ನವದೆಹಲಿ: ವಿಯೆಟ್ನಾಂನಲ್ಲಿ 9ನೇ ಶತಮಾನದ ಶಿವಲಿಂಗ ಪತ್ತೆಯಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ. ವಿಯೆಟ್ನಾಂನ ಮೈಸನ್ ಪ್ರದೇಶದಲ್ಲಿ ಉತ್ಖನನ ನಡೆಸುವಾಗ ಈ ವಿಶಿಷ್ಟ ಶಿವಲಿಗವನ್ನು ಭಾರತದ ಪುರಾತತ್ವ ಇಲಾಖೆ(ASI) ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಮೈಸನ್ ಪ್ರದೇಶದ ಚಾಮ್ ದೇಗುಲಗಳ ಸಮೂಹದಲ್ಲಿ ಉತ್ಖನನ ಕಾರ್ಯ ನಡೆಸಲಾಗುತ್ತಿದೆ. ಇಲ್ಲಿ ಅನೇಕ ಶಿಥಿಲವಾಸ್ಥೆ, ಪೂರ್ಣ ಹಾಳಾದ ದೇಗುಲಗಳ ಅವಶೇಷಗಳಿವೆ. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಈ ತಾಣವನ್ನು ಕ್ರಿ.ಶ 4ನೇ ಶತಮಾನದಿಂದ 14ನೇ ಶತಮಾನದ ಅವಧಿಯಲ್ಲಿ ಚಂಪಾ ಅರಸರು ಆಳಿದ್ದರು ಎಂದು ತಿಳಿದು ಬಂದಿದೆ. ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ನಾಲ್ಕು ಋತುಗಳ ಕಾಲ ಇಲ್ಲಿ ಉತ್ಖನನ ನಡೆಸುತ್ತಿದ್ದಾರೆ. ಸದ್ಯ ಜನವರಿಯಿಂದ ಜೂನ್ ಅವಧಿಯ ಕಾರ್ಯ ನಡೆಯುತ್ತಿದ್ದು, ಎಎಸ್‌ಐ ತಂಡದಲ್ಲಿ ನಾಲ್ವರು ಅಧಿಕಾರಿಗಳಿದ್ದಾರೆ. ಒಟ್ಟು 6 ಶಿವಲಿಂಗಗಳು ಪತ್ತೆಯಾಗಿವೆ. ಸಂಸ್ಕೃತಿ, ಪರಂಪರೆ ಮೌಲ್ಯಯುಕ್ತ ವಸ್ತುಗಳನ್ನು ಸಂರಕ್ಷಿಸಲು ಭಾರತ ಹಾಗೂ ವಿಯೆಟ್ನಾಂ ಮುಂದಾಗಿದ್ದು, ವಿದೇಶಾಂಗ ಸಚಿವಾಲಯವು ಇದಕ್ಕಾಗಿ ಡಿಪಿಎ IV ಎಂಬ ವಿಭಾಗವನ್ನು ಸ್ಥಾಪಿಸಿದೆ.
9ನೇ ಶತಮಾನದ ವಿಶಿಷ್ಟ ಶಿವಲಿಂಗ ಪತ್ತೆ

Please follow and like us: