ಅಸ್ಸಾಂ ಪ್ರವಾಹ ಸಂತ್ರಸ್ತರಿಗೆ 25 ಕೋಟಿ ದೇಣಿಗೆ ನೀಡಿದ ಮುಖೇಶ್ ಅಂಬಾನಿ!

 

ನವದೆಹಲಿ: ಅಸ್ಸಾಂನ ಪ್ರವಾಹ (Assam Flood) ಸಂತ್ರಸ್ತರಿಗೆ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಅಧ್ಯಕ್ಷ ಮುಖೇಶ್ ಅಂಬಾನಿ (Mukesh Ambani) ಮತ್ತು ಅವರ ಪುತ್ರ ಅನಂತ್ ಅಂಬಾನಿ (Ananth Ambani) ಸಹಾಯ ಹಸ್ತ ಚಾಚಿದ್ದಾರೆ. ರಿಲಯನ್ಸ್ ಫೌಂಡೇಶನ್ (Reliance Founddation) ಅಸ್ಸಾಂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಕೋಟಿ ರೂ.
ನೀಡಿದ್ದು, ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಕೃತಜ್ಞತೆ ಸಲ್ಲಿಸಿದ ಅಸ್ಸಾಂ ಮುಖ್ಯಮಂತ್ರಿ ಡಾ ಹಿಮಂತ ಬಿಸ್ವಾ ಶರ್ಮಾ (CM Dr Himanta biswa sarma), “ಈ ನಿರ್ಣಾಯಕ ಘಟ್ಟದಲ್ಲಿ ಅಸ್ಸಾಂ ಜನರೊಂದಿಗೆ ನಿಂತಿದ್ದಕ್ಕಾಗಿ ಶ್ರೀ ಮುಖೇಶ್ ಅಂಬಾನಿ ಮತ್ತು ಶ್ರೀ ಅನಂತ್ ಅಂಬಾನಿ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಇದು ನಮ್ಮ ಪ್ರವಾಹ ಪರಿಹಾರ ಕ್ರಮಗಳಿಗೆ ಬಹಳ ಸಹಾಯಕವಾಗಿದೆ” ಎಂದಿದ್ದಾರೆ.
ಪ್ರವಾಹ ಸಮಸ್ಯೆಯನ್ನು ಎದುರಿಸುತ್ತಿರುವ ಅಸ್ಸಾಂನಲ್ಲಿ, ರಿಲಯನ್ಸ್ ಫೌಂಡೇಶನ್ ಕಳೆದ ಒಂದು ತಿಂಗಳಿನಿಂದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುವಲ್ಲಿ ತೊಡಗಿಸಿಕೊಂಡಿದೆ. ಇದಕ್ಕಾಗಿ, ರಿಲಯನ್ಸ್ ಫೌಂಡೇಶನ್‌ನ ತಂಡಗಳು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್, ಪಶುಸಂಗೋಪನೆ ಮತ್ತು ಪಶುವೈದ್ಯ ಇಲಾಖೆ, ಜಿಲ್ಲಾಡಳಿತ ಮತ್ತು ಇತರ ನಾಗರಿಕ ಸಮಾಜ ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ.
ಹೆಚ್ಚು ಹಾನಿಗೊಳಗಾದ ಕಛರ್ ಮತ್ತು ನಾಗಾಂವ್‌ ಜಿಲ್ಲೆಗಳಲ್ಲಿ ಹಲವಾರು ಸ್ಥಳಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗಿದೆ ಮತ್ತು ತುರ್ತು ಪರಿಹಾರ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ನಿರಾಶ್ರಿತ ಜಾನುವಾರು ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಜೂನ್ 1 ರಂದು ಶಿಬಿರಗಳನ್ನು ಪ್ರಾರಂಭಿಸಿದಾಗಿನಿಂದ 1,900 ಕ್ಕೂ ಹೆಚ್ಚು ಜನರನ್ನು ತಪಾಸಣೆ ಮಾಡಲಾಗಿದೆ ಮತ್ತು ಚಿಕಿತ್ಸೆ ನೀಡಲಾಗಿದೆ. 10,400 ಕ್ಕೂ ಹೆಚ್ಚು ಕಾಡು ಪ್ರಾಣಿಗಳಿಗೆ ಜಾನುವಾರು ಶಿಬಿರಗಳಲ್ಲಿ ಚಿಕಿತ್ಸೆ ನೀಡಲಾಗಿದೆ.
ವೈದ್ಯಕೀಯ ಶಿಬಿರಗಳ ಜೊತೆಗೆ, ರಿಲಯನ್ಸ್ ಫೌಂಡೇಶನ್ ತಕ್ಷಣದ ಪರಿಹಾರವನ್ನು ಒದಗಿಸಲು ಪಡಿತರ ಮತ್ತು ಆರೋಗ್ಯ ಅಗತ್ಯಗಳಿಗಾಗಿ ಕಿಟ್‌ಗಳನ್ನು ವಿತರಿಸುತ್ತಿದೆ. ಇದುವರೆಗೆ 5 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಕಿಟ್ ನೀಡಲಾಗಿದೆ. ಕಛರ್ ಜಿಲ್ಲೆಯ ಸಿಲ್ಚಾರ್, ಕಲೇನ್, ಬೋರ್ಖೋಲಾ ಮತ್ತು ಕಟಿಗೋರ್ಹ್ ಬ್ಲಾಕ್‌ಗಳಲ್ಲಿ ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಶನ್ ಸಹಾಯವನ್ನು ವಿಸ್ತರಿಸುತ್ತಿದೆ. ಇದೇ ವೇಳೆ, ನಾಗಾಂವ್ ಜಿಲ್ಲೆಯ ಕಥಿಯಾಟೋಲಿ, ರಾಹಾ, ನಾಗಾಂವ್ ಸದರ್ ಮತ್ತು ಕಂಪುರ್ ಬ್ಲಾಕ್‌ಗಳಲ್ಲಿಯೂ ಪರಿಹಾರ ಕಾರ್ಯ ನಡೆಯುತ್ತಿದೆ.
ನಂ.1 ಪಟ್ಟದಲ್ಲಿ ಮುಖೇಶ್​ ಅಂಬಾನಿ
ರಿಲಯನ್ಸ್ (Reliance)​ ಈ ಹೆಸರು ಕೇಳಿದರೆ ಸಾಕು ಎಲ್ಲರಿಗೂ ಥಟ್​ ಅಂತ ಮುಖೇಶ್​ ಅಂಬಾನಿ (Mukesh Ambani) ನೆನಪಾಗುತ್ತಾರೆ. ಅಷ್ಟರ ಮಟ್ಟಿಗೆ ಮುಖೇಶ್​ ಅಂಬಾನಿ ಈ ಸಂಸ್ಥೆಗಾಗಿ ಶ್ರಮ ಪಟ್ಟಿದ್ದಾರೆ. ಏಷ್ಯಾ (Asia) ದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್​ ಅಂಬಾನಿ ನಂಬರ್​ ಒನ್​ ಸ್ಥಾನದಲ್ಲಿದ್ದಾರೆ. ಈ ವರ್ಷವೂ ರಿಲಯನ್ಸ್ ಇಂಡಸ್ಟ್ರೀಸ್ (Reliance Industry) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿ (Asia’s Richest Person) ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಮರಳಿ ಪಡೆದಿದ್ದಾರೆ. ಅಂಬಾನಿ ಅಬ್ಬರಕ್ಕೆ ಉಳಿದ ಬ್ಯುಸಿನೆಸ್ (Business) ಮ್ಯಾನ್​ಗಳು ಸೈಲೆಂಟ್ (Silent)​ ಆಗಿದ್ದಾರೆ. ಕಳೆದ ಬಾರಿ ಭಾರತ ಹಾಗೂ ಏಷ್ಯಾದ ನಂ. 1 ಶ್ರೀಮಂತನ ಸ್ಥಾನವನ್ನು ಗೌತಮ್​ ಅದಾನಿ ಪಡೆದುಕೊಂಡಿದ್ದರು. ಇದೀಗ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಅಧ್ಯಕ್ಷ ಮುಕೇಶ್ ಅಂಬಾನಿ, ಗೌತಮ್‌ ಅದಾನಿ (Gautam Adani) ಯಿಂದ ಮತ್ತೆ ಈ ಪಟ್ಟವನ್ನು ಕಸಿದುಕೊಂಡಿದ್ದಾರೆ. ಮತ್ತೆ ನಂಬರ್​ ಒನ್​ ಪಟ್ಟವನ್ನು ರಿಲಯನ್ಸ್​ ದಿಗ್ಗಜ ಪಡೆದುಕೊಂಡಿದ್ದಾರೆ.
ಮತ್ತೆ ನಂಬರ್​ ಒನ್​ ಪಟ್ಟಕ್ಕೇರಿದ ರಿಲಯನ್ಸ್​ ದಿಗ್ಗಜ!
ಕಳೆದ ಕೆಲವು ತಿಂಗಳುಗಳಿಂದ ಅದಾನಿ ಸಮೂಹದ ಷೇರುಗಳ ಭಾರೀ ಏರಿಕೆ ಕಂಡಿತ್ತು. ಹೀಗಾಗಿ ಗೌತಮ್​ ಅದಾನಿ ಮೊದಲ ಸ್ಥಾನಕ್ಕೇರಿದ್ದರು. ಆದರೆ ಇದೀಗ ಎಂಎಸ್‌ಸಿಐ (ಮಾರ್ಗನ್ ಸ್ಟಾನ್ಲಿ ಕ್ಯಾಪಿಟಲ್ ಇಂಟರ್ನ್ಯಾಷನಲ್) ಇಂಡಿಯಾ ಇಂಡೆಕ್ಸ್‌ ಅದಾನಿ ಷೇರುಗಳ ಬಗೆಗಿನ ನಿಲುವು ಬದಲಿಸುತ್ತಿದ್ದಂತೆ ಕಂಪನಿಯ ಷೇರುಗಳು ಒಂದೇ ಸಮನೆ ನೆಲಕಚ್ಚುತ್ತಿವೆ. ಹೀಗಾಗಿ ಅವರು ಏಷ್ಯಾ ಹಾಗೂ ಭಾರತದ ನಂ.1 ಶ್ರೀಮಂತನ ಪಟ್ಟದಿಂದ ಕೆಳಗಿಳಿದಿದ್ದಾರೆ. ನಂಬರ್​ ಒನ್​ ಸ್ಥಾನವನ್ನು ಮತ್ತೆ ಮುಖೇಶ್​ ಅಂಬಾನಿ ಅಲಂಕರಿಸಿದ್ದಾರೆ.
$99.7 ಬಿಲಿಯನ್ ನಿವ್ವಳ ಮೌಲ್ಯ ಹೊಂದಿರುವ ಅಂಬಾನಿ!
ವಿಶ್ವದ ಶ್ರೀಮಂತರಲ್ಲಿ 8ನೇ ಸ್ಥಾನದಿಂದ ಭಾರತೀಯ ಕೈಗಾರಿಕೋದ್ಯಮಿ ಗೌತಮ್ ಅದಾನಿಯನ್ನು ಕೆಳಗಿಳಿಸಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ ಅಂಬಾನಿ $99.7 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
$98.7-ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ, ಅದಾನಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಳೆದ 24 ಗಂಟೆಗಳಲ್ಲಿ ಬ್ಲೂಮ್‌ಬರ್ಗ್‌ನ ಬಿಲಿಯನೇರ್ಸ್ ಇಂಡೆಕ್ಸ್ ಪ್ರತಿ ಬಿಲಿಯನೇರ್‌ನ ನಿವ್ವಳ ಮೌಲ್ಯವನ್ನು ನೋಡುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾ ಅಧ್ಯಕ್ಷ ಪುಟಿನ್ ಆಯಸ್ಸು ಇನ್ನೆರಡು ವರ್ಷವೂ ಇಲ್ಲ;

Tue Jun 28 , 2022
ಮಾಸ್ಕೋ, ಜೂನ್ 28: ಹಠ ಹಿಡಿದು ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆರೋಗ್ಯದ ಬಗ್ಗೆ ಈಗಾಗಲೇ ಬಹಳಷ್ಟು ಸುದ್ದಿಗಳು ಬಂದು ಹೋಗಿವೆ. ಪುಟಿನ್‌ಗೆ ಯುದ್ಧೋನ್ಮಾದದ ಜೊತೆಗೆ ದೈಹಿಕ ಕಾಯಿಲೆ, ಮಾನಸಿಕ ಕಾಯಿಲೆಗಳು ಅಂಟಿಕೊಂಡು ರೋಗಗ್ರಸ್ತ ದೈಹಿಕ ಮತ್ತು ಮಾನಸಿಕ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದ ಬಹಳಷ್ಟು ವರದಿಗಳು ಬಂದಿವೆ. ಅಮೆರಿಕದ ಗುಪ್ತಚರರು ಮತ್ತು ರಷ್ಯಾದ ಮಾಜಿ ಗುಪ್ತಚರರು ನೀಡಿರುವ ಮಾಹಿತಿಯನ್ನಾಧರಿಸಿ ಈ ಸುದ್ದಿಗಳು ಹರಿದಾಡುತ್ತಿರುವುದುಂಟು. ಇದು […]

Advertisement

Wordpress Social Share Plugin powered by Ultimatelysocial