ದೊಡ್ಡಣ್ಣನಿಗೆ ಕಾಡಿದ ಚೈನಾ ವೈರಸ್

ಕಾಣದ ವೈರಸ್ ವಿಶ್ವದ ದೂಡ್ಡ ಆರ್ಥಿಕ ಶಕ್ತಿಗೆ ಪ್ರಭಲ ಪೆಟ್ಟು ನೀಡುತ್ತಿರುವದು ಸುಳ್ಳಲ್ಲ.ವಿಶ್ವದ ದೊಡ್ಡಣ್ಣ, ಅತ್ಯಂತ ಶ್ರೀಮಂತ ರಾಷ್ಟ್ರ ಅಂತಾ ಬಿಲ್ಡಪ್ ಕೊಡುವ ಅಮೆರಿಕದ ಮರ್ಯಾದೆ ಇದೀಗ ಬೀದಿಪಾಲಾಗಿದೆ. ಕೊರೊನಾ ವೈರಸ್ ಅಮೆರಿಕದ ಮಾನ ಹರಾಜು ಹಾಕಿದೆ. ದೊಡ್ಡಣ್ಣನ ನಾಡಿನ ಸ್ಥಿತಿ ಹೇಗಿದೆ ಅಂದರೆ, ಸದ್ಯಕ್ಕೆ ಜೀವ ಉಳಿಸಿಕೊಳ್ಳುವುದೇ ದೊಡ್ಡ ಸಾಹಸವಾಗಿದೆ. ಈವರೆಗೆ ೩೯ ಲಕ್ಷ ಕೇಸ್ ಕನ್ಫರ್ಮ್ ಆಗಿವೆ. ನಿನ್ನೆ ಕೂಡ ೬೫ ಸಾವಿರ ಕೇಸ್ ದಾಖಲಾಗಿವೆ. ಪರಿಣಾಮ ಅಮೆರಿಕದ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್‌ಗಳೇ ಸಿಗುತ್ತಿಲ್ಲ. ಫ್ಲೋರಿಡಾ ಸ್ಥಿತಿಯಂತೂ ಬರ್ಬರವಾಗಿದೆ. ಇಲ್ಲಿನ ೪೯ ಆಸ್ಪತ್ರೆಗಳಲ್ಲಿ ಒಂದೇ ಒಂದು ಐಸಿಯು ಹಾಸಿಗೆ ಕೂಡ ಲಭ್ಯವಿಲ್ಲ. ನಿನ್ನೆ ಕೂಡ ೧೨ ಸಾವಿರಕ್ಕೂ ಹೆಚ್ಚು ಕೇಸ್‌ಗಳು ಫ್ಲೋರಿಡಾ ಸ್ಟೇಟ್‌ನಲ್ಲಿ ದಾಖಲಾಗಿವೆ. ಒಂದೇ ದಿನ ೮೭ ಅಮೆರಿಕನ್ನರು ಫ್ಲೋರಿಡಾದಲ್ಲಿ ಪ್ರಾಣಬಿಟ್ಟಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಿಂದ ಬಂದವರನ್ನ ಸೇರಿಸಿಕೊಳ್ಳಬೇಡಿ

Tue Jul 21 , 2020
ಬೆಂಗಳೂರಿನಿಂದ ಬಂದವರನ್ನು ಸೇರಿಸಿಕೊಳ್ಳಬೇಡಿ, ಅಲ್ಲಿಂದ ಬಂದವರ ಬಗ್ಗೆ ಮಾಹಿತಿ ನೀಡದಿದ್ದರೆ ಅಂತಹವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ. ತುಮಕೂರನಲ್ಲಿ ಮಾತನಾಡಿದ ಅವರು, ಕಂಟೈನ್ಮೆಂಟ್ ಝೋನ್ಗಳನ್ನು ತುಂಬಾ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಈ ಬಗ್ಗೆ ಸ್ಥಳೀಯರಿಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡಿ ನಂತರ ಏರಿಯಾ ಸೀಲ್ಡೌನ್ ಮಾಡ್ತೀವಿ. ನಮಗೆ ತುಂಬಾ ತಾಪತ್ರಯವಾಗಿರೋದು ಬೆಂಗಳೂರಿನಿಂದ ಬಂದವರಿಂದ. ಅವರನ್ನು ಹಳ್ಳಿಗಳಿಗೆ ಬಿಟ್ಟುಕೊಳ್ಳದಿದ್ದರೆ, ಹಳ್ಳಿಗಳಲ್ಲಿ ಕೊರೊನಾ ಕೇಸ್ ಇರುತ್ತಿರಲಿಲ್ಲ. ಪಾಸಿಟಿವ್ ಬಂದಾಗ […]

Advertisement

Wordpress Social Share Plugin powered by Ultimatelysocial