ಈ ರೈತರಿಗೆ 3000 ರೂ. ಮಾಸಿಕ ಪಿಂಚಣಿ, ಅರ್ಹತೆ, ಇತರೆ ಮಾಹಿತಿ.

ಕೇಂದ್ರ ಸರ್ಕಾರವು ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಪ್ರಧಾನ ಮಂತ್ರಿ ಕೃಷಿ ಸಂಚಯೀ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಸರ್ಕಾರವು ಹೊಂದಿದೆ. ಇದನ್ನು ಹೊರತುಪಡಿಸಿ ಇನ್ನು ಹಲವಾರು ರೈತ ಕಲ್ಯಾಣ ಯೋಜನೆಗಳನ್ನು ಸರ್ಕಾರವು ಹೊಂದಿದೆ.ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆ (ಪಿಎಂಕೆಎಂವೈ) ಅನ್ನು ಕೂಡಾ ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಜಾರಿ ಮಾಡಿದೆ.ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಭೂ ರಿಜಿಸ್ಟಾರ್‌ನಲ್ಲಿ ರೈತರ ಹೆಸರು ಉಲ್ಲೇಖವಾಗಿದ್ದರೆ ಮಾತ್ರ ಎಲ್ಲ ಸಣ್ಣ ಮತ್ತು ಮಧ್ಯಮ ರೈತರು ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆ ಅಡಿಯಲ್ಲಿ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ಇದರಲ್ಲಿ ಇನ್ನು ಕೆಲವು ಮಾನದಂಡಗಳು ಇದೆ. 2 ಹೆಕ್ಟರ್‌ಗಿಂತ ಭೂಮಿಯನ್ನು ಹೊಂದಿದ್ದರೆ, ಯಾರು 18 ಮತ್ತು 40 ವರ್ಷದ ವಯಸ್ಸಿನವರು ಆಗಿರುತ್ತಾರೋ ಅವರು ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ.ಹೌದು, ಇದು ಪಿಂಚಣಿ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಮಾಸಿಕವಾಗಿ 3000 ರೂಪಾಯಿ ಪಿಂಚಣಿಯನ್ನು ಪಡೆಯಬಹುದಾಗಿದೆ. ಅಂದರೆ ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆ ಅಡಿಯಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಅರ್ಹ ರೈತರು ನಿಗದಿತ ಪಿಂಚಣಿ 3000 ರೂಪಾಯಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಇದು ರೈತರಿಗಾಗಿ ಇರುವ ನಿವೃತ್ತಿ ಯೋಜನೆಯಾಗಿದೆ. ಅಂದರೆ 60 ವರ್ಷ ಕಳೆದ ಬಳಿಕ ಯೋಜನೆಯ ಲಾಭವನ್ನು ಪಡೆಯ ಬಹುದಾಗಿದೆಕಿಸಾನ್ ಮಂದನ್ ಯೋಜನೆಯ ಮಾಹಿತಿಕಿಸಾನ್ ಮಂದನ್ ಯೋಜನೆಯಂತೆಯೇ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಹೊಂದಿದೆ. ಈ ಯೋಜನೆಯಡಿಯಲ್ಲಿ ಅರ್ಹ ರೈತರು ವಾರ್ಷಿಕವಾಗಿ 6 ಸಾವಿರ ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ. ಆದರೆ ಕಿಸಾನ್ ಮಂದನ್ ಯೋಜನೆಯಲ್ಲಿ ಮಾಸಿಕವಾಗಿ 3 ಸಾವಿರ ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆಯಡಿಯಲ್ಲಿ ಪಿಂಚಣಿ ಪಡೆಯುತ್ತಿದ್ದ ರೈತರು ಸಾವನ್ನಪ್ಪಿದರೆ, ರೈತರ ಪತಿ/ಪತ್ನಿಗೆ ಶೇಕಡ 50ರಷ್ಟು ಪಿಂಚಣಿ ಲಭ್ಯವಾಗಲಿದೆ. ಮಕ್ಕಳಿಗೆ ಪಿಂಚಣಿ ಲಭ್ಯವಾಗದು. ಸಂಗಾತಿ ಮಾತ್ರ ಪಡೆಯಲು ಸಾಧ್ಯ.ಎಷ್ಟು ಹೂಡಿಕೆ ಮಾಡಬೇಕಾಗುತ್ತದೆ?ಕಿಸಾನ್ ಮಂದನ್ ಯೋಜನೆಯಲ್ಲಿ ರೈತರು ಮಾಸಿಕ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಯೋಜನೆಯಲ್ಲಿ ನೀವು ಹೂಡಿಕೆ ಮಾಡಬೇಕಾಗುತ್ತದೆ. ಹೂಡಿಕೆ ಮಾಡಿದರೆ ಮಾತ್ರ ಮಾಸಿಕ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ. 55 ರೂಪಾಯಿಯಿಂದ 200 ರೂಪಾಯಿವರೆಗೆ ಹೂಡಿಕೆ ಮಾಡಬಹುದು. ರೈತರಿಗೆ 60 ವರ್ಷವಾದಾಗ ಪಿಂಚಣಿಯನ್ನು ಕ್ಲೈಮ್ ಮಾಡಿಕೊಳ್ಳಬಹುದು. ಎಷ್ಟು ಮೊತ್ತವನ್ನು ಹೂಡಿಕೆ ಮಾಡುತ್ತಾರೋ ಅದರ ಆಧಾರದಲ್ಲಿ ಪಿಂಚಣಿ ನಿಗದಿಯಾಗಲಿದೆ. ಮಾಸಿಕವಾಗಿ ಹೂಡಿಕೆ ಮಾಡಬಹುದಾಗಿದೆ.ಈ ಮಾಹಿತಿ ತಿಳಿದಿರಲಿಕಿಸಾನ್ ಮಂದನ್ ಯೋಜನೆಯ ಲಾಭವನ್ನು ಪಡೆಯಬೇಕಾದರೆ ಸಣ್ಣ ರೈತರು ಬೇರೆ ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡುವಂತಿಲ್ಲ. ನ್ಯಾಷನಲ್ ಪಿಂಚಣಿ ಯೋಜನೆ (ಎನ್‌ಪಿಎಸ್), ಉದ್ಯೋಗಿಗಳ ರಾಜ್ಯ ವಿಮಾ ಕಾಪೋರೇಷನ್ ಯೋಜನೆ, ಉದ್ಯೋಗಿಗಳ ಫಂಡ್ ಯೋಜನೆಯಂತಹ ಯೋಜನೆಯಲ್ಲಿ ಹೂಡಿಕೆ ಮಾಡುವಂತಿಲ್ಲ. ಇನ್ನು ಕಾರ್ಮಿಕ ಮತ್ತು ಉದ್ಯೋಗಿಗಳ ಸಚಿವಾಲಯವು ಪ್ರಧಾನ ಮಂತ್ರಿ ಶ್ರಮ ಯೋಗಿ ಮಂದನ್ ಯೋಜನೆ ಅಥವಾ ಪ್ರಧಾನ ಮಂತ್ರಿ ವ್ಯಾಪಾರಿ ಮಂದನ್ ಯೋಜನೆ ಫಲಾನುಭವಿಗಳು, ಪಿಎಂಕೆಎಂವೈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ರೋಟರಿ' ಅಂತಾರಾಷ್ಟ್ರೀಯ ಸೇವಾ ಸಂಸ್ಥೆ.

Thu Feb 23 , 2023
‘ರೋಟರಿ’ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯನ್ನು 1905 ಫೆಬ್ರವರಿ 23ರಂದು ಶಿಕಾಗೋನಲ್ಲಿ ಪಾಲ್ ಹ್ಯಾರಿಸ್ ಮತ್ತು ಅವನ ಸಂಗಡಿಗರಾದ ಸಿಲ್ವೆಸ್ಟರ್ ಶೀಲೆ, ಗುಸ್ಟಾವಸ್ ಲೊಹ್ರೆ ಹಾಗೂ ಶೋರೆ ಹುಟ್ಟುಹಾಕಿದರು. ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ರೋಟರಿ ಇದು ಇಂದು ಪ್ರಪಂಚದಾದ್ಯಂತ ಬೆಳೆದಿದೆ. ಇಂದು ಇದು ಜಗತ್ತಿನ 200ಕ್ಕೂ ದೇಶಗಳಲ್ಲಿ ಸುಮಾರು1.40 ದಶಲಕ್ಷ ಸದಸ್ಯತ್ವವನ್ನು ಹೊಂದಿದೆ. ಇದರಲ್ಲಿ ಪುರುಷರ ಹಾಗೂ ಮಹಿಳೆಯರ ಸಾಮೂಹಿಕ ಸಹಭಾಗಿತ್ವವಿದೆ. ಈ ಸಂಸ್ಥೆ ಮಾನವ ಹಿತವನ್ನು ಮುಖ್ಯ ಧ್ಯೇಯವನ್ನಾಗಿ ಹೊಂದಿದೆ. […]

Advertisement

Wordpress Social Share Plugin powered by Ultimatelysocial