‘ಲವ್ ಮಾಕ್ಟೆಲ್ 2’ ಟ್ರೇಲರ್ ಬಿಡುಗಡೆ;

ಕೆಲವು ದಿನಗಳ ಹಿಂದಷ್ಟೆ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣರ ಪತ್ನಿ ಮಿಲನಾ ನಾಗರಾಜ್ ಪತಿ ಮೇಲೆ ಜಗಳ ಮಾಡಿದ್ದು, ‘ಲವ್ ಮಾಕ್ಟೆಲ್ 2’ ಟ್ರೇಲರ್ ಯಾವಾಗ ಬಿಡುಗಡೆ ಮಾಡುತ್ತೀರೆಂದು. ಹೆಂಡತಿ ಕೋಪಕ್ಕೆ ಹೆದರಿ ಟ್ರೇಲರ್ ಬಿಡುಗಡೆ ಮಾಡಿದ್ದಾರೆ ಡಾರ್ಲಿಂಗ್ ಕೃಷ್ಣ.

2020ರಲ್ಲಿ ಬಿಡುಗಡೆ ಆಗಿದ್ದ ‘ಲವ್ ಮಾಕ್ಟೆಲ್’ ಸಿನಿಮಾ ಹಿಟ್ ಆಗಿತ್ತು. ಅದರಲ್ಲಿಯೂ ಒಟಿಟಿಯಲ್ಲಿ ದೊಡ್ಡ ಸಂಖ್ಯೆಯ ಜನ ಸಿನಿಮಾ ನೋಡಿ ಮೆಚ್ಚಿದ್ದರು. 2020ರಲ್ಲಿ ಬಿಡುಗಡೆ ಆಗಿದ್ದ ‘ಲವ್ ಮಾಕ್ಟೆಲ್’ ಸಿನಿಮಾದ ಮುಂದಿನ ಭಾಗವೇ ‘ಲವ್ ಮಾಕ್ಟೆಲ್ 2’.

‘ಲವ್ ಮಾಕ್ಟೆಲ್’ ಸಿನಿಮಾದಲ್ಲಿ ನಾಯಕ ಆದಿ ಹಲವು ಪ್ರೇಮ ವೈಫಲ್ಯಗಳನ್ನು ಅನುಭವಿಸಿ ಕೊನೆಗೆ ನಿಧಿಮಾಳನ್ನು ವಿವಾಹವಾಗುತ್ತಾನೆ. ಆದರೆ ಅವನ ದುರಾದೃಷ್ಟಕ್ಕೆ ನಿಧಿಮಾ ಕ್ಯಾನ್ಸರ್‌ಗೆ ಬಲಿಯಾಗುತ್ತಾಳೆ. ಈ ಕತೆಯನ್ನು ಯುವತಿಯೊಬ್ಬಳಿಗೆ ಆದಿ ಹೇಳುತ್ತಿರುವಂತೆ ಸಿನಿಮಾ ಮುಗಿದಿತ್ತು.

ನಿಧಿಮಾಳನ್ನು ಕಳೆದುಕೊಳ್ಳುವ ಆದಿ ಮುಂದೇನು ಮಾಡುತ್ತಾನೆ ಎಂಬುದು ‘ಲವ್ ಮಾಕ್ಟೆಲ್ 2’ ಕತೆ. ಟ್ರೇಲರ್‌ನಲ್ಲಿರುವಂತೆ ‘ಲವ್ ಮಾಕ್ಟೆಲ್’ ಸಿನಿಮಾದಲ್ಲಿರುವ ಕೆಲವು ಮುಖ್ಯ ಪಾತ್ರಗಳು ‘ಲವ್ ಮಾಕ್ಟೆಲ್ 2’ ಸಿನಿಮಾದಲ್ಲಿಯೂ ಮುಂದುವರೆದಿವೆ.

ವಿಶೇಷವೆಂದರೆ ‘ಲವ್ ಮಾಕ್ಟೆಲ್ 2’ ಸಿನಿಮಾದಲ್ಲಿ ಆದಿ ಮತ್ತೊಮ್ಮೆ ಮದುವೆ ಆಗುವ ನಿಶ್ಚಯ ಮಾಡಿದ್ದಾನೆ. ಆದರೆ ಈ ಬಾರಿ ಯಾರನ್ನು ಮದುವೆ ಆಗುತ್ತಾನೆ ಎಂಬುದು ಕುತೂಹಲ. ಈ ಕುತೂಹಲ ತಣಿಯಲು ಸಿನಿಮಾವನ್ನೇ ನೋಡಬೇಕು.

‘ಲವ್ ಮಾಕ್ಟೆಲ್ 2’ ಟ್ರೇಲರ್‌ನಲ್ಲಿ ಸಾಕಷ್ಟು ಯುವತಿಯರು ಕಾಣಿಸಿಕೊಳ್ಳುತ್ತಾರೆ ಅವರಲ್ಲಿ ಯಾರನ್ನು ಆದಿ ವರಿಸುತ್ತಾನೆ ಎಂಬುದು ಕುತೂಹಲ. ಆದಿಯ ಮದುವೆ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿರುವ ದೃಶ್ಯವೂ ಟ್ರೇಲರ್‌ನಲ್ಲಿದೆ.

ಚಿತ್ರೀಕರಣ ನಡೆಸಿರುವ ಸುಂದರ ತಾಣಗಳು, ಹಿನ್ನೆಲೆ ಸಂಗೀತ ಟ್ರೇಲರ್‌ನಲ್ಲಿಯೇ ಗಮನ ಸೆಳೆಯುತ್ತಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇನ್ನೂ ಘೋಷಿಸಿಲ್ಲ. ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿದ್ದು, ಡಾರ್ಲಿಂಗ್ ಕೃಷ್ಣ ಹಾಗೂ ಪತ್ನಿ ಮಿಲನಾ ನಾಗರಾಜ್ ಒಟ್ಟಾಗಿ ಬಂಡವಾಳ ಹೂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಮಂಜು ವಿಮಾನ ಕಾರ್ಯಾಚರಣೆಗೆ ಅಡ್ಡಿಪಡಿಸಿದೆ

Wed Feb 2 , 2022
ಮಂಜು ಮತ್ತು ಕಳಪೆ ಗೋಚರತೆಯ ಕಾರಣ, ಇಂದು ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲವು ವಿಮಾನಗಳು ವಿಳಂಬವಾಗಿವೆ. ದಟ್ಟವಾದ ಮಂಜಿನ ಪದರವು ಕೋಲ್ಕತ್ತಾದ ಅನೇಕ ಭಾಗಗಳನ್ನು ಆವರಿಸಿದೆ, ವಿಶೇಷವಾಗಿ ನ್ಯೂ ಟೌನ್ ಮತ್ತು ಡಮ್ಡಮ್‌ನಂತಹ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳು. ಅಧಿಕಾರಿಗಳ ಪ್ರಕಾರ, ಮುಂಜಾನೆ 4.30 ರಿಂದ ಗೋಚರತೆ 50 ಮೀಟರ್‌ಗಿಂತ ಕಡಿಮೆಯಾಗಿದೆ ಮತ್ತು ಅದಕ್ಕಾಗಿಯೇ ಕೆಲವು ಬೆಳಿಗ್ಗೆ ವಿಮಾನಗಳು ವಿಳಂಬವಾಗಿವೆ. ಈಗಿನಂತೆ ಅನೇಕ […]

Advertisement

Wordpress Social Share Plugin powered by Ultimatelysocial