ಅಂಡರ್​ 19 ವಿಶ್ವಕಪ್​ ಪಂದ್ಯದ ವೇಳೆ ಭೂಕಂಪನ: ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಹರಾರೆ: ಅಂಡರ್‌-19 ವಿಶ್ವಕಪ್‌ ಟೂರ್ನಿಯ ಐರ್ಲೆಂಡ್​ ಮತ್ತು ಜಿಂಬಾಬ್ವೆ ನಡುವಿನ ಪ್ಲೇಟ್​ ಸಮಿಫೈನಲ್ ಪಂದ್ಯದ ವೇಳೆ ಲಘು ಭೂಕಂಪನ ಸಂಭವಿಸಿರುವ ದೃಶ್ಯ ಟೆಲಿವಿಷನ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ಘಟನೆ ಟ್ರಿನಿಡಾಡ್ ಮತ್ತು ಟೊಬೆಗೊದ ಪೋರ್ಟ್​ ಆಫ್​ ಸ್ಪೇನ್​ನಲ್ಲಿರುವ ಕ್ವೀನ್​ ಪಾರ್ಕ್​ ಓವಲ್​ ಮೈದಾನದಲ್ಲಿ ಶನಿವಾರ ನಡೆದಿದೆ.ಪಂದ್ಯದ ನಡುವೆಯೇ ಭೂಕಂಪನ ಅನುಭವವಾಗಿದ್ದು, ಇದನ್ನು ಕಾಮೆಂಟರಿ ಬಾಕ್ಸ್​ನಲ್ಲಿ ಕುಳಿತಿದ್ದ ವೀಕ್ಷಕ ವಿವರಣೆಗಾರರು ಸಹ ವಿವರಿಸಿದ್ದಾರೆ.5.2 ತೀವ್ರತೆಯಲ್ಲಿ ಪೋರ್ಟ್​ ಆಫ್​ ಸ್ಪೇನ್​ನ ಕರಾವಳಿ ಪ್ರದೇಶದಲ್ಲಿ ಕಂಪನ ಸಂಭವಿಸಿದೆ. ಪಂದ್ಯವನ್ನು ಸರೆಯುಡಿತ್ತಿದ್ದ ಕ್ಯಾಮೆರಾ ಅಲುಗಾಡಿದ್ದರಿಂದ ಟಿವಿ ಪರದೆಯಲ್ಲಿಯೂ ದೃಶ್ಯ ಅಲುಗಾಡಿದೆ. ಐಸಿಸಿ ಕಾಮೆಂಟೇಟರ್​ ಆಯಂಡ್ರಿವ್​ ಲಿಯೋನಾರ್ಡ್ ಅವರು ಕಾಮೆಂಟರಿ ಬಾಕ್ಸ್​ನಲ್ಲಿ ಕುಳಿತು ಕಂಪನದ ಅನುಭವವನ್ನು ವಿವರಿಸಿದ್ದಾರೆ. ಆದರೆ, ಅವರ ಧ್ವನಿಯಲ್ಲಿ ಎಲ್ಲಿಯೂ ಆತಂಕ ಇರಲಿಲ್ಲ.ನಾವು ಇದೀಗ ಭೂಕಂಪನವನ್ನು ಹೊಂದಿದ್ದೇವೆ ಎಂದು ನಾನು ನಂಬುತ್ತೇನೆ. ನಿಜವಾಗಿಯೂ ಭೂಕಂಪನವಾಗಿದೆ. ನಮ್ಮ ಹಿಂದೆ ಕೇವಲ ರೈಲು ಹೋಗುತ್ತಿಲ್ಲ, ಆದರೆ ಇಡೀ ಕ್ವೀನ್ಸ್ ಪಾರ್ಕ್ ಓವಲ್ ಮಾಧ್ಯಮ ಕೇಂದ್ರವೇ ನಡುಗಿದೆ’ ಎಂದು ಆಯಂಡ್ರಿವ್​ ವಿವರಿಸಿದ್ದಾರೆ.ಸುಮಾರು 15 ರಿಂದ 20 ಸೆಕೆಂಡ್​ಗಳ ಕಾಲ ಭೂಮಿ ಕಂಪಿಸಿದೆ. ಜಿಂಬಾಬ್ವೆ ಇನ್ನಿಂಗ್ಸ್​ನ 6ನೇ ಓವರ್​ನಲ್ಲಿ ಈ ಅನುಭವವಾಗಿದೆ. ಭೂಮಿ ಕಂಪಿಸುತ್ತಿದ್ದರೂ ಎದುರಾಳಿ ಐರ್ಲೆಂಡ್​ ತಂಡದ ಬೌಲರ್​ ಮ್ಯಾಥೀವ್​ ಹಂಪ್ರೇಸ್​ ಬೌಲ್​ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಟಿವಿ ಪರದೆ ಅಲುಗಾಡುವ ಅನುಭವ ಪಂದ್ಯ ನೋಡಿದ ಎಲ್ಲರಿಗೂ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದು ಹೊತ್ತು ಊಟಕ್ಕೆ ಪರದಾಡಿದ್ದ ನಟ ಈಗ ಅರಮನೆಯಂತ ಬಂಗಲೆಯ ಒಡೆಯ

Sun Jan 30 , 2022
  ಸಿನಿಮಾ ರಂಗ ಹಲವು ಜನರ ಅದೃಷ್ಟವನ್ನು ಬದಲಾಯಿಸಿದೆ. ಊಟಕ್ಕೂ ಪರದಾಡುತ್ತಿದ್ದ ವ್ಯಕ್ತಿಗಳನ್ನು ಸ್ಟಾರ್ ನಟರನ್ನಾಗಿಸಿದೆ, ತಂತ್ರಜ್ಞರನ್ನಾಗಿಸಿದೆ ಚಿತ್ರರಂಗ. ಅಂಥಹಾ ನಟರಲ್ಲಿ ಒಬ್ಬರು ನವಾಜುದ್ದೀನ್ ಸಿದ್ಧಿಖಿ.ನವಾಜುದ್ದೀನ್ ಸಿದ್ಧಿಖಿ ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು.ಬಡತನವೇ ಹಾಸು ಹೊದ್ದಿದ್ದ ಕುಟುಂಬದ ಹಿನ್ನೆಲೆಯಿಂದ ಬಂದ ನವಾಜುದ್ದೀನ್ ಸಿದ್ಧಿಖಿ, ಹಲವು ವರ್ಷ ಚಿತ್ರರಂಗದಲ್ಲಿ ಮಣ್ಣು ಹೊತ್ತಿದ್ದಾರೆ. ಸಿನಿಮಾ ರಂಗದ ಕನಸು ಹೊತ್ತು ಮುಂಬೈಗೆ ಬಂದು ಒಂದು ಹೊತ್ತಿನ ಊಟಕ್ಕೂ ಪರದಾಡಿದ್ದಿದೆ. ಆದರೆ ಇಂದು […]

Advertisement

Wordpress Social Share Plugin powered by Ultimatelysocial