ಸಂಚಾರ ನಿಯಮ ಉಲ್ಲಂಘನೆ ಶೇ. 50 ರಷ್ಟು ದಂಡ ಪಾವತಿಗೆ ನಾಳೆಯೇ ಕೊನೆ ದಿನ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿಗೆ ನೀಡಲಾದ ಶೇಕಡ 50ರಷ್ಟು ರಿಯಾಯಿತಿ ನಾಳೆ ಕೊನೆಯಾಗಲಿದೆ.

ಫೆಬ್ರವರಿ 11 ಕ್ಕೆ ಶೇಕಡ 50ರಷ್ಟು ರಿಯಾಯಿತಿ ಅವಧಿ ಮುಕ್ತಾಯವಾಗಲಿದ್ದು, ಅವಧಿ ವಿಸ್ತರಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಾರಿಗೆ ಇಲಾಖೆ ಆಯುಕ್ತ ಸಿದ್ದರಾಮಪ್ಪ ಹೇಳಿದ್ದಾರೆ.

ಪಾನಮತ್ತ ಚಾಲನೆ ಹೊರತಾಗಿ ಉಳಿದೆಲ್ಲ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಫೆಬ್ರವರಿ 11ರವರೆಗೆ ಶೇಕಡ 50ರಷ್ಟು ರಿಯಾಯಿತಿ ನೀಡಿ ದಂಡಪಾವತಿಸಲು ಆದೇಶ ಹೊರಡಿಸಲಾಗಿತ್ತು. ಫೆಬ್ರವರಿ 11 ರಿಂದ ರಾಜ್ಯವ್ಯಾಪಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿರುವ ಹಿನ್ನೆಲೆಯಲ್ಲಿ ರಿಯಾಯಿತಿ ಅವಧಿ ಕೊನೆಯಾಗಲಿದೆ.

ಸಂಚಾರ ಠಾಣೆಗಳಲ್ಲಿ ದಂಡಪಾವತಿಸಬಹುದು. ಸಂಚಾರ ಪೊಲೀಸರ ಬಳಿಯೂ ದಂಡಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೃಶ್ಚಿಕ ರಾಶಿ ಭವಿಷ್ಯ.

Fri Feb 10 , 2023
ನಿಮ್ಮ ಶೀಘ್ರ ಕ್ರಮ ನಿಮ್ಮ ಸುದೀರ್ಘವಾದ ಸಮಸ್ಯೆಯನ್ನು ಪರಿಹರಿಸುತ್ತದೆ. ಆಲ್ಕೋಹಾಲ್ ಸಿಗರೇಟ್ ಮುಂತಾದವುಗಳಿಗೆ ಹಣವನ್ನು ಖರ್ಚು ಮಾಡಬಾರದು, ಎಂದು ನಿಮಗೆ ನನ್ನ ಸಲಹೆ ನೀಡಲಾಗಿದೆ, ಅದನ್ನು ಮಾಡುವುದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸಹ ಹದಗೆಡಿಸುತ್ತದೆ. ನಿಮ್ಮ ಮಕ್ಕಳಿಂದ ನೀವು ಕೆಲವು ಪಾಠಗಳನ್ನು ಕಲಿಯಲಿದ್ದೀರಿ. ಅವರು ಅತ್ಯಂತ ಪರಿಶುದ್ಧ ಪ್ರಭೆಗಳನ್ನು ಹೊಂದಿರುತ್ತಾರೆ ಮತ್ತು ಅವರ ಮುಗ್ಧತೆ ಹಾಗೂ ಆನಂದದಿಂದ ಮತ್ತು ಮತ್ತು ನಕಾರಾತ್ಮಕ ಗುಣಗಳ ಅನುಪಸ್ಥಿತಿಯಿಂದ […]

Advertisement

Wordpress Social Share Plugin powered by Ultimatelysocial