ಸ್ಯಾಂಡಲ್ವುಡ್ನ ಹಲವು ತಾರೆಯರು ಕಿರುತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಈಗ ಸ್ಪರ್ಶ ರೇಖಾ ಕಿರುತೆರೆಯತ್ತ ಹೆಜ್ಜೆ ಹಾಕಿದ್ದು, ಸದ್ಯದಲ್ಲೇ ಆರಂಭವಾಗಲಿರುವ ‘ತ್ರಿಪುರ ಸುಂದರಿ’ ಸೀರಿಯಲ್ನಲ್ಲಿ ಪ್ರಮುಖ ಪಾತ್ರವೊಂದನ್ನು ಪೋಷಿಸಲಿದ್ದಾರೆ.‘ಸ್ಪರ್ಶ’, ‘ಮೆಜೆಸ್ಟಿಕ್’ ಸಿನಿಮಾಗಳ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದ ರೇಖಾ ಮದುವೆ ಮಾಡಿಕೊಂಡು ಚಿತ್ರರಂಗದಿಂದ ದೂರ ಉಳಿದಿದ್ದರು. ಕೆಲ ವರ್ಷಗಳ ಹಿಂದೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡು ನಂತರ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಈಗ ಸೀರಿಯಲ್ನಲ್ಲಿ ಒಂದು ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.ನನಗೆ ಕಾಲ್ಪನಿಕ ಕಥೆಗಳೆಂದರೆ ಬಹಳ ಅಚ್ಚುಮೆಚ್ಚು. ತ್ರಿಪುರ ಸುಂದರಿ ಸೀರಿಯಲ್ ಕಥೆ ಬಹಳ ವಿಭಿನ್ನವಾಗಿದ್ದು, ಇದುವರೆಗೂ ಇಂತಹ ಕಥೆ ಕಿರುತೆರೆಯಲ್ಲಿ ಬಂದಿಲ್ಲ. ಸೀರಿಯಲ್ಗಳು ಕಲಾವಿದರನ್ನು ಪ್ರೇಕ್ಷಕರ ಮನೆ ಮತ್ತು ಮನ ಎರಡಕ್ಕೂ ರೀಚ್ ಮಾಡಿಸುತ್ತವೆ. ಹಾಗಾಗಿ ಇದನ್ನು ಒಪ್ಪಿಕೊಂಡೆ. ಈ ಸೀರಿಯಲ್ ತಾಯಿ ಸೆಂಟಿಮೆಂಟ್ ಸುತ್ತ ಸುತ್ತುವ ಕಥೆಯನ್ನು ಹೊಂದಿದೆ’ಎಂದು ಹೇಳಿದ್ದಾರೆ ರೇಖಾ.