‘ಊಟ ಬಿಟ್ಟರೆ ತೂಕ ಇಳಿಸಿಕೊಳ್ಳಬಹುದು ಎಂಬುದು ತಪ್ಪು ಕಲ್ಪನೆ

ಹೊಟ್ಟೆ ತುಂಬುವುದರ ಜೊತೆ ಬೊಜ್ಜು ಸೇರಿಕೊಳ್ಳದಂತೆ ಮತ್ತು ಬೊಜ್ಜನ್ನು ಕರಗುವಂತೆ ಮಾಡುವ ಕೆಲವು ತರಕಾರಿಗಳನ್ನು ಸೇವಿಸಿದರೆ ಆರೋಗ್ಯದೊಂದಿಗೆ ಅನೇಕ ಉಪಯೋಗಗಳನ್ನೂ ಪಡೆಯಬಹುದು.ಬೊಜ್ಜನ್ನು ನಿಯಂತ್ರಿಸುವ ಕೆಲವು ಹಲವು ರೀತಿಯ ಕಸರತ್ತು ಮಾಡುತ್ತಲೇ ಇರುತ್ತಾರೆ. ಅದರಲ್ಲೀ ಈ ತರಕಾರಿ ಜ್ಯೂಸ್‌ ತುಂಬಾ ಪರಿಣಾಮಕಾರಿಯಾಗಿದೆ . ನಮ್ಮ ಭಾರತೀಯ ಅಡುಗೆ ಮನೆಗಳಲ್ಲಿ ಬಳಕೆ ಮಾಡುವುದು ಬೆರಳಣಿಕೆಯಷ್ಟು ಎಂದೇ ಹೇಳಬಹುದು. ಮಧುಮೇಹ ಹೊಂದಿರುವವರು ಮಾತ್ರ ಹಾಗಲಕಾಯಿ ತಿನ್ನಬೇಕು ಅಥವಾ ಹಾಗಲ ಕಾಯಿ ಜ್ಯೂಸ್‌ ಕುಡಿಯಬೇಕು ಎಂಬ ನಿಯಮ ಸಮಾಜದಲ್ಲಿ ಸೃಷ್ಟಿಯಾಗಿದೆ.ಬಹುಶಃ ನಿಮಗೆ ಹಾಗಲಕಾಯಿಯ ಪ್ರಯೋಜನಗಳ ಬಗ್ಗೆ ತಿಳಿದಿಲ್ಲದೆ ಇರಬಹುದು. ಹಾಗಲಕಾಯಿಯು ಹೈಪೊಗ್ಲಿಸಿಮಿಕ್‌ ಸಂಯುಕ್ತವನ್ನು ಹೊಂದಿದ್ದು, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಇದು ಕಡಿಮೆ ಮಾಡಲು ಬಹಳ ಪ್ರಯೋಜನಕಾರಿಯಾಗಿದೆ. ಅಲ್ಲದೆ, ತೂಕ ನಷ್ಟಕ್ಕೂ ಕಾರಣವಾಗುತ್ತದೆಎಲ್ಲಾ ತರಕಾರಿಗಳಂತೆ ಹಾಗಲಕಾಯಿಯನ್ನು ಕೂಡ ದಿನನಿತ್ಯ ನಿಯಮಿತವಾಗಿ ಸೇವನೆ ಮಾಡಿ. ಇದರಿಂದ ಸೋರಿಯಾಸಿಸ್‌ನಂತಹ ಚರ್ಮದ ಕಾಯಿಲೆ ಮತ್ತು ಶಿಲೀಂಧ್ರಗಳ ಸೋಂಕಿನಿಂದ ಕಾಪಾಡಿಕೊಳ್ಳಬಹುದು.ಹಾಗಲಕಾಯಿಯನ್ನು ಅಷ್ಟಕ್ಕೂ ಏಕೆ ಸೇವನೆ ಮಾಡಬೇಕು? ಇಲ್ಲಿದೆ ಮಾಹಿತಿ.ಹಾಗಲಕಾಯಿ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಒಂದು ತರಕಾರಿ. ಮುಖ್ಯವಾಗಿ ಹಾಗಲಕಾಯಿಯಲ್ಲಿ ಜೀವಸತ್ವಗಳು, ಬಿ1, ಬಿ2 ಮತ್ತು ಬಿ3, ಸಿ, ಮೆಗ್ನೀಸಿಯಮ್‌, ಫೋಲೇಟ್‌, ಸತು, ರಂಜಕ, ಮ್ಯಾಂಗನೀಸ್‌ಗಳಿಂದ ಸಮೃದ್ಧವಾಗಿದೆ.ಇನ್ನು ಇದರಲ್ಲಿ ಫೈಬರ್‌ ಶ್ರೀಮಂತವಾಗಿದೆ. ಇತರ ತರಕಾರಿ ಮತ್ತು ಹಣ್ಣುಗಳಿಗೆ ಹೋಲಿಕೆ ಮಾಡಿದರೆ ಹಾಗಲಕಾಯಿಯಲ್ಲಿ ಪೋಷಕಾಂಶಗಳು ದ್ವಿಗುಣವಾಗಿದೆ.ಹೆಚ್ಚಾಗಿ ಕಬ್ಬಿಣದ ಅಂಶವನ್ನು ಹೊಂದಿರುವ ಹಾಗಲಕಾಯಿಯು ಬೀಟಾ ಕ್ಯಾರೋಟಿನ್‌ ಅನ್ನು ಹೊಂದಿದೆ. ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಂ ಪಾಲಕ್‌ ಮತ್ತು ಬಾಳೆಹಣ್ಣುಗಳಿಗಿಂತ 2 ಪಟ್ಟು ಅಧಿಕವಾಗಿದೆ.ಪ್ರಾಚೀನ ಕಾಲದಿಂದಲೂ ಕೂಡ ಇದೊಂದು ಅದ್ಭುತವಾದ ಔಷಧಿ ಎಂದು ಪರಿಗಣಿಸಲಾಗಿದೆ. ಮುಖ್ಯವಾಗಿ ಇದು ಕೆಟ್ಟ ಕೊಲೆಸ್ಟ್ರಾಲ್‌, ರಕ್ತದಲ್ಲಿನ ಸಕ್ಕರೆ, ಹೊಟ್ಟೆಯ ಕಾಯಿಲೆಗಳು ಮುಂತಾದ ಸಮಸ್ಯೆಗಳನ್ನು ತಡೆಗಟ್ಟುವುದನ್ನು ಉತ್ತೇಜಿಸುತ್ತದೆ.ವಾಸ್ತವವಾಗಿ, ಹಾಗಲಕಾಯಿ ಅತ್ಯಂತ ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿದೆ. ಇದು ತನ್ನ ಕಡಿಮೆ ಕೊಬ್ಬಿನ ಕಾರಣದಿಂದ ತೂಕ ನಷ್ಟಕ್ಕೆ ನೇರವಾಗಿ ಕಾರಣವಾಗುತ್ತದೆ. ಅಲ್ಲದೆ, ಇದರಲ್ಲಿ ಫೈಬರ್‌ ಯಥೇಚ್ಚವಾಗಿದೆ. ಫೈಬರ್‌ ಹೊಂದಿರುವ ಆಹಾರ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ. ಅಲ್ಲದೆ, ಪದೇ ಪದೇ ತಿನ್ನಬೇಕು ಎಂಬ ಹಸಿವಿನ ಬಯಕೆಯನ್ನು ತಡೆಯುತ್ತದೆ.ಇಷ್ಟೇ ಅಲ್ಲ, ಹಾಗಲಕಾಯಿ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ಸುಡುತ್ತದೆ. ಇದರ ಪರಿಣಾಮ ತೂಕ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಸಂಶೋಧನೆಗಳು ತೋರಿಸಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"108 ಆಂಬ್ಯುಲೆನ್ಸ್ ಸೇವೆಗೆ ಹೈಟೆಕ್ ಟಚ್ ;

Sat Feb 19 , 2022
ಬೆಂಗಳೂರು, ಫೆ. 19 : ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆಗೆ ಹೊಸ ರೂಪ ನೀಡಲು ಹಾಗೂ ಜನಸಾಮಾನ್ಯರ ಜೀವ ರಕ್ಷಣೆಗಾಗಿ ಆರೋಗ್ಯ ಕವಚ – 108 ರ ಸೇವೆಯನ್ನು ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಮೇಲ್ದರ್ಜೆಗೇರಿಸುವ ಮಹತ್ವದ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಆರೊಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ರಾಜ್ಯದಲ್ಲಿ 108-ಆರೋಗ್ಯ ಕವಚವು ತುರ್ತು ಆರೋಗ್ಯ ಸೇವೆಯನ್ನು ನೀಡುತ್ತಿದೆ. ಆಧುನಿಕ ಕಾಲದ ಆರೋಗ್ಯ […]

Advertisement

Wordpress Social Share Plugin powered by Ultimatelysocial