ಬಿ.ಎಸ್.ವೈ ಮೊಮ್ಮಗಳ ಆತ್ಮಹತ್ಯೆ; ಮರಣೋತ್ತರ ವರದಿಯಲ್ಲೇನಿದೆ.? ವೈದ್ಯರು ಹೇಳಿದ್ದೇನು..?

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ವೈದ್ಯರು ಅಧಿಕಾರಿಗಳಿಗೆ ಮರಣೋತ್ತರ ಪರೀಕ್ಷೆ ವರದಿ ಹಸ್ತಾಂತರಿಸಿದ್ದಾರೆ.

ಬೌರಿಂಗ್ ಆಸ್ಪತ್ರೆಯಲ್ಲಿ ಡಾ.ಸೌಂದರ್ಯ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಮೂವರು ವೈದ್ಯರು ಹಾಗೂ ತಹಶೀಲ್ದಾರ್ ಸಮ್ಮುಖದಲ್ಲಿ ಪೋಸ್ಟ್ ಮಾರ್ಟಮ್ ಮಾಡಲಾಗಿದೆ.

ಪೋಸ್ಟ್ ಮಾರ್ಟಮ್ ರಿಪೋರ್ಟ್ ನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಡಾ.ಸತೀಶ್ ಮಾಹಿತಿ ನೀಡಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಮೇಲ್ನೋಟಕ್ಕೆ ಡಾ.ಸೌಂದರ್ಯ ಅವರ ಕುತ್ತಿಗೆ ಭಾಗದಲ್ಲಿ ಮಾತ್ರ ಮಾರ್ಕ್ ಇದೆ. ಮರಣೋತ್ತರ ಪರೀಕ್ಷಾ ವರದಿಯನ್ನು ಬೆಂಗಳೂರು ಉತ್ತರ ಭಾಗದ ತಹಶೀಲ್ದಾರ್ ಅವರಿಗೆ ಹಸ್ತಾಂತರಿಸಲಾಗಿದ್ದು, ಹೆಚ್ಚಿನ ವಿವರವನ್ನು ಅವರೇ ನೀಡಲಿದ್ದಾರೆ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IPS ರವಿ ಡಿ. ಚೆನ್ನಣ್ಣನವರ್ ವರ್ಗಾವಣೆ ಆದೇಶಕ್ಕೆ ತಡೆ ನೀಡಿದ ರಾಜ್ಯ ಸರ್ಕಾರ

Sat Jan 29 , 2022
ಬೆಂಗಳೂರು : ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್ ರನ್ನು ವಾಲ್ಮೀಕಿ ಬುಡಕಟ್ಟು ನಿಗಮದ ಎಂಡಿ ಆಗಿ ವರ್ಗಾಯಿಸಿದ್ದ ರಾಜ್ಯ ಸರ್ಕಾರ ಇದೀಗ ಆದೇಶಕ್ಕೆ ತಡೆ ಹಿಡಿದಿದೆ.ರಾಜ್ಯ ಸರ್ಕಾರವು ಜನವರಿ 26 ರಂದು ರವಿ ಡಿ.ಚೆನ್ನಣ್ಣನವರ್ ಸೇರಿ ಒಟ್ಟು 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.ರವಿ.ಡಿ.ಚೆನ್ನಣ್ಣನವರ್ ಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯ ಸರ್ಕಾರ ರವಿ. ಡಿ.ಚೆನ್ನಣ್ಣನವರ್ ರನ್ನು ವಾಲ್ಮೀಕಿ ಬುಡಕಟ್ಟು ನಿಗಮದ ಎಂಡಿ ಆಗಿ ವರ್ಗಾವಣೆ ಮಾಡಿತ್ತು.ರವಿ ಚೆನ್ನಣ್ಣನವರ್ ಸೇರಿದಂತೆ ಕೆಲ […]

Advertisement

Wordpress Social Share Plugin powered by Ultimatelysocial