3 ಲಕ್ಷ ಮೌಲ್ಯದ ಎಂಡಿಎಂಎ ಮಾತ್ರೆಗಳು ಜಪ್ತಿ

ಬೆಂಗಳೂರು ಹಾಗು ಚೆನ್ನೈ ಏರ್ ಕಸ್ಟಮ್ಸ್ ಅಧಿಕಾರಿಗಳು ಜಂಟಿ‌ ಕಾರ್ಯಾಚರಣೆ ನಡೆಸಿದ್ದಾರೆ. ಎಂಡಿಎಂಎ ಟ್ಯಾಬ್ಲೆಟ್ ಆರ್ಡರ್ ಮಾಡಿದ್ದ ಭಾರತೀಯ ಮೂಲದ ಮಲೇಷಿಯನ್ ಪ್ರಜೆಯನ್ನ ಬಂಧಿಸಿದ್ದಾರೆ. ಕವಿ ಕುಮಾರ್ (25) ಬಂಧಿತ ಆರೊಪಿ. ವೃತ್ತಿಯಲ್ಲಿ ಬೆಂಗಳೂರಿನ ಅಮೇಜಾನ್ ಘಟಕದಲ್ಲಿ ಕ್ವಾಲಿಟಿ ಅನಾಲಿಸಿಸ್ಟ್ ಆಗಿ ಕೆಲಸ ಮಾಡ್ತಿದ್ದ. ಲಾಕ್ ಡೌನ್ ನಿಂದ ಚೆನ್ನೈಗೆ ಹೋಗಲಾರದೆ ಕೋರಮಂಗಲದ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದ. ಇದೇ ಸಮಯದಲ್ಲಿ ಜರ್ಮನಿಯಿಂದ ಎಂಡಿಎಂಎ ಟ್ಯಾಬ್ಲೆಟ್ ಗಾಗಿ ಆರ್ಡರ್ ಮಾಡಿದ್ದಾನೆ. ಆದ್ರೆ ಆರೋಪಿಯ ಚೆನ್ನೈ ವಿಳಾಸಕ್ಕೆ ಎಂಡಿಎಂಎ ಮಾತ್ರೆಗಳಿದ್ದ ಪಾರ್ಸಲ್ ಬಂದಿದೆ. ಇದೇ ವೇಳೆ ಚೆನ್ನೈ ನ ಏರ್ ಕಸ್ಟಮ್ಸ್ ಅಧಿಕಾರಿಗಳು ಏರ್ಪೋರ್ಟಿನಲ್ಲೆ 3 ಲಕ್ಷ ಮೌಲ್ಯದ  ಎಂಡಿಎಂಎ ಮಾತ್ರೆಗಳನ್ನ ಜಪ್ತಿ ಮಾಡಿದ್ದಾರೆ. ಆರ್ಡರ್ ಮಾಡಿದ್ದ ವಿಳಾಸ ಹುಡುಕಿ ಈರೋಡ್ ನಲ್ಲಿದ್ದ ಕವಿ ಕುಮಾರ್ ನ ಮನೆಗೆ ಹೋಗಿದ್ದಾರೆ. ಆದ್ರೆ ಆರೋಪಿ ಬೆಂಗಳೂರಿನ ಕೋರಮಂಗಲದಲ್ಲಿ ಇರೊದು ತಿಳಿದು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳೊಂದಿಗೆ ಸೇರಿ ಕಾರ್ಯಾಚರಣೆ ನಡೆಸಿ ಆರೋಪಿಯ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ದಯವಿಟ್ಟು ಆತ್ಮಹತ್ಯೆಗೆ ಶರಣಾಗಬೇಡಿ

Fri Jun 26 , 2020
ರಾಜ್ಯದಲ್ಲಿ ಕೊರೊನಾ ವೈರಸ್ ದಿನೇ ದಿನೇ ತನ್ನ ಕಬಂದ ಬಾಹು ಹರಡುತ್ತಿದ್ದು, ಸೋಂಕಿಗೆ ತುತ್ತಾದವರು ಭೀತಿಗೊಳಗಾಗಿ ದಯವಿಟ್ಟು ಆತ್ಮಹತ್ಯೆಗೆ ಶರಣಾಗಬೇಡಿ, ನಿಮ್ಮ ಪ್ರಾಣ ಕಳೆದುಕೊಳ್ಳಬೇಡಿ ಎಂದು ಕಮೀಷನರ್ ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ. ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೊನಾ ಭೀತಿಯಿಂದ ದಯವಿಟ್ಟು ಯಾರೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಬೇಡಿ. ಕೊರೊನಾ ಭಯದಿಂದ ಇಂದು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮಹಿಳಾ ರೋಗಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೂ ಮುನ್ನ ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಸೋಂಕಿತ […]

Advertisement

Wordpress Social Share Plugin powered by Ultimatelysocial