ಮೂತ್ರ ಪರೀಕ್ಷೆ ಮೂಲಕ ಪತ್ತೆ ಮಾಡಬಹುದು ಬ್ರೈನ್ ಟ್ಯೂಮರ್:

ವಿಜ್ಞಾನಿಗಳು ಮಾನವನ ಮೂತ್ರದಲ್ಲಿನ ಪ್ರಮುಖ ಪೊರೆಯ ಪ್ರೋಟೀನ್ ಅನ್ನು ಗುರುತಿಸಲು ಬಹಳ ವಿಶೇಷವಾದ ಮತ್ತು ಹೊಸ ಸಾಧನವನ್ನು ಬಳಸಿದ್ದಾರೆ. ಅದು ರೋಗಿಯ ಮೆದುಳಿನಲ್ಲಿ ಗೆಡ್ಡೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಮಾಡಬಲ್ಲದು.ಮೆಂಬರೇನ್ ಪ್ರೊಟೀನ್‌ಗಳು, ಬಯೋಮೆಂಬರೇನ್‌ಗಳನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿರುವ ಪ್ರೋಟೀನ್‌ಗಳಾಗಿವೆ.

ಮೆದುಳಿನ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ಬಳಸಲಾಗುವ ಪ್ರೊಟೀನ್ ಗೆಡ್ಡೆಗಳನ್ನು ಕಂಡುಹಿಡಿಯಲು ಆಕ್ರಮಣಕಾರಿ ಪರೀಕ್ಷೆಗಳ ಅಗತ್ಯವನ್ನು ಈ ಹೊಸ ಆವಿಷ್ಕಾರ ಕಡಿಮೆ ಮಾಡುತ್ತದೆ.

ಆರಂಭಿಕ ಹಂತದಲ್ಲಿ ಗೆಡ್ಡೆಗಳನ್ನು ಪತ್ತೆ ಹಚ್ಚುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಅವುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕುವುದು ಕೂಡ ಸುಲಭವಾಗುತ್ತದೆ. ಜಪಾನ್‌ನ ನಗೋಯಾ ವಿಶ್ವವಿದ್ಯಾನಿಲಯದ ಈ ಸಂಶೋಧನೆಯು ಇತರ ರೀತಿಯ ಕ್ಯಾನ್ಸರ್ ಪತ್ತೆಗೆ ಸಂಭಾವ್ಯ ಪರಿಣಾಮಗಳನ್ನು ಹೊಂದಿರಬಹುದು ಎಂದು ಅಧ್ಯಯನವು ಹೇಳುತ್ತದೆ. ಈ ಅಧ್ಯಯನವನ್ನು ‘ಎಸಿಎಸ್ ನ್ಯಾನೋ’ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಕ್ಯಾನ್ಸರ್ ರೋಗಿಗಳ ಬದುಕುಳಿಯುವ ಸಾಧ್ಯತೆ ಹೆಚ್ಚಿದೆ ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಕ್ಯಾನ್ಸರ್‌ಗಳನ್ನು ಆರಂಭದಲ್ಲೇ ಪತ್ತೆ ಮಾಡುವುದರಿಂದ ರೋಗಿಗಳು ಬದುಕುಳಿಯುವ ಸಾಧ್ಯತೆಗಳು ಹೆಚ್ಚಿದೆ.

ಆದಾಗ್ಯೂ ಕಳೆದ 20 ವರ್ಷಗಳಲ್ಲಿ ಮೆದುಳಿನ ಗೆಡ್ಡೆ ಹೊಂದಿರುವವರ ಪೈಕಿ ಬದುಕುಳಿಯುವಿಕೆಯ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇದಕ್ಕೆ ಮುಖ್ಯ ಕಾರಣ ಮೆದುಳು ಕ್ಯಾನ್ಸರ್‌ ಪತ್ತೆ ತಡವಾಗುತ್ತಿದೆ. ಅಧ್ಯಯನದ ಪ್ರಕಾರ ಮೆದುಳಿನ ಗೆಡ್ಡೆಯಿಂದ ಬಳಲುತ್ತಿರುವ ವ್ಯಕ್ತಿಯ ಸಂಭವನೀಯ ಸೂಚನೆಯು ಅವರ ಮೂತ್ರದಲ್ಲಿ ಗಡ್ಡೆ-ಸಂಬಂಧಿತ ಬಾಹ್ಯಕೋಶೀಯ ಕೋಶಕಗಳ (ಇವಿ) ಉಪಸ್ಥಿತಿಯಾಗಿದೆ. EVಗಳು ಸೂಕ್ಷ್ಮ ಗಾತ್ರದ ಕೋಶಗಳಾಗಿವೆ. ಅವುಗಳು ಸೆಲ್-ಟು-ಸೆಲ್ ಸಂವಹನ ಸೇರಿದಂತೆ ಹಲವಾರು ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತವೆ. ಮೆದುಳಿನ ಕ್ಯಾನ್ಸರ್ ರೋಗಿಗಳಲ್ಲಿ ಕಂಡು ಬರುವ ಈ ಇವಿಗಳು ನಿರ್ದಿಷ್ಟ ರೀತಿಯ ಆರ್‌ಎನ್‌ಎ ಮತ್ತು ಮೆಂಬರೇನ್ ಪ್ರೋಟೀನ್‌ಗಳನ್ನು ಒಳಗೊಂಡಿರುವುದರಿಂದ, ಅವುಗಳನ್ನು ಕ್ಯಾನ್ಸರ್ ಪತ್ತೆ ಮಾಡಲು ಬಳಸಬಹುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಾವುದೇ ಚುನಾವಣೆಗಳು ನಡೆಯುವ ಮುನ್ನ ಪಕ್ಷಾಂತರ ಪರ್ವ ಆರಂಭವಾಗುತ್ತದೆ.

Sun Feb 5 , 2023
ಯಾವುದೇ ಚುನಾವಣೆಗಳು ನಡೆಯುವ ಮುನ್ನ ಪಕ್ಷಾಂತರ ಪರ್ವ ಆರಂಭವಾಗುತ್ತದೆ. ಈ ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದ್ದು, ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಇದು ಈಗಾಗಲೇ ಶುರುವಾಗಿದೆ. ಆದರೆ ಯಾವುದೇ ಒಂದು ಪಕ್ಷದಿಂದ ಆಯ್ಕೆಯಾದ ಶಾಸಕರು ಸ್ಥಾನ ಅನರ್ಹಗೊಳ್ಳುವ ಭೀತಿಯಿಂದ ಈಗಲೇ ಮತ್ತೊಂದು ಪಕ್ಷ ಸೇರ್ಪಡೆಗೊಳ್ಳಲು ಹಿಂಜರಿಯುತ್ತಾರೆ. ಆದರೆ ತಮ್ಮ ಚಟುವಟಿಕೆಗಳ ಮೂಲಕ ತಾವು ಇರುವ ಹಾಲಿ ಪಕ್ಷವನ್ನು ತೊರೆಯುವ ಇಂಗಿತ ವ್ಯಕ್ತಪಡಿಸುತ್ತಿರುತ್ತಾರೆ. ಇದೇ ರೀತಿ ಅರಸೀಕೆರೆ ಕ್ಷೇತ್ರದ ಜೆಡಿಎಸ್ […]

Advertisement

Wordpress Social Share Plugin powered by Ultimatelysocial