ಜೀವಂತ ಇರುವವರನ್ನು ಮಾತನಾಡಿಸಿ, ನಾನು ಜೀವಂತ ಇಲ್ಲ: ರಮೇಶ್‌ ಕುಮಾರ್‌ ಬೇಸರ

ತಾವಾಡಿದ ಮಾತುಗಳು ರಾಷ್ಟ್ರಾದ್ಯಂತ ಪ್ರತಿಧ್ವನಿಸಿ ಚರ್ಚೆಗೆ ಕಾರಣವಾದ ಹಿನ್ನೆಲೆಯಲ್ಲಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಮಾಧ್ಯಮಗಳ ಮೇಲೆ ಸಿಟ್ಟಾಗಿದ್ದಾರೆ. ಅವರ ಕೋಪ ಇನ್ನೂ ತಣ್ಣಿದಿಲ್ಲ.ಸುವರ್ಣಸೌಧಕ್ಕೆ ಬಂದ ಅವರನ್ನು ಎಂಇಎಸ್‌ ಪುಂಡಾಟಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ಕೇಳಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು, ಮಾಧ್ಯಮಗಳ ಮುಂದೆ ಬಂದು ಅವರು ಕೈ ಮುಗಿದು ಒಳ ಹೋದರು.ಈ ಸಂದರ್ಭದಲ್ಲಿ ಅವರು ‘ ಜೀವಂತ ಇರುವವರನ್ನು ಮಾತನಾಡಿಸಿ, ನಾನು ಜೀವಂತ ಇಲ್ಲ. ನಾಲ್ಕುದಿನಗಳ ಹಿಂದೆಯೇ ಸತ್ತು ಹೋಗಿದ್ದೇನೆ’ ಎಂದರು.ಯಾವುದೇ ಪ್ರಚಲಿತ ವಿಷಯಗಳ ಬಗ್ಗೆ ಉತ್ಸಾಹದಿಂದ ಪ್ರತಿಕ್ರಿಯೆ ನೀಡುತ್ತಿದ್ದ ಅವರು ಈ ರೀತಿ ಮಾತನಾಡಿದ್ದು ಆಶ್ಚರ್ಯ ಉಂಟು ಮಾಡಿತು. ಇದು ಮಾಧ್ಯಮಗಳ ಮೇಲೆ ಅವರಿಗೆ ಉಂಟಾಗಿರುವ ಸಿಟ್ಟಿನ ಸಂಕೇತವೂ ಆಗಿರಬಹುದು ಎಂದು ಹೇಳಲಾಗುತ್ತಿದೆ.ಸದನದಲ್ಲಿ ಬೆಳೆವಿಮೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಅವರಾಡಿದ ಮಾತುಗಳು ಸಂವೇದನಾಶೀಲರ ಸಿಟ್ಟಿಗೆ ಕಾರಣವಾಗಿತ್ತು. ಪಕ್ಷಬೇಧವಿಲ್ಲದೇ ಎಲ್ಲರೂ ಆ ಮಾತುಗಳನ್ನು ಖಂಡಿಸಿದ್ದರು. ಇದರಿಂದ ಕಾಂಗ್ರೆಸ್‌ ಕೂಡ ಮುಜುಗರಕ್ಕೆ ಒಳಗಾಗುವ ಸ್ಥಿತಿ ನಿರ್ಮಾಣವಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಗಡಿಯ ಚಿಲುಮೆ ಮಠದ ಬಸವಲಿಂಗ ಶ್ರೀಗಳ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

Mon Dec 20 , 2021
ಮಾಗಡಿಯ ಚಿಲುಮೆ ಮಠದ ಬಸವಲಿಂಗ ಶ್ರೀಗಳ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ವಾಮೀಜಿಯ ಅನುಮಾನಾಸ್ಪ ಸಾವು ಭಕ್ತರಲ್ಲಿ ಆತಂಕ ಮೂಡಿಸಿದೆ.ರಾಮನಗರ ಜಿಲ್ಲೆ ಮಾಗಡಿಯ ಸೋಲೂರು ಬಳಿಯಿರುವ ಚಿಲುಮೆ ಮಠದ ಆವರಣದಲ್ಲಿ ನೇಣು ಬಿಗಿದ ರೀತಿಯಲ್ಲಿ ಸ್ವಾಮೀಜಿ ಶವ ಪತ್ತೆಯಾಗಿದೆ.ಸ್ಥಳಕ್ಕೆ ವಿವಿಧ ಮಠದ ಶ್ರೀಗಳು ಆಗಮಿಸುತ್ತಿದ್ದಾರೆ.ರಾಮನಗರ ಜಿಲ್ಲೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ […]

Advertisement

Wordpress Social Share Plugin powered by Ultimatelysocial