ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಎ ಹರ್ಷ ಕಾಂಬಿನೇಷನ್ ನ ಭಜರಂಗಿ2 ಸಿನಿಮಾ ಜೀ5 ಒಟಿಟಿಗೆ ಎಂಟ್ರಿ ಕೊಟ್ಟಿದೆ. ಕುಟುಂಬಸಮೇತ ನೋಡಬಹುದಾದ ಭಜರಂಗಿ-2 ಸಿನಿಮಾಗೆ ಮೆಚ್ಚುಗೆಯೂ ಸಿಗುತ್ತಿದೆ. ಅಲ್ಲದೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ‘ಕನ್ನಡಿಗ’ ಸಿನಿಮಾ ಕೂಡಾ ಜೀ5ನಲ್ಲಿ ಸೇರ್ಪಡೆಗೊಂಡಿದೆ.
ಆ ಸಿನಿಮಾದಲ್ಲಿ ರವಿಚಂದ್ರನ್ ಅವರು ವಿಶೇಷ ಗೆಟಪ್ ನಲ್ಲಿ ಗಮನಸೆಳೆದಿದ್ದರು.
ವಿಭಿನ್ನ ಚಿತ್ರಪ್ರಕಾರಗಳ ಸಿನಿಮಾ ತಯಾರಿಗೆ ಹೆಸರಾದ ರಿಷಬ್ ಶೆಟ್ಟಿ ನಿರ್ಮಾಣದಲ್ಲಿ ಹಾಗೂ ರಾಜ್ ಶೆಟ್ಟಿ ನಿರ್ದೇಶನ/ ನಟನೆಯಲ್ಲಿ ಮೂಡಿಬಂದಿದ್ದ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಕೂಡಾ ಜೀ5 ಪಾಲಾಗಿದ್ದು, ಸದ್ಯದಲ್ಲಿಯೇ ಜೀ5 ಒಟಿಟಿ ಫ್ಲಾಟ್ ಫಾರಂನಲ್ಲಿ ಪ್ರದರ್ಶನಗೊಳ್ಳಲಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: