ಕನ್ನಡ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ದರ್ಶನ್ ಇಂದು ಸೂಪರ್‌ಸ್ಟಾರ್ ಆಗಲು ಬುನಾದಿ ಹಾಕಿದ್ದು !

ಕನ್ನಡ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ದರ್ಶನ್ ಇಂದು ಸೂಪರ್‌ಸ್ಟಾರ್ ಆಗಲು ಬುನಾದಿ ಹಾಕಿದ್ದು ‘ಮೆಜೆಸ್ಟಿಕ್’ ಚಿತ್ರ. ಅದೇ ಮೊದಲ ಬಾರಿಗೆ ಪೂರ್ಣ ಪ್ರಮಾಣಧ ನಾಯಕನಾಗಿ ದರ್ಶನ್ ಬಣ್ಣ ಹಚ್ಚಿದ್ದರು. ಹೊಸ ಪ್ರತಿಭೆ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದ್ದಂತೆ ಬಾಕ್ಸಾಫೀಸ್‌ನಲ್ಲಿ ಹೊಸ ಸಂಚಲನವೇ ಸೃಷ್ಟಿಯಾಗಿತ್ತು.ರೌಡಿಸಂ ಹಾಗೂ ಲವ್ ಸ್ಟೋರಿ ಎರಡನ್ನೂ ಬೆರೆಸಿ ಮಾಡಿದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೂಪರ್‌ ಹಿಟ್ ಅಂತ ಸಾಬೀತಾಗಿತ್ತು.’ಮೆಜೆಸ್ಟಿಕ್’ ತೆರೆಕಂಡ ಬಳಿಕ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಇಲ್ಲಿಂದ ದರ್ಶನ್ ಮತ್ತೆಂದೂ ಹಿಂದೆ ತಿರುಗಿ ನೋಡಲೇ ಇಲ್ಲ. ‘ಮೆಜೆಸ್ಟಿಕ್‌’ ಚಿತ್ರದಿಂದ ‘ಕ್ರಾಂತಿ’ವರೆಗೂ ದರ್ಶನ್ ಗೆಲುವಿನ ಸವಾರಿಯನ್ನೇ ಮಾಡಿದ್ದಾರೆ ಅಂತಲ್ಲ. ಈ 20 ವರ್ಷಗಳ ಜರ್ನಿಯಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಆದರೆ, ಸೋಲಿಗಿಂತ ಗೆಲುವಿನ ರುಚಿ ಕಂಡಿದ್ದೇ ಹೆಚ್ಚು. ಅದಕ್ಕೆ ಇಂದಿಗೂ ‘ಮೆಜೆಸ್ಟಿಕ್’ ಚಿತ್ರದ ಪ್ರತಿ ಘಳಿಗೆಯನ್ನೂ ಸಂಭ್ರಮಿಸುತ್ತಾರೆ.’ಮೆಜೆಸ್ಟಿಕ್’ ಚಿತ್ರ ಅದೆಂತಹದ್ದೇ ಮೈಲಿಗಲ್ಲು ಸೃಷ್ಟಿಸಿದರೂ ಅಲ್ಲಿ ದರ್ಶನ್ ಇರುತ್ತಾರೆ. ಈಗ 20 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ದರ್ಶನ್ ನಿರ್ಮಾಪಕ ಎಂ ಜಿ ರಾಮಮೂರ್ತಿ ಹಾಗೂ ಮೆಜೆಸ್ಟಿಕ್ ತಂಡದೊಂದಿಗೆ ಸೇರಿಕೊಂಡು ಸಂಭ್ರಮಿಸಿದ್ದಾರೆ. ಈ ವೇಳೆ ಚಿತ್ರತಂಡ ತಂದಿದ್ದ ಕೇಕ್ ಅನ್ನು ಕತ್ತರಿಸಿ ಖುಷಿಪಟ್ಟಿದ್ದಾರೆ. ‘ಮೆಜೆಸ್ಟಿಕ್’ ಸಿನಿಮಾ ಚಿತ್ರೀಕರಣದ ವೇಳೆಯ ಸವಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.ದರ್ಶನ್ ಸದ್ಯಕ್ಕೀಗ ‘ಕ್ರಾಂತಿ’ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆದಷ್ಟು ಬೇಗ ಸಿನಿಮಾದ ಚಿತ್ರೀಕರಣ ಮುಗಿಸಬೇಕು ಅಂತ ಚಿತ್ರತಂಡ ನಿರ್ಧರಿಸಿದೆ. ಈ ಕಾರಣಕ್ಕೆ ನಿರಂತರವಾಗಿ ಶೂಟಿಂಗ್ ನಡೆಯುತ್ತಿದೆ. ಇದೇ ವೇಳೆ ‘ಕ್ರಾಂತಿ’ ತಂಡದೊಂದಿಗೆ ‘ಮೆಜೆಸ್ಟಿಕ್’ ಸೇರಿಕೊಂಡು ಸಂಭ್ರಮಿಸಿದೆ. ದರ್ಶನ್ ಈ ಎರಡೂ ತಂಡವನ್ನೂ ಒಟ್ಟಿಗೆ ಸೇರಿಸಿದ್ದು, ‘ಕ್ರಾಂತಿ’ ಸಿನಿಮಾ ನಿರ್ಮಾಪಕಿ ಶೈಲಜಾ ನಾಗ್, ಬಿ. ಸುರೇಶ್, ನಿರ್ದೇಶಕ ವಿ. ಹರಿಕೃಷ್ಣ, ‘ಮೆಜೆಸ್ಟಿಕ್’ ಚಿತ್ರದ ನಿರ್ಮಾಪಕ ಎಂ.ಜಿ ರಾಮಮೂರ್ತಿ ಈ ಕೇಕ್ ಕಟಿಂಗ್ ಸಂಭ್ರಮದಲ್ಲಿ ಭಾಗಿಯಾಗಿದ್ದರು.ದರ್ಶನ್ ಹಲವು ಹೊಸ ಸಿನಿಮಾಗಳಿಗೆ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಾಗಿ ‘ಕ್ರಾಂತಿ’ ಸಿನಿಮಾ ಬಳಿಕ ಯಾವ ಚಿತ್ರವನ್ನು ಕೈಗೆತ್ತಿಕೊಳ್ಳುತ್ತಾರೆ ಎನ್ನುವುದು ಇನ್ನೂ ಅನೌನ್ಸ್ ಮಾಡಿಲ್ಲ. ಆದರೆ, ಮೆಜೆಸ್ಟಿಕ್ ಚಿತ್ರದ ನಿರ್ಮಾಪಕ ಎಂ ಜಿ ರಾಮಮೂರ್ತಿ ಅವರ ಬಳಿ ದರ್ಶನ್ ಕಾಲ್‌ಶೀಟ್ ಇದೆ. ಕೆಲವು ಮೂಲಗಳ ಪ್ರಕಾರ ‘ಕ್ರಾಂತಿ’ ಸಿನಿಮಾ ಮುಗಿದ ಬಳಿಕ ದರ್ಶನ್ ‘ಮೆಜೆಸ್ಟಿಕ್’ ನಿರ್ಮಾಪಕ ಎಂಜಿ ರಾಮ್‌ ಮೂರ್ತಿ ನಿರ್ಮಾಣದ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.ದರ್ಶನ್ ಮಾಸ್ ಎಂಟ್ರಿ ಕೊಟ್ಟ ಮೆಜೆಸ್ಟಿಕ್ ಹೊಸ ರೂಪ ಪಡೆದುಕೊಂಡು ಮತ್ತೆ ಬಿಡುಗಡೆಯಾಗುತ್ತಿದೆ. ಫೆಬ್ರವರಿ 16ರಂದು ದರ್ಶನ್ ಹುಟ್ಟುಹಬ್ಬವಿರುವುದರಿಂದ ಅಂದೇ ಮತ್ತೆ ‘ಮೆಜೆಸ್ಟಿಕ್’ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ಸಜ್ಜಾಗಿದ್ದಾರೆ. ಕಲರ್ ಕರೆಕ್ಷನ್, ಸೌಂಡ್ ಕರೆಕ್ಷನ್ ಸೇರಿದಂತೆ ಹೊಸ ತಂತ್ರಜ್ಞಾನವನ್ನು ಈ ಸಿನಿಮಾಗೆ ಅಳವಡಿಸಲಾಗಿದ್ದು, ಫೆಬ್ರವರಿ 16ಕ್ಕೆ ಗ್ರ್ಯಾಂಡ್ ರಿಲೀಸ್ ಆಗಲಿದೆ. 20 ವರ್ಷದ ಹಿಂದೆ ಹೊಸ ಹೀರೋ ಹುಟ್ಟಾಕಿದ್ದ ‘ಮೆಜೆಸ್ಟಿಕ್’ ಹಲವು ಸೆಂಟರ್‌ಗಳಲ್ಲಿ 100 ದಿನ ಓಡಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IPL: CSK ಅವರಿಗೆ ರಾಜೀನಾಮೆ ನೀಡಲು ಬಯಸಿದರೆ, ಅವರು ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ , ಅಶ್ವಿನ್;

Wed Feb 9 , 2022
ಚೆನ್ನೈ ಸೂಪರ್ ಕಿಂಗ್ಸ್ IPL 2022 ಗಾಗಿ ರವೀಂದ್ರ ಜಡೇಜಾ, MS ಧೋನಿ, ಮೊಯಿನ್ ಅಲಿ ಮತ್ತು ರುತುರಾಜ್ ಗಾಯಕ್ವಾಡ್ ಅವರನ್ನು ಉಳಿಸಿಕೊಂಡಿದೆ. ಆದಾಗ್ಯೂ, ನಾಲ್ಕು ಬಾರಿ IPL ಚಾಂಪಿಯನ್‌ಗಳಿಗಾಗಿ ಫಾಫ್ ಡು ಪ್ಲೆಸಿಸ್ ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ, ಅವರು ಮೆಗಾ ಹರಾಜಿನ ಮುಂಚೆಯೇ ಬಿಡುಗಡೆಯಾದರು. ಟೂರ್ನಮೆಂಟ್‌ನ 15 ನೇ ಸೀಸನ್‌ಗೆ ಅವರನ್ನು ರಾಜೀನಾಮೆ ನೀಡುವ ಬಯಕೆಯನ್ನು ಮ್ಯಾನೇಜ್‌ಮೆಂಟ್ ವ್ಯಕ್ತಪಡಿಸಿದೆ. ಆದರೆ, ಆರ್ ಅಶ್ವಿನ್ ಅವರನ್ನು ನಂಬಿದರೆ ಅವರು […]

Advertisement

Wordpress Social Share Plugin powered by Ultimatelysocial