ಬದುಕಿನಲ್ಲಿ ದೈವಭಕ್ತಿಗೆ ಮಹತ್ವದ ಪಾತ್ರವಿದೆ: ಅಶ್ವತ್ಥ ನಾರಾಯಣ

ಬೆಂಗಳೂರು: ಅನೇಕ ಸವಾಲು ಮತ್ತು ಜಟಿಲತೆಗಳಿಂದ ಹೊರಬರುವಲ್ಲಿ ಅಂತರಂಗ ಶುದ್ಧಿಯಿಂದ ಕೂಡಿದ ದೈವಭಕ್ತಿಗೆ ಮಹತ್ವದ ಪಾತ್ರ ಇದೆ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಮಲ್ಲೇಶ್ವರಂ ಕ್ಷೇತ್ರದ ವ್ಯಾಪ್ತಿಯ ಸುಬೇದಾರ್ ಪಾಳ್ಯದಲ್ಲಿ ಇರುವ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಚೆನ್ನೈನ ಓಂಶಕ್ತಿ ದೇವಸ್ಥಾನಕ್ಕೆ ತೆರಳುವ ಮಹಿಳೆಯರಿಗೆ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನುಷ್ಯನ ಬದುಕು ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ. ಕೆಲವೊಮ್ಮೆ ನಮಗೆ ಆತ್ಮವಿಶ್ವಾಸದ ಕೊರತೆ ಕಾಡುತ್ತದೆ. ಅಂತಹ ಸಂದರ್ಭಗಳಲ್ಲಿ ಭಕ್ತಿಯು ನಮ್ಮ ಕೈ ಹಿಡಿಯುತ್ತದೆ ಎಂದರು.

ನಂಬಿಕೆಗಳೇ ಬದುಕಿನ ಆಧಾರಸ್ತಂಭಗಳಾಗಿವೆ. ಆದ್ದರಿಂದ ಪುರುಷಪ್ರಯತ್ನ, ಅದೃಷ್ಟ ಇವುಗಳ ಜತೆಗೆ ಲೋಕಹಿತವನ್ನು ಬಯಸುವ ದೈವಿಕ ಶ್ರದ್ಧೆಯೂ ನಮಗೆ ಬೇಕಾಗುತ್ತದೆ. ಇದೇ ನಮ್ಮ ನೆಮ್ಮದಿಯ ಮೂಲವಾಗಿದೆ ಎಂದು ಅವರು ನುಡಿದರು.

ಮನುಷ್ಯ ವಿಜ್ಞಾನ, ತಂತ್ರಜ್ಞಾನ, ವೈಚಾರಿಕತೆ ಇತ್ಯಾದಿಗಳಲ್ಲಿ ಎಷ್ಟೇ ಮುಂದುವರಿದಿರಬಹುದು. ಆದರೆ, ಭಕ್ತಿಯ ಪ್ರಭಾವ ನಮ್ಮ ಸಮಾಜ ಮತ್ತು ಸಂಸ್ಕೃತಿಗಳಲ್ಲಿ ಹಾಸು ಹೊಕ್ಕಾಗಿದೆ. ಇದು ಆತ್ಮಾವಲೋಕನಕ್ಕೆ ಪ್ರೇರಣೆ ನೀಡುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಪಾಲಿಕೆ ಮಾಜಿ ಸದಸ್ಯ ಜಯಪಾಲ್ ಸೇರಿದಂತೆ ಇತರರು ಇದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಗಾಲಿ ಜನಾರ್ಧನ ರೆಡ್ಡಿ ಹೊಸ ಪಕ್ಷ ಕಟ್ಟಿ ರಾಜಕೀಯದಲ್ಲಿ 2ನೇ ಇ ನಿಂಗ್ಸ್ ಶುರುಮಾಡಿದ್ದಾರೆ.

Sat Jan 7 , 2023
ಆ ನಿಟ್ಟಿನಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್‌ ನೀಡಿರುವ ಗಣಿದಣಿ,ಇಂದು ಭತ್ತನಾಡಿನಲ್ಲಿ ಪೊಲಿಟಿಕಲ್ ರೌಂಡ್ಸ್ ನಡೆಸಿದ್ದಾರೆ.ಅ ಷ್ಟೇ ಅಲ್ಲದೆ ಮೂರು ಪಕ್ಷಗಳ ಮೂರನೇ ಹಂತದ ಕಾರ್ಯಕರ್ತರನ್ನ ತನ್ನ ಹೊ ಸ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.ಈ ಕುರಿತಾದ ಒಂದು ಕಂಪ್ಲೀಟ್ ರಿ ಪೋರ್ಟ್ ಇಲ್ಲಿದೆ ನೋಡಿ….ಭತ್ತದ ನಾಡಿನಲ್ಲಿ ‌ಕಲ್ಯಾಣ ರಾಜ್ಯದ ಪಕ್ಷದ‌‌‌ ಮೊದಲ ಬಹಿರಂಗ ಸಭೆ…!ಸಿಂಧನೂರಿನಲ್ಲಿ ರೋಡ್ ಶೋ ನಡೆಸಿ ಗಣಿದಣಿ ಶಕ್ತಿ‌ ಪ್ರದರ್ಶನ…!ಪುತ್ರಿಯನ್ನ ರಾಜಕೀಯಕ್ಕೆ ಕರೆತರುವ ಸುಳಿವು ಬಿಟ್ಟು ಕೊಟ್ಟ ರೆಡ್ಡಿ…!ವಾ […]

Advertisement

Wordpress Social Share Plugin powered by Ultimatelysocial