95 ಮಿಲಿಯನ್​ ಮೌಲ್ಯದ ಜೆಟ್​ ಗುಜುರಿಗೆ, ಜಸ್ಟ್​ 48 ಗಂಟೆ ಹಾರಾಡಿದ ವಿಮಾನ ಕೊಳ್ಳೋರೆ ಇಲ್ಲ

ವೈಭವೋಪೇತ ಒಳಾಂಗಣ ವಿನ್ಯಾಸವನ್ನೊಳಗೊಂಡಿದ್ದ ಬೋಯಿಂಗ್ ಜಂಬೋ (Boeing Jet) ಜೆಟ್ ಅನ್ನು ಇದೀಗ ಭಗ್ನಗೊಳಿಸಲಾಗುತ್ತಿದೆ ಎಂದು ವರದಿಯಾಗಿದೆ. 42 ಗಂಟೆಗಳ ಕಾಲ ಮಾತ್ರವೇ ಹಾರಾಟ ನಡೆಸಿರುವ ಈ ವಿಮಾನವನ್ನು ಸೌದಿ ರಾಜಕುಮಾರನಿಗಾಗಿ (Prince) ಖರೀದಿಸಲಾಗಿತ್ತು. ಆದರೆ ವಿಮಾನ ಕೈಸೇರುವ ಒಂದು ವರ್ಷಕ್ಕಿಂತ ಮುನ್ನವೇ ರಾಜಕುಮಾರ ಅಸುನೀಗಿದ್ದು, ಜೆಟ್ ಅನ್ನು ಖರೀದಿಸಲು ಯಾವುದೇ ಸಮರ್ಪಕ ಗ್ರಾಹಕರು (Customers) ದೊರಕದ ಹಿನ್ನಲೆಯಲ್ಲಿ ಭಗ್ನಗೊಳಿಸಲಾಗುತ್ತಿದೆ ಎಂದು ಸುದ್ದಿಪತ್ರಿಕೆಗಳು (News Paper) ವರದಿ ಮಾಡಿವೆ.
ಸೌದಿಯ ಕ್ರೌನ್ ಪ್ರಿನ್ಸ್‌ಗಾಗಿ ಈ ದುಬಾರಿ ವಿಮಾನವನ್ನು ಆರ್ಡರ್ ಮಾಡಲಾಗಿತ್ತು.  ಈ ವಿಮಾನದ ಒಳಾಂಗಣ ವಿನ್ಯಾಸವನ್ನು ಐಷಾರಾಮಿಯಾಗಿ ಹಾಗೂ ವೈಭಪೋತವಾಗಿ ನಿರ್ಮಿಸಲಾಗಿತ್ತು ಎಂದು ತಿಳಿದು ಬಂದಿದೆ. ವಿಮಾನದ ಬೆಲೆಯನ್ನು $95 ಮಿಲಿಯನ್‌ಗೆ ಕಡಿತಗೊಳಿಸಲಾಗಿದ್ದರೂ ಖರೀದಿಸಲು ಯಾವುದೇ ಗ್ರಾಹಕರು ದೊರೆಯದೇ ಇದ್ದ ಕಾರಣ ಬೋಯಿಂಗ್ 747-8 ಅನ್ನು ಅರಿಜೋನಾದ ಪಿನಾಲ್ ಏರ್‌ಪಾರ್ಕ್‌ನಲ್ಲಿ ಭಗ್ನಗೊಳಿಸುವ ನಿರ್ಧಾರಕ್ಕೆ ಸಂಸ್ಥೆ ಬಂದಿದೆ ಎಂದು ಜರ್ಮನಿಯ ಏರೋ ಟೆಲಿಗ್ರಾಫ್ ವರದಿ ಮಾಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ದಲಿತ ಮಹಿಳಾ ಅಧಿಕಾರಿಗೆ ಅವಮಾನ ಮಾಡಿದ ಪ್ರಭಾಕರ ಕೋರೆಗೆ ಸೂಕ್ತ ಕ್ರಮ ಜರಗಿಸಿ: ಸುಬಾಷ ಘೋಡಕೆ.

Thu Dec 29 , 2022
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿಯಾದ ವಿದ್ಯಾವತಿ ಭಜಂತ್ರಿ ಮಹಿಳಾ ಅಧಿಕಾರಿ, ದಲಿತ ಮಹಿಳೆ ಇವರಿಗೆ ವಿನಾಕಾರಣ ಅವಮಾನ ಮಾಡಿದ ಪ್ರಭಾಕರ ಕೋರೆ ಇವರ ಮೇಲೆ ಕ್ರಮ ಜರುಗಿಸಬೇಕು ಎಂದು ಆಕ್ರೋಶ. ಬೆಳಗಾವಿ ಕನ್ನಡ ಭವನ ಉದ್ಘಾಟನೆ ಸಮಾರಂಭದಲ್ಲಿ ಕಟ್ಟಡದ ವೀಕ್ಷಣೆ ಮಾಡುವ ವೇಳೆ ಅನುದಾನದ ಲೆಕ್ಕ ಸರಿನೀಡಿಲ್ಲ ಎಂದು ಕೋರೆ ನುಡಿದಿದ್ದಾರೇ. ಶ್ರೀಮತಿ ವಿದ್ಯಾವತಿ ಇವರು ಈ ಕಟ್ಟಡವನ್ನು ನಮ್ಮ ಇಲಾಖೆಗೆ ಬಿಟ್ಟುಕೊಡಿ ನಾವು ನಮ್ಮ ಇಲಾಖೆಯಿಂದ ಕೊಟ್ಯಾಂತರ […]

Advertisement

Wordpress Social Share Plugin powered by Ultimatelysocial