ಕಾಲು ಜಾರಿ ಆಳವಾದ ಪ್ರಪಾತಕ್ಕೆ ಬಿದ್ದ ಯೋಧರು:

ಶ್ರೀನಗರ: ಒಬ್ಬರು ಜೂನಿಯರ್ ಕಮಿಷನ್ಡ್ ಅಧಿಕಾರಿ (ಜೆಸಿಒ) ಸೇರಿದಂತೆ ಮೂವರು ಯೋಧರು ಆಳವಾದ ಪ್ರಪಾತಕ್ಕೆ ಜಾರಿ ಬಿದ್ದು ಮೃತಪಟ್ಟ ದಾರುಣ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಗಸ್ತು ತಿರುಗುವ ಸಂದರ್ಭದಲ್ಲಿ ಮೂವರೂ ಆಳವಾದ ಕಂದರಕ್ಕೆ ಜಾರಿ ಬಿದ್ದಿದ್ದಾರೆ ಎಂದು ಭಾರತೀಯ ಸೇನೆ ಬುಧವಾರ ತಿಳಿಸಿದೆ. ಮಚ್ಲಿ ವಲಯದಲ್ಲಿ ಜೆಸಿಒ ಹಾಗೂ ಇಬ್ಬರು ಬೇರೆ ಶ್ರೇಣಿಯ ಸೈನಿಕರು ದೈನಂದಿನ ಗಸ್ತು ಚಟುವಟಿಕೆ ನಡೆಸುತ್ತಿದ್ದರು. ಆಗ ಮೂವರೂ ಜಾರಿ ಕಂದರಕ್ಕೆ ಬಿದ್ದಿದ್ದಾರೆ ಎಂದು ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ. “ಮುಂಚೂಣಿ ಪ್ರದೇಶದಲ್ಲಿ ದೈನಂದಿನ ಗಸ್ತು ಪಹರೆ ಕಾರ್ಯ ನಡೆಸುತ್ತಿದ್ದ ವೇಳೆ ಒಬ್ಬರು ಜೆಸಿಒ ಮತ್ತು ಒಬ್ಬರು ಓಆರ್‌ಗಳು ಆಳವಾದ ಕಂದರಕ್ಕೆ ಜಾರಿದ್ದಾರೆ. ದಾರಿಯ ನಡುವೆ ಹಿಮ ತುಂಬಿಕೊಂಡಿದ್ದರಿಂದ ಈ ಅವಘಡ ಸಂಭವಿಸಿದೆ. ಮೂವರು ಹುತಾತ್ಮ ಯೋಧರ ಮೃತದೇಹಗಳನ್ನು ಪತ್ತೆ ಮಾಡಿ, ವಶಕ್ಕೆ ಪಡೆದುಕೊಳ್ಳಲಾಗಿದೆ” ಎಂದು ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಟ್ವೀಟ್ ಮಾಡಿದೆ.
ಮಂಗಳವಾರ ಸಂಜೆ 5.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಸೈನಿಕ ತಂಡವೊಂದು ಆಗ ಎಂದಿನಂತೆ ಕಾರ್ಯಾಚರಣೆಯ ಹೊಣೆ ನಿಭಾಯಿಸುತ್ತಿತ್ತು. ಬಹಳ ಕಿರಿದಾದ ದಾರಿಯಲ್ಲಿ ಹಿಮ ಆಚರಿಸಿತ್ತು. ಅದರ ಮೇಲಿನಿಂದ ಸಾಗುವಾಗ ಅವರ ಕಾಲು ಜಾರಿದೆ. ಸಮೀಪದ ನೆಲೆಯಲ್ಲಿದ್ದ ಸೇನಾ ಪಡೆಗಳು ತಕ್ಷಣವೇ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು ಎಂದು ವಕ್ತಾರರು ತಿಳಿಸಿದ್ದಾರೆ.ಪ್ರತಿಕೂಲ ವಾತಾವರಣ ಸನ್ನಿವೇಶ ಮತ್ತು ಕಠಿಣ ಪ್ರಾದೇಶಿಕ ರಚನೆಯ ನಡುವೆಯೂ ನಿರಂತರವಾಗಿ ನಡೆದ ಹುಡುಕಾಟ ಕಾರ್ಯದಿಂದಾಗಿ ಬೆಳಗಿನ ಜಾವ 4.15 ರಿಂದ 4.45ರ ನಡುವೆ ಮೂವರು ಕೆಚ್ಚೆದೆಯ ಯೋಧರ ಮೃತದೇಹಗಳನ್ನು ಪತ್ತೆ ಮಾಡುವುದು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಹುತಾತ್ಮ ಯೋಧರನ್ನು ನೈಬ್ ಸುಬೇದಾರ್ ಪುರುಷೋತ್ತಮ್ ಕುಮಾರ್ (43), ಹವಾಲ್ದಾರ್ ಅಮ್ರಿಕ್ ಸಿಂಗ್ (39) ಮತ್ತು ಸಿಪಾಯಿ ಅಮಿತ್ ಶರ್ಮಾ (23) ಎಂದು ಗುರುತಿಸಲಾಗಿದೆ. ಪುರುಷೋತ್ತಮ್ ಅವರು ಜಮ್ಮು ಮತ್ತು ಕಾಶ್ಮೀರದ ಬಿಶ್ನಾಹ್ ಪ್ರದೇಶ ಮೂಲದವರು. 1996ರಲ್ಲಿ ಸೇನೆ ಸೇರ್ಪಡೆಯಾಗಿದ್ದ ಅವರು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಮಾರಸ್ವಾಮಿ ಆರೋಪ.

Wed Jan 11 , 2023
ಬುಧವಾರ ಜಿಲ್ಲೆಯ ಸೇಡಂ ತಾಲೂಕಿನ ನಿಡಗುಂದಾ ಗ್ರಾಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ. ಪವಿತ್ರ ಕೇಸರಿ ಬಟ್ಟೆ ಹಾಕಿ,ಅದರ ಪಾವಿತ್ರ್ಯತೆ ಹಾಳು ಮಾಡುತ್ತಿದ್ದು,ಇಂತವರು ದೇಶಕ್ಕೆ ಉಪದೇಶ ಮಾಡಲು ಹೊರಟಿದ್ದಾರೆ ಎಂದು ಟೀಕೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಪೊಲೀಸರಿಗೆ ಮಾಹಿತಿ ನಡೆದಿದ್ದ ಸ್ಯಾಂಟ್ರೋ ರವಿ, ತನ್ನನ್ನು ತಾನು ಬಿಜೆಪಿ ಕಾರ್ಯಕರ್ತ ಹೇಳಿದ್ದು, ಹಲವಾರು ಟ್ರಾನ್ಸ್ ಫರ್ ಮಾಡಿಸಿಕೊಟ್ಟಿದ್ದಾಗಿ ಹೇಳಿದ್ದಾನೆ. ಬಿಜೆಪಿಯವರು ಒಂದು ವಷ೯ದಿಂದ ಅವನನ್ನು ಬಿಟ್ಟು, ಇವಾಗ […]

Advertisement

Wordpress Social Share Plugin powered by Ultimatelysocial