ಮಹಿಳೆಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಗೂಳೂರು ಬೆಸ್ಕಾಂ ಎಸ್.ಓ. ಶಿವಕುಮಾರ್ ವಿರುದ್ಧ ಪ್ರತಿಭಟನೆ

ಗೂಳೂರು ಬೆಸ್ಕಾಂ ಎಸ್.ಓ. ಶಿವಕುಮಾರ್  ದಲಿತ ಮಹಿಳೆಯರನ್ನು ಅವಾಚ್ಯವಾಗಿ ನಿಂದಿಸಿದ್ದಾರೆಂದು ಆಗ್ರಹಿಸಿ ಗೂಳೂರಿನ ಬೆಸ್ಕಾಂ ಕಚೇರಿಯ ಎದುರು ದಲಿತ ಸೇನೆ ವತಿಯಿಂದ ಪ್ರತಿಭಟನೆ ನಡೆಸಿದ್ದಾರೆ..ತುಮಕೂರು ತಾಲೂಕು ಗೂಳೂರು ಗ್ರಾಮದಲ್ಲಿ ಬೆಸ್ಕಾಂ ಕಚೇರಿಯ ಸೆಕ್ಷನ್ ಆಫೀಸರ್ ಶಿವಕುಮಾರ್ ರವರು ಗೂಳೂರಿನ ದಲಿತ ಕಾಲನಿಯ ದುರ್ಗಾ ದೇವತೆ ದೇವಸ್ಥಾನದಲ್ಲಿರುವ ವಿದ್ಯುತ್ ಸಂಪರ್ಕವನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಇದನ್ನು ಕಂಡ ದಲಿತ ಮಹಿಳೆಯರು ದೇವಸ್ಥಾನದ ವಿದ್ಯುತ್ ಸಂಪರ್ಕವನ್ನು ತೆರವುಗೊಳಿಸಬೇಡಿ ಎಂದು ಕೇಳಲು ಮುಂದಾದಾಗ ಈ ದಲಿತ ಮಹಿಳೆಯರನ್ನು ಏಕಾಏಕಿ ಶಿವಕುಮಾರ್ ಎಂಬ ಅಧಿಕಾರಿ ನೀವುಗಳು ಮಾದಿಗ ಜಾತಿಗೆ ಸೇರಿದ ಜನ ಸಂಜೆ ಆಯ್ತು ಅಂದರೆ ನೀವು ಎಣ್ಣೆ ಕುಡಿಯಲು ಹಾಗೂ ಧನ ತಿನ್ನುವುದಕ್ಕೆ ಸರಿ ನೀವೆಲ್ಲ ಎಂದು ನಿಂದಿಸಿದ್ದು,  ನನ್ನ ಸ್ನೇಹಿತನಾದ ನಂಜುಂಡಪ್ಪನಿಗೆ ಕೈಮುಗಿ ಕೇಳಿಕೊಳ್ಳಿ ನಿಮಗೆ ಕರೆಂಟು ಹಾಕಿ ಕೊಡುತ್ತೇನೆ ಎಂದು ದಲಿತ ಮಹಿಳೆಯರಿಗೆ ದೌರ್ಜನ್ಯದ ಮಾತುಗಳನ್ನು ಹಾಡಿ ಕ್ರೌರ್ಯ ಮೆರೆದಿದ್ದಾರೆ .ಇದನ್ನರಿತ ದಲಿತ ಮಹಿಳೆಯರು ಕೂಡಲೇ ದಲಿತ ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷರಿಗೆ ದೂರು ನೀಡಿ ನಮಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ದಲಿತ ಹೆಣ್ಣು ಮಕ್ಕಳು ಬಂದು ಹೇಳಿಕೊಂಡಾಗ ಕೂಡಲೇ ಸಂಘಟನೆಯ ಕಾರ್ಯಕರ್ತರು ಗೂಳೂರು ಬೆಸ್ಕಾಂ ಕಛೇರಿ ಮುಂದೆ ಪ್ರತಿಭಟನೆ ನೆಡೆಸಲಾಯಿ.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ದಲಿತ ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಸಿದ್ದರಾಜು ಮಾತನಾಡಿ ಇಲ್ಲಿನ ಬೆಸ್ಕಾಂ ಕಛೇರಿಯಲ್ಲಿ ಸೆಕ್ಷನ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಕುಮಾರ್ ಗೂಳೂರಿನ ಕೇಲ ರಾಜಕಾರಣಿಗಳ ಬೆಂಬಲದಿಂದ ಹಲವಾರು ಬಾರಿ ಬೆಸ್ಕಾಂ ಕಚೇರಿಯಲ್ಲಿ ಕುಳಿತುಕೊಂಡು ನಂಜುಂಡಪ್ಪನವರ ಜೊತೆಯಲ್ಲಿ ಕರ್ತವ್ಯದ ಸಮಯದಲ್ಲೇ ಮದ್ಯ ಪಾನ ಮಾಡುತ್ತಾರೆ ಇದನ್ನು ಕೇಳಲು ಯಾವ ಅಧಿಕಾರಿಗಳೂ ಮುಂದಾಗಿಲ್ಲ ಈತನು ಸ್ಥಳೀಯ ಕೇಲ ಪ್ರಾಭಾವಿ ಮುಖಂಡರ ಕುಮ್ಮಕ್ಕಿನಿಂದ ದಲಿತರ ಕೇರಿಯಲ್ಲಿ ಇರುವ ದೇವಸ್ಥಾನದ ವಿದ್ಯುತ್ ಸಂಪರ್ಕವನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಈತನು ಸ್ಥಳೀಯವಾಗಿ ಮಾವಿನ ಕಾಯಿ ಮಂಡಿಯ ಮಳಿಗೆಗಳಿಗೆ ತಿಂಗಳುಗಳ ಕಾಲ ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ನಿಡಿದ ನಿದರ್ಶನಗಳು ಇವೆ . ಈತನ ವಿರುದ್ಧ ಬೆಸ್ಕಾಂ ಕಛೇರಿಯ ಮೇಲಾಧಿಕಾರಿಗಳಿಗೆ ದೂರು ನಿಡಿದರು ಯಾವುದೇ ಪ್ರಯೋಜನವಾಗಿಲ್ಲ ಗೂಳುರಿನಲ್ಲಿ ಈತನ ಅಟ್ಟಹಾಸಕ್ಕೆ ಕಡಿವಾಣ ಹಾಕುವ ಅಧಿಕಾರಿಗಳು ಯಾರು ಎಂಬುದು ತಿಳಿಯದಾಗಿದೆ ಕೂಡಲೆ ಇದಕ್ಕೆ ಸಂಬಂಧಿಸಿದಂತೆ ದಲಿತ ಮಹಿಳೆಯರಿಗೆ ಜಾತಿ ನಿಂದನೆ ಮಾಡಿರುವ ಈ ಅಧಿಕಾರಿಯ ವಿರುದ್ದ ಜಾತಿ ನಿಂದನೆ ಪ್ರಕರಣ ದಾಖಲಿಸಿ ಗ್ರಾಮದಲ್ಲಿ ಕೊಮು ಗಲಭೆ ಸೃಷ್ಟಿಸುವ ಇಂತಹ ಅಧಿಕಾರಿಯನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಡದ್ರೋಹಿ.M.E.S. ವನ್ನು ಕರ್ನಾಟಕ ನಿಂದ ಬ್ಯಾನ್ ಮಾಡಬೇಕೆಂದು ಪ್ರತಿಭಟನೆ

Tue Dec 21 , 2021
ಬೆಳಗಾವಿ ಚನ್ನಮ್ಮನ ಕಿತ್ತೂರು ತಾಲೂಕಿನ ಕಾದರವಳಿ ಗ್ರಾಮದಲ್ಲಿ ಇಂದು ಯುವಕರ ವತಿಯಿಂದ ಪ್ರತಿಭಟನೆ ನಡೆಸಿದರು…ನಾಡದ್ರೋಹಿ.M.E.S. ವನ್ನು ಕರ್ನಾಟಕ ನಿಂದ ಬ್ಯಾನ್ ಮಾಡಬೇಕೆಂದು ಹಾಗೂ ನಾಡು ದ್ರೋಹಿಗಳನ್ನು ಗಡಿಪಾರು ಮಾಡಬೇಕು ಎಂಇಎಸ್ ಅವರನ್ನು ಬಂಧಿಸಬೇಕು ಎಂದು ಹೋರಾಟಗಾರರು ಹೇಳಿದರು ಇಲ್ಲದಿದ್ದರೆ ನಮ್ಮ ಹೋರಾಟ ನಿಲ್ಲದು ಎಂದು ಎಚ್ಚರಿಕೆ ಕೊಡ್ತಾ ಇದ್ದೇವೆ ಎಂದು ಹೇಳಿದರು..ನಾಡಪ್ರೇಮಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ದಸ್ವ ಮಾಡಿದ್ದಾರೆ ಇವರನ್ನೆಲ್ಲ ಕ್ರಿಮಿನಲ್ ಕೇಸ್ ಮೇಲೆ ಬಂಧಿಸಬೇಕೆಂದು ಆಗ್ರಹಿಸಿದರು…ಪ್ರತಿಭಟನೆ ಪಾಲ್ಗೊಂಡ ಮುದುಕಪ್ಪ […]

Advertisement

Wordpress Social Share Plugin powered by Ultimatelysocial