ಕಾಮದ ಮದದಲ್ಲಿ ದಾರಿ ತಪ್ಪಿದ ಪತ್ನಿ, ಪರ ಸಂಗಕ್ಕೆ ಸುಪಾರಿ ಕೊಟ್ಟು ಪತಿ ಕೊಲ್ಲಿಸಿದ್ಲು

ಹಾಸನ: ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಾವಲು ಹೊಸೂರು ಗೇಟ್ ಬಳಿ ಕಳೆದ ವಾರ ನಡೆದಿದ್ದ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಲೆಯಾದ ವ್ಯಕ್ತಿಯ ಪತ್ನಿ ಮತ್ತು ಪ್ರಿಯಕರನನ್ನು ಬಂಧಿಸಲಾಗಿದೆ.

ಜನವರಿ 31 ರಂದು ಸಂಜೆ ಶಾಲೆಯಿಂದ ಮಗನನ್ನು ಕರೆದುಕೊಂಡು ಬರಲು ಬೈಕ್ ನಲ್ಲಿ ತೆರಳುತ್ತಿದ್ದ ಆನಂದಕುಮಾರ್(42) ಅವರನ್ನು ಅಪರಿಚಿತ ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.

ನುಗ್ಗೆಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡಿದ್ದಾರೆ. ಮೃತನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಆನಂದ್ ಕುಮಾರ್ ಪತ್ನಿ ನುಗ್ಗೆಹಳ್ಳಿಯಲ್ಲಿ ಯೋಗ ಕ್ಲಾಸ್ ನಡೆಸುತ್ತಿದ್ದ ನವೀನ್ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ಈ ವಿಚಾರ ಗಂಡನಿಗೆ ಗೊತ್ತಾದರೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕೆ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾಳೆ. ಬೆಂಗಳೂರಿನವರು ಸುಪಾರಿ ಪಡೆದು ಕೊಲೆ ಮಾಡಿದ್ದಾರೆ. ಈ ಕೃತ್ಯಕ್ಕೆ ಮಹಿಳೆಯ ಪ್ರಿಯಕರ ನವೀನ್ ಕೂಡ ಕೈಜೋಡಿಸಿದ್ದಾನೆ.

2014ರಲ್ಲಿ ಹಿರೀಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಈಗ ಬಂಧಿತಳಾಗಿರುವ ಮಹಿಳೆಯನ್ನು ಬಂಧಿಸಲಾಗಿತ್ತು. ಸಾಕ್ಷಾಧಾರಗಳ ಕೊರತೆಯಿಂದ ಆಕೆ ಬಿಡುಗಡೆಯಾಗಿದ್ದಳು. ಅದು ಕೂಡ ಅಕ್ರಮ ಸಂಬಂಧದ ಕಾರಣಕ್ಕೆ ನಡೆದ ಕೊಲೆಯಾಗಿತ್ತು ಎನ್ನಲಾಗಿದೆ.

ಈಗ ಯೋಗ ಕ್ಲಾಸ್ ನಡೆಸುತ್ತಿದ್ದ ನವೀನ್ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ್ದ ಆನಂದಕುಮಾರ್ ಪತ್ನಿ ಇಬ್ಬರು ಮಕ್ಕಳು, ಕೋಟ್ಯಂತರ ರೂಪಾಯಿ ಆಸ್ತಿ, ಸುಖವಾದ ಸಂಸಾರ ಇದ್ದರೂ ದಾರಿ ತಪ್ಪಿ ಜೈಲು ಸೇರುವಂತಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಂಡ ತಪ್ಪಿಸಿಕೊಂಡ ಮಾಲೀಕರಿಗೆ ಬಿಗ್‌ ಶಾಕ್; RTO ಕಚೇರಿಗಳ ಮುಂದೆ ಬೀಡುಬಿಟ್ಟ ಸಂಚಾರಿ ಪೊಲೀಸರು

Thu Feb 10 , 2022
  ಬೆಂಗಳೂರು ಸಂಚಾರಿ ಪೊಲೀಸ್‌ನ ಪೂರ್ವ ವಿಭಾಗವು ಕೇವಲ ಎರಡೇ ದಿನಗಳ ಒಳಗೆ ನಾಲ್ಕು ಆರ್‌.ಟಿ.ಓ. ಕಚೇರಿಗಳ ಬಳಿ ಹೊಸದಾಗಿ ನೋಂದಾಯಿಸಿದ 60 ಪ್ರಕರಣಗಳಿಂದ ದಂಡದ ರೂಪದಲ್ಲಿ 24,000 ರೂ.ಗಳನ್ನು ಸಂಗ್ರಹಿಸಿದೆ. ಪ್ರತಿ ಆರ್‌.ಟಿ.ಓ. ಕಚೇರಿ ಬಳಿಯೂ ಸಹಾಯಕ ಸಬ್‌-ಇನ್ಸ್‌ಪೆಕ್ಟರ್‌ ಹುದ್ದೆಯ ಅಧಿಕಾರಿಗಳನ್ನು ನಿಯೋಜಿಸಿರುವ ಬೆಂಗಳೂರು ಸಂಚಾರಿ ಪೊಲೀಸ್, ದಂಡ ತಪ್ಪಿಸಿಕೊಂಡ ಸವಾರರಿಂದ ದಂಡ ಪೀಕಿಸುತ್ತಿದೆ. ಭಟ್ಟರಹಳ್ಳಿ (ಕೆಎ-53), ಕಸ್ತೂರಿ ನಗರ (ಕೆಎ-03), ಎಲೆಕ್ಟ್ರಾನಿಕ್ಸ್ ಸಿಟಿ (ಕೆಎ-51) ಮತ್ತು ಎಚ್‌ಎಸ್‌ಆರ್‌ […]

Related posts

Advertisement

Wordpress Social Share Plugin powered by Ultimatelysocial