ಸಿನಿ ಲೋಕದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಿತಿಯಲ್ಲಿ ತಮಿಳು ನಟ ಸೂರ್ಯ ಹಾಗೂ ಬಾಳಿವುಡ್ ನಟಿ

 

ಸಿನಿ ಲೋಕದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಿತಿಯಲ್ಲಿ ತಮಿಳು ನಟ ಸೂರ್ಯ ಹಾಗೂ ಬಾಳಿವುಡ್ ನಟಿ ಕಾಜೋಲ್ ಗೆ ಸ್ಥಾನ ಸಿಕ್ಕಿದ್ದು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ವಿಶ್ವಾದ್ಯಂತ 397 ಸಿನಿಮಾ ಮಂದಿಗೆ ಆಮಂತ್ರಣ ನೀಡಲಾಗಿದ್ದು, ಆ ಪಟ್ಟಿಯಲ್ಲಿ ಸೂರ್ಯ ಹಾಗೂ ಕಾಜೋಲ್ಕೂಡ ಇದ್ದಾರೆ ಅನ್ನೋದು ಹೆಮ್ಮೆಯ ವಿಚಾರ.

‘ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆಯಂಡ್ ಸೈನ್ಸ್’ ಸೋಶಿಯಲ್ ಮೀಡಿಯಾದಲ್ಲಿ 397 ಜನರ ಹೆಸರನ್ನು ಬಿಡುಗಡೆ ಮಾಡಿದೆ.

ಸೂರ್ಯ ನಟನೆಯ ‘ಸೂರರೈ ಪೊಟ್ರು’ ಹಾಗೂ ‘ಜೈ ಭೀಮ್’ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿದ್ದು, ಈ ಸಿನಿಮಾಗಳ ಮೂಲಕ ಸೂರ್ಯ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡರು. ಈ ಹಿನ್ನೆಲೆಯಲ್ಲಿ ಆಸ್ಕರ್ ಸಮಿತಿಗೆ ಅವರನ್ನು ಆಮಂತ್ರಿಸಲಾಗಿದೆ. ಆಸ್ಕರ್ ಸಮಿತಿಯಲ್ಲಿ ಸ್ಥಾನ ಪಡೆಯುತ್ತಿರುವ ಮೊದಲ ದಕ್ಷಿಣ ಭಾರತದ ನಟ ಎಂಬ ಖ್ಯಾತಿಗೆ ಸೂರ್ಯ ಪಾತ್ರರಾಗಿದ್ದಾರೆ.

ಸೂರ್ಯ ಶೀಘ್ರವೇ ನಿರ್ಮಾಪಕನಾಗಿ ಬಾಲಿವುಡ್​ಗೆ ಎಂಟ್ರಿಕೊಡ್ತಿದ್ದಾರೆ. 2ಡಿ ಎಂಟರ್​ಟೇನ್​ಮೆಂಟ್​ ಮೂಲಕ ಸೂರ್ಯ ‘ಸೂರರೈ ಪೊಟ್ರು’ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುತ್ತಿದ್ದಾರೆ. ಇದರ ಜೊತೆ ಬಾಲಿವುಡ್ ನಟಿ ಕಾಜೋಲ್ ಹಾಗೂ ನಿರ್ದೇಶಕಿ ರೀಮಾ ಕಗ್ತಿ ಆಸ್ಕರ್ ಸಮಿತಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಈ ಕುರಿತು ಟ್ವಿಟರ್ ಖಾತೆಯಲ್ಲಿ ಅಕಾಡೆಮಿಯವರು ಈ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. 397ರಲ್ಲಿ 71 ಸದಸ್ಯರು ಆಸ್ಕರ್ ನಾಮಿಗಳಾಗಿದ್ದು, 15 ಮಂದಿ ವಿಜೇತರು ಇದ್ದಾರೆ. ಒಟ್ಟೂ ಸಂಖ್ಯೆಯಲ್ಲಿ ಶೇ.37 ಮಹಿಳೆಯರಿದಿದ್ದಾರೆ ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'777 ಚಾರ್ಲಿ' ರನ್ನಿಂಗ್: 19 ದಿನಗಳಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾ ದೋಚಿದ್ದೆಷ್ಟು?

Wed Jun 29 , 2022
ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಸಿನಿಮಾ ಮೂಲಕ ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದಾಗಿದೆ. ಐದೂ ಭಾಷೆಯಲ್ಲೂ ಸಿನಿಮಾ ಮೆಚ್ಚುಗೆ ಗಳಿಸಿದೆ. ಬಿಡುಗಡೆಯಾದ ದಿನದಿಂದಲೂ ‘777 ಚಾರ್ಲಿ’ ಅಬ್ಬರಿಸುವುದನ್ನು ನಿಲ್ಲಿಸಿಲ್ಲ. ಇನ್ನೊಂದು ಕಡೆ ಕೆಲವೇ ದಿನಗಳಲ್ಲಿ ಸಿನಿಮಾ 25 ದಿನಗಳನ್ನು ಪೂರೈಸಲಿದೆ. ‘777 ಚಾರ್ಲಿ’ ಜೂನ್ 10 ಗ್ರ್ಯಾಂಡ್ ಆಗಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಚಾರ್ಲಿ ಹಾಗೂ ರಕ್ಷಿತ್ ಶೆಟ್ಟಿ ಕಾಂಬಿನೇಷನ್ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರುವಲ್ಲಿ ಗೆದ್ದಿದ್ದು, ಕಲೆಕ್ಷನ್ ವಿಚಾರದಲ್ಲೂ ಭೇಷ್ ಎನಿಸಿಕೊಂಡಿದೆ. […]

Advertisement

Wordpress Social Share Plugin powered by Ultimatelysocial