ಧೋನಿಯ ಉದ್ದನೆಯ ಕೂದಲನ್ನು ಹೊಗಳಿದ್ದ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್

ಭಾನುವಾರ ನಿಧನರಾದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಯಾವಾಗಲೂ ಭಾರತ-ಪಾಕಿಸ್ತಾನ ಕ್ರಿಕೆಟ್ ಪೈಪೋಟಿಯನ್ನು ಆನಂದಿಸುತ್ತಿದ್ದರು ಮತ್ತು ಒಮ್ಮೆ ತಮ್ಮ ಉದ್ದನೆಯ ತಲೆ ಕೂದಲನ್ನು ಟ್ರಿಮ್ ಮಾಡದಂತೆ ಭಾರತೀಯ ಕ್ರಿಕೆಟ್ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಸಲಹೆ ನೀಡಿದ್ದರು. ನವದೆಹಲಿ: ಭಾನುವಾರ ನಿಧನರಾದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಯಾವಾಗಲೂ ಭಾರತ-ಪಾಕಿಸ್ತಾನ ಕ್ರಿಕೆಟ್ ಪೈಪೋಟಿಯನ್ನು ಆನಂದಿಸುತ್ತಿದ್ದರು ಮತ್ತು ಒಮ್ಮೆ ತಮ್ಮ ಉದ್ದನೆಯ ತಲೆ ಕೂದಲನ್ನು ಟ್ರಿಮ್ ಮಾಡದಂತೆ ಭಾರತೀಯ ಕ್ರಿಕೆಟ್ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಸಲಹೆ ನೀಡಿದ್ದರು.
2006ರಲ್ಲಿ ಕೊನೆಯ ಬಾರಿಗೆ ಭಾರತವು ದ್ವಿಪಕ್ಷೀಯ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. ಲಾಹೋರ್ನಲ್ಲಿ ನಡೆದ ಏಕದಿನ ಪಂದ್ಯ ಮುಕ್ತಾಯವಾದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಪಾಕಿಸ್ತಾನದ ಆಗಿನ ಅಧ್ಯಕ್ಷರಾಗಿದ್ದ ಮುಷರಫ್ ಅವರು ಧೋನಿ ಅವರ ಕೇಶವಿನ್ಯಾಸವನ್ನು ಹೊಗಳಿದ್ದರು. ಪಂದ್ಯವನ್ನು ಗೆದ್ದಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಅಭಿನಂದಿಸಿದ ಮುಷರಫ್ ಅವರು ‘ಅತ್ಯುತ್ತಮವಾಗಿ’ ಆಡಿದ್ದಾರೆ ಎಂದು ಹೇಳಿದರು. ‘ಈ ಗೆಲುವಿನ ಶಿಲ್ಪಿಯಾಗಿರುವ ಧೋನಿಯನ್ನು ನಾನು ಅಭಿನಂದಿಸುತ್ತೇನೆ.
ನಾನು ಧೋನಿಗೆ ಹೇಳುವುದೇನೆಂದರೆ, ಕ್ಷೌರ ಮಾಡಿಸಿಕೊಳ್ಳಿ ಎಂದು ಕೇಳುವವರನ್ನು ನಾನು ನೋಡಿದ್ದೇನೆ. ಆದರೆ, ನೀವು ನನ್ನ ಅಭಿಪ್ರಾಯವನ್ನು ಕೇಳಲು ಬಯಸಿದರೆ, ಈ ಹೇರ್ಕಟ್ನಲ್ಲಿ ನೀವು ತುಂಬಾ ಚೆನ್ನಾಗಿ ಕಾಣುತ್ತೀರಿ. ಹೀಗಾಗಿ ಕ್ಷೌರ ಮಾಡಬೇಡಿ’ ಎಂದು ಹೇಳಿದ್ದರು.  ಈ ಪಂದ್ಯದಲ್ಲಿ ಧೋನಿ ಕೇವಲ 46 ಎಸೆತಗಳಲ್ಲಿ ಅಜೇಯ 72 ರನ್ ಗಳಿಸಿದರು.
ಅವರಿಗೆ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕ್ರಿಕೆಟ್ ಮೈದಾನದಲ್ಲಿ ಭಾರತ-ಪಾಕಿಸ್ತಾನ ನಡುವಿನ ಪೈಪೋಟಿಯು ಎರಡೂ ದೇಶಗಳಲ್ಲಿನ ಕ್ರಿಕೆಟ್ ಅಭಿಮಾನಿಗಳಿಗೆ ಹಲವು ನೆನಪುಗಳ ಗುಚ್ಛವನ್ನು ಉಂಟುಮಾಡಿದೆ. ಮುಷರಫ್ ಅವರ ಹೇಳಿಕೆ ಕೂಡ ಅವುಗಳಲ್ಲಿ ಒಂದಾಗಿದೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮುಷರಫ್ (79) ಅವರು ದುಬೈನ ಅಮೆರಿಕನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ನಿಧನರಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಲಯಾಳಂ ನಟ-ನಿರ್ದೇಶಕ ಬಾಬುರಾಜ್ ಬಂಧನ

Sun Feb 5 , 2023
ತಿರುವನಂತಪುರಂ: ಇಡುಕ್ಕಿ ಜಿಲ್ಲೆಯ ಆದಿಮಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದ ಸಂಬಂಧ ಮಲಯಾಳಂ ನಟ-ನಿರ್ದೇಶಕ ಬಾಬುರಾಜ್  ಅವರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಅವರು ಕೇರಳ ಹೈಕೋರ್ಟ್ ನಿರ್ದೇಶನದ ಮೇರೆಗೆ ಪೊಲೀಸರಿಗೆ ಶರಣಾದರು. ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜಾಮೀನಿನ ಮೇಲೆ ಬಿಡುಗಡೆಯಾದರು ಎಂದು  ವರದಿ ಮಾಡಿದೆ. ಈ ಕುರಿತು PTI ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿರುವ ಪೊಲೀಸರು, “ಹೈಕೋರ್ಟ್ ನಿರ್ದೇಶನದನ್ವಯ ಅವರನ್ನು ಬಂಧಿಸಲಾಗಿತ್ತು. ಇಡುಕ್ಕಿಯ ಸ್ಥಳೀಯ ನ್ಯಾಯಾಲಯದಲ್ಲಿ […]

Advertisement

Wordpress Social Share Plugin powered by Ultimatelysocial