ದೀಪಿಕಾ ಪಡುಕೋಣೆ ಆಸ್ಕರ್ 2023ರಲ್ಲಿ (Oscars 2023) ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.95ನೇ ಆಸ್ಕರ್ ಪ್ರಶಸ್ತಿ ಪ್ರದಾನವು ಮಾರ್ಚ್ 12, ಭಾನುವಾರ ಎಬಿಸಿಯಲ್ಲಿ ನೇರ ಪ್ರಸಾರವಾಗಲಿದೆ. ಲಾಸ್ ಏಂಜಲೀಸ್ಗೆ ನಟಿ ತೆರಳಿದ್ದಾರೆ. ಕಳೆದ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಆಸ್ಕರ್ ಪ್ರಶಸ್ತಿಗಾಗಿ ತೆರಳುತ್ತಿದ್ದಂತೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಟಾಪ್ ಮತ್ತು ನೀಲಿ ಡೆನಿಮ್ ಜೀನ್ಸ್ನೊಂದಿಗೆ ವಿನ್ಯಾಸಗೊಳಿಸಿದ ಕಂದು ಬಣ್ಣದ ಜಾಕೆಟ್ನಲ್ಲಿ ದೀಪಿಕಾ ಮಿಂಚಿದ್ದಾರೆ.ಕಾನ್ 2022ರಲ್ಲಿ ತೀರ್ಪುಗಾರರಾಗಿ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದರು. ಇದೀಗ ಆಸ್ಕರ್ 2023ರಲ್ಲಿ ನಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 95ನೇ ಅಕಾಡೆಮಿ ಪ್ರಶಸ್ತಿಗಳ ಪ್ರದಾನ (Oscars 2023) ಮಾರ್ಚ್ 12ರಂದು ಲಾಸ್ ಏಂಜಲೀಸ್ನಲ್ಲಿ (ಭಾರತದಲ್ಲಿ ಮಾರ್ಚ್ 13) ನಡೆಯಲಿದೆ. ದೀಪಿಕಾ ಪಡುಕೋಣೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿರುವ ಲಿಸ್ಟ್ ಹಂಚಿಕೊಂಡಿದ್ದಾರೆ. ಎಮಿಲಿ ಬ್ಲಂಟ್, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಡ್ವೇನ್ ಜಾನ್ಸನ್, ಮೈಕೆಲ್ ಬಿ ಜೋರ್ಡಾನ್, ಜಾನೆಲ್ಲೆ ಮೋನೆ, ಜೊ ಸಲ್ಡಾನಾ, ಜೆನ್ನಿಫರ್ ಕೊನ್ನೆಲ್ಲಿ, ರಿಜ್ ಅಹ್ಮದ್ ಮತ್ತು ಮೆಲಿಸ್ಸಾ ಮೆಕಾರ್ಥಿ ಅವರಂತಹವರ ಜತೆಗೆ ಇವರ ಹೆಸರು ಸೇರಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada