ವೈಭವೋಪೇತ ಒಳಾಂಗಣ ವಿನ್ಯಾಸವನ್ನೊಳಗೊಂಡಿದ್ದ ಬೋಯಿಂಗ್ ಜಂಬೋ (Boeing Jet) ಜೆಟ್ ಅನ್ನು ಇದೀಗ ಭಗ್ನಗೊಳಿಸಲಾಗುತ್ತಿದೆ ಎಂದು ವರದಿಯಾಗಿದೆ. 42 ಗಂಟೆಗಳ ಕಾಲ ಮಾತ್ರವೇ ಹಾರಾಟ ನಡೆಸಿರುವ ಈ ವಿಮಾನವನ್ನು ಸೌದಿ ರಾಜಕುಮಾರನಿಗಾಗಿ (Prince) ಖರೀದಿಸಲಾಗಿತ್ತು. ಆದರೆ ವಿಮಾನ ಕೈಸೇರುವ ಒಂದು ವರ್ಷಕ್ಕಿಂತ ಮುನ್ನವೇ ರಾಜಕುಮಾರ ಅಸುನೀಗಿದ್ದು, ಜೆಟ್ ಅನ್ನು ಖರೀದಿಸಲು ಯಾವುದೇ ಸಮರ್ಪಕ ಗ್ರಾಹಕರು (Customers) ದೊರಕದ ಹಿನ್ನಲೆಯಲ್ಲಿ ಭಗ್ನಗೊಳಿಸಲಾಗುತ್ತಿದೆ ಎಂದು ಸುದ್ದಿಪತ್ರಿಕೆಗಳು (News Paper) ವರದಿ ಮಾಡಿವೆ.
ಸೌದಿಯ ಕ್ರೌನ್ ಪ್ರಿನ್ಸ್ಗಾಗಿ ಈ ದುಬಾರಿ ವಿಮಾನವನ್ನು ಆರ್ಡರ್ ಮಾಡಲಾಗಿತ್ತು. ಈ ವಿಮಾನದ ಒಳಾಂಗಣ ವಿನ್ಯಾಸವನ್ನು ಐಷಾರಾಮಿಯಾಗಿ ಹಾಗೂ ವೈಭಪೋತವಾಗಿ ನಿರ್ಮಿಸಲಾಗಿತ್ತು ಎಂದು ತಿಳಿದು ಬಂದಿದೆ. ವಿಮಾನದ ಬೆಲೆಯನ್ನು $95 ಮಿಲಿಯನ್ಗೆ ಕಡಿತಗೊಳಿಸಲಾಗಿದ್ದರೂ ಖರೀದಿಸಲು ಯಾವುದೇ ಗ್ರಾಹಕರು ದೊರೆಯದೇ ಇದ್ದ ಕಾರಣ ಬೋಯಿಂಗ್ 747-8 ಅನ್ನು ಅರಿಜೋನಾದ ಪಿನಾಲ್ ಏರ್ಪಾರ್ಕ್ನಲ್ಲಿ ಭಗ್ನಗೊಳಿಸುವ ನಿರ್ಧಾರಕ್ಕೆ ಸಂಸ್ಥೆ ಬಂದಿದೆ ಎಂದು ಜರ್ಮನಿಯ ಏರೋ ಟೆಲಿಗ್ರಾಫ್ ವರದಿ ಮಾಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…