ಬರೋಬ್ಬರಿ 70 ವರ್ಷ ಎಂದಿಗೂ ಬೇರ್ಪಡದೆ ಬಾಳಬಂಡಿ ಎಳೆದಿದ್ದ ದಂಪತಿ ಕೊರೋನಾ ವೈರಸ್ನಿಂದ ತಿಂಗಳುಗಟ್ಟಲೆ ಬೇರ್ಪಟ್ಟಿದ್ದರು. ಆದರೀಗ ಒಬ್ಬರಿಗೊಬ್ಬರು ಸಂಧಿಸಿದ್ದು ದೊಡ್ಡ ಸುದ್ದಿಯಾಗಿದೆ.ಈ ದಂಪತಿಯ ಪುನರ್ಮಿಲನದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನ್ಯೂಯಾರ್ಕ್ ಮೂಲದ ಜಿಮ್ ಮತ್ತು ವಾಲ್ಟರ್ ವಿಲ್ಲರ್ಡ್ ಎಂಬುವರು ವಿವಾಹವಾಗಿ 70 ವರ್ಷ ಕಳೆದಿದ್ದರು. ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಅವರಿಬ್ಬರು ಪ್ರತ್ಯೇಕವಾಗಿ ವಾಸಿಸುವಂತೆ ಆಗಿತ್ತು. ಕಳೆದ ವರ್ಷ ಜಿನ್ ಸೊಂಟ ಮುರಿದುಕೊಂಡು ಆರೈಕೆ ಗೃಹಕ್ಕೆ ಸ್ಥಳಾಂತರವಾಗಿದ್ದರು, ಪ್ರತಿದಿನ ವಾಲ್ಟರ್ ಅಲ್ಲಿಗೆ ಭೇಟಿ ಮಾಡಲು ಬರುತ್ತಿದ್ದರು. ಆದರೆ ಲಾಕ್ಡೌನ್ ಸಂದರ್ಭದಲ್ಲಿ ಆರೈಕೆ ಮನೆಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇದೀಗ ಕುಸಿದುಬಿದ್ದ ವಾಲ್ಟರ್ ಅದೇ ಆರೈಕೆ ಮನೆಗೆ ದಾಖಲಾದರು. ಇದೀಗ ಆರೈಕೆ ಮನೆಯ ಒಂದೇ ಕೋಣೆಯಲ್ಲಿ ದಂಪತಿ ಒಟ್ಟಿಗಿದ್ದಾರೆ. ಅವರಿಬ್ಬರು ಪುನರ್ಮಿಲನ ಸಂದರ್ಭದಲ್ಲಿ ಕೈಗಳನ್ನು ಹಿಡಿದು ಚುಂಬನ ಮಾಡಿರುವ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
70 ವರ್ಷದ ಜೋಡಿ ಮತ್ತೆ ಒಂದಾಯಿತು.!

Please follow and like us: