FACT:ಪುಷ್ಪದಲ್ಲಿ ಸಮಂತಾ ಹೈಲೈಟ್‌: ರಶ್ಮಿಕಾ ಕಸಿವಿಸಿ?

ಇತ್ತೀಚೆಗಷ್ಟೇ ವಿದೇಶ ಪ್ರವಾಸ ಮುಗಿಸಿಕೊಂಡು ಬಂದಿರುವ ನಟಿ ರಶ್ಮಿಕಾ ಮಂದಣ್ಣ ಈಗ “ಪುಷ್ಪ’ ಸಿನಿಮಾದ ಪ್ರಮೋಶನ್‌ನಲ್ಲಿ ಬಿಝಿಯಾಗಿದ್ದಾರೆ. ಈ ಚಿತ್ರ ಡಿ.17 ರಂದು ತೆರೆಕಾಣುತ್ತಿದೆ. ಅಲ್ಲು ಅರ್ಜುನ್‌ ನಟನೆಯ ಈ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆ ಯಾಗಿ ದೊಡ್ಡ ಹಿಟ್‌ ಆಗಿದೆ.

ಇದರ ಬೆನ್ನಿಗೆ ಬಂದ ಚಿತ್ರದ ಸ್ಪೆಷಲ್‌ ನಂಬರ್‌ ಸಾಂಗ್‌ ಕೂಡಾ ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ. ಈ ಹಾಡಿನಲ್ಲಿ ನಟಿ ಸಮಂತಾ ಕಾಣಿಸಿಕೊಂಡಿದ್ದಾರೆ. ಸಖತ್‌ ಹಾಟ್‌ ಆಗಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಚಿತ್ರತಂಡ ಕೂಡಾ ಸಮಂತಾ ಇರುವ ಈ ಹಾಡನ್ನು ಹೆಚ್ಚು ಪ್ರಮೋಟ್‌ ಮಾಡುತ್ತಿದೆ. ಇದು ನಟಿ ರಶ್ಮಿಕಾಗೆ ಕಿರಿಕಿರಿ ಅನಿಸುತ್ತಿದೆ ಎಂಬ ಸುದ್ದಿ ಟಾಲಿವುಡ್‌ ಅಂಗಳದಿಂದ ಕೇಳಿಬರುತ್ತಿದೆ. ಅದಕ್ಕೆ ಕಾರಣ, ರಶ್ಮಿಕಾ ಈ ಚಿತ್ರದ ನಾಯಕಿಯಾಗಿರೋದು.

ತೆಲುಗಿನಲ್ಲಿ ರಶ್ಮಿಕಾ ನಾಯಕಿಯಾಗಿರುವ ಮತ್ತೂಂದು ಬಿಗ್‌ ಬಜೆಟ್‌ನ ಚಿತ್ರ “ಪುಷ್ಪ’. ಈಗ ರಿಲೀಸ್‌ ಸಮಯದಲ್ಲಿ ತನಗಿಂತ ಸಮಂತಾಗೆ ಹೆಚ್ಚು ಪ್ರಚಾರ ಸಿಗುತ್ತಿದೆ ಎಂಬ ಬೇಸರ ರಶ್ಮಿಕಾ ಅವರದು ಎಂಬ ಗಾಸಿಪ್‌ ಎದ್ದಿದೆ. ಹಾಗಂತ ಈ ಬಗ್ಗೆ ರಶ್ಮಿಕಾ ಆಗಲೀ, ಚಿತ್ರತಂಡವಾಗಲೀ ಮಾತನಾಡಿಲ್ಲ. ಆದರೆ, ಟಾಲಿವುಡ್‌ ಅಂಗಳದಿಂದ ಈ ತರಹದ ಒಂದು ಸುದ್ದಿ ಎದ್ದಿರೋದು ಮಾತ್ರ ಸುಳ್ಳಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಇಂದಿನ ರಾಶಿ ಭವಿಷ್ಯ ಯಾರಿಗೆ ಶುಭ-ಯಾರಿಗೆ ಅಶುಭ

Thu Dec 30 , 2021
ಮೇಷ ರಾಶಿ ಇಂದಿನ ಜಾತಕ ಗುರುವಾರ, ಡಿಸೆಂಬರ್ 30, 2021 ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಸಕ್ತಿಯನ್ನು ಅನುಸರಿಸಲು ಇಂದು ಉತ್ತಮ ದಿನವಾಗಿದೆ. ಹೂಡಿಕೆಯನ್ನು ಶಿಫಾರಸು ಮಾಡಲಾಗಿದೆ ಆದರೆ ಸರಿಯಾದ ಸಲಹೆ ಪಡೆಯಿರಿ.  ವೃಷಭ ರಾಶಿ ಇಂದಿನ ಜಾತಕ ಗುರುವಾರ, ಡಿಸೆಂಬರ್ 30, 2021 ಆಶಾವಾದಿಯಾಗಿರಿ ಮತ್ತು ಪ್ರಕಾಶಮಾನವಾದ ಭಾಗವನ್ನು ನೋಡಿ. ನಿಮ್ಮ ಆತ್ಮವಿಶ್ವಾಸದ ನಿರೀಕ್ಷೆಗಳು ನಿಮ್ಮ ಭರವಸೆಗಳು ಮತ್ತು ಆಸೆಗಳ ಸಾಕ್ಷಾತ್ಕಾರಕ್ಕೆ ಬಾಗಿಲು ತೆರೆಯುತ್ತದೆ.  ಮಿಥುನ ಇಂದಿನ ಜಾತಕ ಗುರುವಾರ, […]

Advertisement

Wordpress Social Share Plugin powered by Ultimatelysocial