಡಮ್ ಪೋಸ್ಟ್ಗೆ ಸಾಕಷ್ಟು ಕಮೆಂಟ್‌ಗಳು ಸಂದಾಯವಾಗಿದ್ದು, ನೇರವಾಗಿ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಒಂದು ನಿಮಿಷದಲ್ಲಿ ಫೇಮಸ್ ಆಗಬೇಕೆಂದು ಈ ರೀತಿಯಲ್ಲಿ ಮಾಡುತ್ತಿದ್ದೀಯ? ನೀಕ್ ಸ್ಥಿತಿ ಏನಾಗಿರಬೇಡ, ಎಂದೂ ಕಮೆಂಟ್ ಮಾಡಿದ್ದಾರೆ. ಆದರೆ ಈ ಬಗ್ಗೆ ಪ್ರಿಯಂಕಾ ಯವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ.

Please follow and like us:

Leave a Reply

Your email address will not be published. Required fields are marked *

Next Post

ಅಲ್ಲು ಅರ್ಜುನ್ ‘ಪುಪ್ಪ’ ಸಿನಿಮಾಗೆ ಬಾಲಿವುಡ್ ನಟಿ ಎಂಟ್ರಿ..?

Sun May 3 , 2020
ಟಾಲಿವುಡ್ ಸ್ಟೆöÊಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಪ್ಪ’ ಸಿನಿಮಾದ ಬಗ್ಗೆ ಮತ್ತೊಂದು ಇಟ್ರೆಸ್ಟಿಂಗ್ ಸುದ್ದಿ ಹೊರಬಿದ್ದಿದೆ. ಅಲ್ಲು ಲುಕ್‌ಗೆ ಫಿದಾ ಆಗಿರುವ ಅಭಿಮಾನಿಗಳು ಪುಪ್ಪ ಸಿನಿಮಾಗಾಗಿ ಕಾತರದಿಂದ ಕಾಯ್ತಿದ್ದಾರೆ. ಅಲ್ಲು ಪುಪ್ಪ ಸಿನಿಮಾದಲ್ಲಿ ಡಿ ಗ್ಲಾಮ್ ಆಗಿ ಕಾಣಿಸಿಕೊಂಡಿದ್ದು ಚಿತ್ರದ ಪೋಸ್ಟರ್ ಅಭಿಮಾನಿಗಳ ನಿದ್ದೆಗೆಡಿಸಿದೆ. ಅಂದ್ಹಾಗೆ ಚಿತ್ರದಲ್ಲಿ ಅಲ್ಲು ಅರ್ಜುನ್ ಪುಪ್ಪಕ್ ನಾರಾಯಣ್ ಎನ್ನುವ ಪಾತ್ರದಲ್ಲಿ ಡ್ರೆöÊವರ್ ಆಗಿ ಮಿಂಚಲಿದ್ದಾರೆ. ಖ್ಯಾತ ನಟ ವಿಜಯ್ ಸೇತುಪತಿ ಪುಪ್ಪ ಚಿತ್ರದಲ್ಲಿ […]

Advertisement

Wordpress Social Share Plugin powered by Ultimatelysocial