ಹರಾರೆ: ಅಂಡರ್-19 ವಿಶ್ವಕಪ್ ಟೂರ್ನಿಯ ಐರ್ಲೆಂಡ್ ಮತ್ತು ಜಿಂಬಾಬ್ವೆ ನಡುವಿನ ಪ್ಲೇಟ್ ಸಮಿಫೈನಲ್ ಪಂದ್ಯದ ವೇಳೆ ಲಘು ಭೂಕಂಪನ ಸಂಭವಿಸಿರುವ ದೃಶ್ಯ ಟೆಲಿವಿಷನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ಘಟನೆ ಟ್ರಿನಿಡಾಡ್ ಮತ್ತು ಟೊಬೆಗೊದ ಪೋರ್ಟ್ ಆಫ್ ಸ್ಪೇನ್ನಲ್ಲಿರುವ ಕ್ವೀನ್ ಪಾರ್ಕ್ ಓವಲ್ ಮೈದಾನದಲ್ಲಿ ಶನಿವಾರ ನಡೆದಿದೆ.ಪಂದ್ಯದ ನಡುವೆಯೇ ಭೂಕಂಪನ ಅನುಭವವಾಗಿದ್ದು, ಇದನ್ನು ಕಾಮೆಂಟರಿ ಬಾಕ್ಸ್ನಲ್ಲಿ ಕುಳಿತಿದ್ದ ವೀಕ್ಷಕ ವಿವರಣೆಗಾರರು ಸಹ ವಿವರಿಸಿದ್ದಾರೆ.5.2 ತೀವ್ರತೆಯಲ್ಲಿ ಪೋರ್ಟ್ ಆಫ್ ಸ್ಪೇನ್ನ ಕರಾವಳಿ ಪ್ರದೇಶದಲ್ಲಿ ಕಂಪನ ಸಂಭವಿಸಿದೆ. ಪಂದ್ಯವನ್ನು ಸರೆಯುಡಿತ್ತಿದ್ದ ಕ್ಯಾಮೆರಾ ಅಲುಗಾಡಿದ್ದರಿಂದ ಟಿವಿ ಪರದೆಯಲ್ಲಿಯೂ ದೃಶ್ಯ ಅಲುಗಾಡಿದೆ. ಐಸಿಸಿ ಕಾಮೆಂಟೇಟರ್ ಆಯಂಡ್ರಿವ್ ಲಿಯೋನಾರ್ಡ್ ಅವರು ಕಾಮೆಂಟರಿ ಬಾಕ್ಸ್ನಲ್ಲಿ ಕುಳಿತು ಕಂಪನದ ಅನುಭವವನ್ನು ವಿವರಿಸಿದ್ದಾರೆ. ಆದರೆ, ಅವರ ಧ್ವನಿಯಲ್ಲಿ ಎಲ್ಲಿಯೂ ಆತಂಕ ಇರಲಿಲ್ಲ.ನಾವು ಇದೀಗ ಭೂಕಂಪನವನ್ನು ಹೊಂದಿದ್ದೇವೆ ಎಂದು ನಾನು ನಂಬುತ್ತೇನೆ. ನಿಜವಾಗಿಯೂ ಭೂಕಂಪನವಾಗಿದೆ. ನಮ್ಮ ಹಿಂದೆ ಕೇವಲ ರೈಲು ಹೋಗುತ್ತಿಲ್ಲ, ಆದರೆ ಇಡೀ ಕ್ವೀನ್ಸ್ ಪಾರ್ಕ್ ಓವಲ್ ಮಾಧ್ಯಮ ಕೇಂದ್ರವೇ ನಡುಗಿದೆ’ ಎಂದು ಆಯಂಡ್ರಿವ್ ವಿವರಿಸಿದ್ದಾರೆ.ಸುಮಾರು 15 ರಿಂದ 20 ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದೆ. ಜಿಂಬಾಬ್ವೆ ಇನ್ನಿಂಗ್ಸ್ನ 6ನೇ ಓವರ್ನಲ್ಲಿ ಈ ಅನುಭವವಾಗಿದೆ. ಭೂಮಿ ಕಂಪಿಸುತ್ತಿದ್ದರೂ ಎದುರಾಳಿ ಐರ್ಲೆಂಡ್ ತಂಡದ ಬೌಲರ್ ಮ್ಯಾಥೀವ್ ಹಂಪ್ರೇಸ್ ಬೌಲ್ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಟಿವಿ ಪರದೆ ಅಲುಗಾಡುವ ಅನುಭವ ಪಂದ್ಯ ನೋಡಿದ ಎಲ್ಲರಿಗೂ ಆಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada