7ನೇ ರಾಜ್ಯ ವೇತನ ಆಯೋಗ, ಸಭೆ ಕರೆದ ಸರ್ಕಾರಿ ನೌಕರರು

 

ಬೆಂಗಳೂರು, ಫೆಬ್ರವರಿ 19; ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಶುಕ್ರವಾರ 2023-24ನೇ ಸಾಲಿನ ಬಜೆಟ್ ಮಂಡಿಸಿದರು.

ಬಜೆಟ್‌ನಲ್ಲಿ 7ನೇ ರಾಜ್ಯ ವೇತನ ಆಯೋಗದ ಬಗ್ಗೆ ಸರಿಯಾದ ಭರವಸೆ ನೀಡಿಲ್ಲ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಬಜೆಟ್‌ನಲ್ಲಿ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ವರದಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಬಜೆಟ್ ಬಳಿಕ ಪತ್ರಿಕಾಗೋಷ್ಠಿಯಲ್ಲಿ “7ನೇ ರಾಜ್ಯ ವೇತನ ಆಯೋಗವನ್ನು ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಚನೆ ಮಾಡಲಾಗಿದೆ” ಎಂದರು.

ಮಾಧ್ಯಮಗಳು 7ನೇ ವೇತನ ಆಯೋಗದ ಕುರಿತು ಕೇಳಿದಾಗ, “ಎಲ್ಲವನ್ನೂ ಬಜೆಟ್ ಭಾಷಣದಲ್ಲಿಯೇ ಹೇಳಬೇಕು ಎಂದೇನಿಲ್ಲ. ಸುಧಾಕರ್ ರಾವ್ ಅಧ್ಯಕ್ಷತೆಯ ಆಯೋಗದಿಂದ ವರದಿ ಕೇಳಿದ್ದೇವೆ. ಈ ವರ್ಷವೇ ವರದಿ ಅನುಷ್ಠಾನಗೊಳಿಸಬೇಕು ಎಂಬ ಗುರಿ ಇದೆ” ಎಂದು ವಿವರಿಸಿದರು.

ಬಜೆಟ್ ಭಾಷಣದ ಬಳಿಕ ರಾಜ್ಯ ಸರ್ಕಾರಿ ನೌಕರರ ಸಂಘ ಪ್ರತಿಕ್ರಿಯೆ ನೀಡಿತ್ತು. 7ನೇ ವೇತನ ಆಯೋಗದ ವರದಿ ಜಾರಿ ಕುರಿತು ಸ್ಪಷ್ಟವಾದ ಭರವಸೆ ನೀಡದಿದ್ದಲ್ಲಿ ಮಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿತ್ತು.

ಈಗ ಪತ್ರಿಕಾ ಪ್ರಕಟಣೆಯಲ್ಲಿ ಫೆಬ್ರವರಿ 21ರಂದು ಸಭೆ ನಡೆಸಲಾಗುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಹೇಳಿದೆ. ತುರ್ತು ರಾಜ್ಯ ಕಾರ್ಯಕಾರಣಿ, ಚುನಾಯಿತ ಪದಾಧಿಕಾರಿಗಳ ಮತ್ತು ವೃಂದ ಸಂಘಗಳ ಅಧ್ಯಕ್ಷರ ಸಭೆ ಎಂಬ ವಿಷಯದಲ್ಲಿ ಪ್ರಕಟಣೆ ಹೊರಡಿಸಲಾಗಿದೆ.

ರಾಜ್ಯದ 2023-24ರ ಆಯವ್ಯಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳಾದ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆಯ ಬಗ್ಗೆ ಯಾವುದೇ ಘೋಷಣೆಗಳನ್ನು ಸರ್ಕಾರವು ಪ್ರಸ್ತಾಪಿಸದೇ ಇರುವುದರಿಂದ ರಾಜ್ಯ ಸರ್ಕಾರಿ ನೌಕರರಲ್ಲಿ ನಿರಾಸೆ ಮೂಡಿರುತ್ತದೆ ಎಂದು ಹೇಳಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಲು ‘ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ವೃಂದ ಸಂಘಗಳ ಅಧ್ಯಕ್ಷರು – ಪದಾಧಿಕಾರಿಗಳ ಸಭೆ ಸರ್ಕಾರಿ ನೌಕರರ ಸಂಘದ ಚುನಾಯಿತ ನಿರ್ದೇಶಕರ’ ಸಭೆಯನ್ನು21/02/2023ನೇ ಮಂಗಳವಾರ ಸಂಜೆ 5 ಗಂಟೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆವರಣ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ಆಯೋಜನೆ ಮಾಡಲಾಗಿದೆ ಎಂದು ಹೇಳಿದೆ.

ಈ ಸಭೆಯು ರಾಜ್ಯ ಸರ್ಕಾರಿ ನೌಕರರ ಬದುಕಿನ ಪ್ರಮುಖ ನಿರ್ಣಯ ಕೈಗೊಳ್ಳುವ ಸಭೆಯಾಗಿದ್ದು, ತಾವುಗಳು ತಪ್ಪದೇ ಭಾಗವಹಿಸಲು ಕೋರಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

7ನೇ ವೇತನ ಆಯೋಗ ರಚನೆ ಕರ್ನಾಟಕ ಸರ್ಕಾರವು ಸರ್ಕಾರಿ ನೌಕರರು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ, ತುಟ್ಟಿಭತ್ಯೆ ಹಾಗೂ ಇತರ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ, ಪರಿಷ್ಕರಿಸಿ ಸರ್ಕಾರಕ್ಕೆ ವರದಿ ನೀಡಲು 7ನೇ ರಾಜ್ಯ ವೇತನ ಆಯೋಗವನ್ನು ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಚನೆ ಮಾಡಿದೆ.

ದಿನಾಂಕ 19/11/2022ರಲ್ಲಿ 7ನೇ ರಾಜ್ಯ ವೇತನ ಆಯೋಗವನ್ನು ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಚನೆ ಮಾಡಿ ಆದೇಶ ಹೊರಡಿಸಿದೆ. ಆಯೋಗಕ್ಕೆ ವಹಿಸಲಾಗಿರುವ ಪರಿಶೀಲನಾಂಶಗಳ ಕುರಿತಂತೆ ಸಾರ್ವಜನಿಕರು, ಸೇವಾ ಸಂಘಗಳು ಹಾಗೂ ಸರ್ಕಾರಿ ನೌಕರರು ಅಲ್ಲದೇ, ಇಲಾಖೆಗಳಿಂದ, ಸಂಸ್ಥೆಗಳಿಂದ ಮಾಹಿತಿ ಹಾಗೂ ಮುಕ್ತ ಸಲಹೆಗಳನ್ನು ಪಡೆಯುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಆಯೋಗ ಪ್ರಶ್ನಾವಳಿ ಬಿಡುಗಡೆ ಮಾಡಿದೆ.

ಮೊದಲು ಫೆಬ್ರವರಿ 10ರ ತನಕ ಈ ಪ್ರಶ್ನಾವಳಿಗೆ ಉತ್ತರ ನೀಡಲು ಅವಕಾಶ ನೀಡಲಾಗಿತ್ತು. ಅದನ್ನು ಫೆಬ್ರವರಿ 28ರ ತನಕ ವಿಸ್ತರಣೆ ಮಾಡಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಮಚರಿತಮಾನಸವನ್ನು ಬೆಂಕಿಗಾಹುತಿ ಮಾಡಿದ ಬಗ್ಗೆ ನಟ ರಝಾ ಮುರಾದರ ಹೇಳಿಕೆ !

Mon Feb 20 , 2023
ರಾಮಚರಿತಮಾನಸವನ್ನು ಬೆಂಕಿಗಾಹುತಿ ಮಾಡಿದ ಬಗ್ಗೆ ನಟ ರಝಾ ಮುರಾದರ ಹೇಳಿಕೆ ! ನಟ ರಝಾ ಮುರಾದಪ್ರಯಾಗರಾಜ (ಉತ್ತರಪ್ರದೇಶ) – ನಮ್ಮ ದೇಶದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಲಾಗಿದೆ, ಇದರರ್ಥ ನಾವು ಯಾರ ಧಾರ್ಮಿಕ ಶ್ರದ್ಧೆಯನ್ನು ನಾವು ನೋಯಿಸಬಹುದು ಎಂದಲ್ಲ. ಯಾವುದೇ ಧರ್ಮಗ್ರಂಥದಿಂದ ವಿವಾದ ನಿರ್ಮಾಣವಾಗುವುದು ಅಯೋಗ್ಯವಾಗಿದೆ. ನಟ ರಜಾ ಮುರಾದರು ಸಮಾಜವಾದಿ ಪಕ್ಷದಿಂದ ರಾಮಚರಿತಮಾನಸವನ್ನು ಸುಟ್ಟಿರುವ ಘಟನೆಯಿಂದ ಪತ್ರಕರ್ತರು ಕೇಳಿದ ಪ್ರಶ್ನೆಯ ಮೇಲೆ ಮೇಲಿನಂತೆ ಹೇಳಿಕೆ ನೀಡಿದರು. ಈ ಪ್ರಸಂಗದಲ್ಲಿ ಮುರಾದ […]

Advertisement

Wordpress Social Share Plugin powered by Ultimatelysocial